ಮುಂಬೈ ಇಂಡಿಯನ್ಸ್ vs ಎಸ್‌ಆರ್‌ಎಚ್; ಸಂಭಾವ್ಯ ಆಡುವ ಬಳಗ ಮತ್ತು ಇಂಪ್ಯಾಕ್ಟ್ ಆಟಗಾರರ ವಿವರ ಹೀಗಿದೆ
- Sunrisers Hyderabad vs Mumbai Indians: ಐಪಿಎಲ್ ಪ್ರಸಕ್ತ ಆವೃತ್ತಿಯಲ್ಲಿ ಸೋಲಿನ ಅಭಿಯಾನ ಆರಂಭಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು, ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಮಾರ್ಚ್ 27ರ ಬುಧವಾರ ಉಭಯ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗುತ್ತಿವೆ.
- Sunrisers Hyderabad vs Mumbai Indians: ಐಪಿಎಲ್ ಪ್ರಸಕ್ತ ಆವೃತ್ತಿಯಲ್ಲಿ ಸೋಲಿನ ಅಭಿಯಾನ ಆರಂಭಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು, ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಮಾರ್ಚ್ 27ರ ಬುಧವಾರ ಉಭಯ ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗುತ್ತಿವೆ.
(1 / 6)
ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಕೊನೆಯ ಪಂದ್ಯದಲ್ಲಿ ಎಂಐ ಹಾಗೂ ಎಸ್‌ಆರ್‌ಎಚ್ ಚೇಸಿಂಗ್‌ನಲ್ಲಿ ಕೊನೆಯ ಕ್ಷಣದವರೆಗೂ ಹೋರಾಡಿ ಅಂತಿಮ ಕ್ಷಣದಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಎಡವದಂತೆ ಎಚ್ಚರ ವಹಿಸಿವೆ. ಮಹತ್ವದ ಪಂದ್ಯಕ್ಕೆ ತಂಡಗಳ ಆಡುವ ಬಳಗ ಹೇಗಿರಲಿದೆ ಎಂಬುದನ್ನು ನೋಡೋಣ.(PTI)
(2 / 6)
ಉಭಯ ತಂಡಗಳು ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಹೀಗಾಗಿ ಅವರಿನ್ನೂ ತಂಡ ಸೇರಿಕೋಮಡಿಲ್ಲ. ಅತ್ತ ಲೆಗ್‌ಸ್ಪಿನ್ನರ್ ವನಿಂದು ಹಸರಂಗ ಇನ್ನೂ ಸನ್‌ರೈಸರ್ಸ್ ತಂಡವನ್ನು ಸೇರಿಕೊಂಡಿಲ್ಲ.(PTI)
(3 / 6)
ಎಸ್‌ಆರ್‌ಎಚ್ ಸಂಭಾವ್ಯ ತಂಡ (ಇಂಪ್ಯಾಕ್ಟ್ ಆಟಗಾರ ಸೇರಿ): ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮ್ಮಿನ್ಸ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್(PTI)
(4 / 6)
ಇಂಪ್ಯಾಕ್ಟ್ ಆಟಗಾರ: ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡವು, ಬೌಲಿಂಗ್ ಮಾಡಿದ ನಂತರ ವೇಗದ ಬೌಲರ್ ಟಿ ನಟರಾಜನ್ ಅವರ ಬದಲಿಗೆ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಮೈದಾನಕ್ಕೆ ಕರೆತಂದಿತ್ತು. ಇದು ಮುಂಬೈ ವಿರುದ್ಧವೂ ಮೂಂದುವರೆಯುವ ಸಾಧ್ಯತೆ ಇದೆ. (PTI)
(5 / 6)
ಮುಂಬೈ ಸಂಭಾವ್ಯ ತಂಡ (ಇಂಪ್ಯಾಕ್ಟ್ ಆಟಗಾರ ಸೇರಿ): ಇಶಾನ್ ಕಿಶನ್, ರೋಹಿತ್ ಶರ್ಮಾ, ನಮನ್ ಧೀರ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಜೆರಾಲ್ಡ್ ಕೊಯೆಟ್ಜಿ, ಪಿಯೂಷ್ ಚಾಲಾ, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್.(ANI)
ಇತರ ಗ್ಯಾಲರಿಗಳು