ತಮ್ಮ ಮಕ್ಕಳ ಹೆಸರನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಈ ಬಾಲಿವುಡ್‌ನ ಸ್ಟಾರ್ ಸೆಲೆಬ್ರಿಟಿಗಳು PHOTOS
- Bollywood Celebrities: ಅಜಯ್ ದೇವಗನ್, ರವೀನಾ ಟಂಡನ್, ಅರ್ಜುನ್ ರಾಂಪಾಲ್, ವಿಕ್ರಾಂತ್ ಮಾಸ್ಸಿ ಮತ್ತು ಇಮ್ರಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮೈಮೇಲೆ ಮಕ್ಕಳ ಹೆಸರು ಹಚ್ಚೆ ಹಾಕುವ ಮೂಲಕ ಅವರ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
- Bollywood Celebrities: ಅಜಯ್ ದೇವಗನ್, ರವೀನಾ ಟಂಡನ್, ಅರ್ಜುನ್ ರಾಂಪಾಲ್, ವಿಕ್ರಾಂತ್ ಮಾಸ್ಸಿ ಮತ್ತು ಇಮ್ರಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮೈಮೇಲೆ ಮಕ್ಕಳ ಹೆಸರು ಹಚ್ಚೆ ಹಾಕುವ ಮೂಲಕ ಅವರ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
(1 / 9)
ಪ್ರಿಯಾಂಕಾ ಚೋಪ್ರಾ 2018ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ನಿಕ್ ಜೋನಸ್ ಅವರನ್ನು ವಿವಾಹವಾದರು. ಜನವರಿ 2022ರಲ್ಲಿ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಮಾಲ್ತಿ ಮೇರಿ ಮಗುವನ್ನು ಸ್ವಾಗತಿಸಿದರು. ಮಗು ಜನಿಸಿದ ಬಳಿಕ ಪ್ರಿಯಾಂಕ ತಮ್ಮ ಬಲಗೈ ಮೇಲೆ ಮಗಳ ಮುಖವನ್ನು ಹಚ್ಚೆ ಹಾಕಿಸಿದ್ದಾರೆ.
(2 / 9)
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 2022ರ ಏಪ್ರಿಲ್‌ನಲ್ಲಿ ವಿವಾಹವಾದರು. ಅದೇ ವರ್ಷದ ನವೆಂಬರ್‌ನಲ್ಲಿ ಮಗಳು ರಾಹಾಳನ್ನು ಸ್ವಾಗತಿಸಿದರು. ಅದಾಗಿ ಕೆಲ ದಿನಕ್ಕೆ ಮಗಳ ಹೆಸರನ್ನು ಶೋಲ್ಡರ್ ಬಳಿ ಹಚ್ಚೆ ಹಾಕಿಸಿಕೊಂಡಿದ್ದಾರೆ ರಣಬೀರ್.
(3 / 9)
ಅಕ್ಷಯ್ ಕುಮಾರ್ ತಮ್ಮ ಮಗ ಆರವ್ ಹೆಸರನ್ನು ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಬಲ ಭುಜದ ಮೇಲೆ ಮಗಳು ನಿತಾರಾ ಅವರ ಹೆಸರಿನ ಟ್ಯಾಟೂ ಇದೆ. ಅಂದಹಾಗೆ ಅಕ್ಷಯ್ 2001 ರಲ್ಲಿ ಟ್ವಿಂಕಲ್ ಖನ್ನಾ ಅವರನ್ನು ವರಿಸಿದ್ದರು.
(4 / 9)
ತಮ್ಮ ಮಗಳು ಇಮಾರಾ ಅವರನ್ನು ಜಗತ್ತಿಗೆ ಸ್ವಾಗತಿಸಿದ ಸುಮಾರು ಹತ್ತು ತಿಂಗಳ ನಂತರ, ಬಾಲಿವುಡ್ ನಟ ಇಮ್ರಾನ್ ಖಾನ್, ಮಗಳ ಹೆಜ್ಜೆಗುರುತನ್ನು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
(6 / 9)
ವಿಕ್ರಾಂತ್ ಮಾಸ್ಸಿ ಮತ್ತು ಶೀತಲ್ ಠಾಕೂರ್ ಫೆಬ್ರವರಿ 14, 2022 ರಂದು ವಿವಾಹವಾದರು. ಈ ಜೋಡಿ ಇದೇ ವರ್ಷದ ಫೆಬ್ರವರಿ 7 ರಂದು ಮಗನನ್ನು ಸ್ವಾಗತಿಸಿದರು. ಮಗನ ವರ್ದಾನ್ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಈ ನಟ. ಜತೆಗೆ ಹುಟ್ಟಿದ ದಿನಾಂಕವೂ ಅದರಲ್ಲಿದೆ.
(7 / 9)
ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ಇಬ್ಬರು ಮಕ್ಕಳಾದ ರಾಶಾ ಮತ್ತು ಮಗ ರಣಬೀರ್ ವರ್ಧನ್ ಅವರ ಹೆಸರುಗಳನ್ನು ಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
(8 / 9)
ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಮಗ ಯುಗ್ ಹೆಸರಿನ ಮೊದಲ ಅಕ್ಷರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು