Cricket World Cup: ಪುರುಷರ ವಿಶ್ವಕಪ್‌ಗಿಂತ ಮೊದಲು ನಡೆದಿತ್ತು ಮಹಿಳಾ ವಿಶ್ವಕಪ್; ಹಲವರಿಗೆ ತಿಳಿಯದ ಸಂಗತಿ ಇಲ್ಲಿದೆ
- Cricket World Cup 50 years: ಐಸಿಸಿಯು ಕ್ರಿಕೆಟ್ ವಿಶ್ವಕಪ್‌ನ ಸುವರ್ಣ ಮಹೋತ್ಸವವನ್ನು ಸಂಭ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ವಿಶ್ವಕಪ್‌ನ 50ನೇ ವಾರ್ಷಿಕೋತ್ಸವವನ್ನು ಮಂಗಳವಾರ ಆಚರಿಸಿದೆ. ವಿಶೇಷವೆಂದರೆ ಮೊದಲ ವಿಶ್ವಕಪ್ ಕ್ರಿಕೆಟ್ ಆಡಿದ್ದು ಪುರುಷರಲ್ಲ, ಬದಲಾಗಿ ಮಹಿಳೆಯರು.
- Cricket World Cup 50 years: ಐಸಿಸಿಯು ಕ್ರಿಕೆಟ್ ವಿಶ್ವಕಪ್‌ನ ಸುವರ್ಣ ಮಹೋತ್ಸವವನ್ನು ಸಂಭ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ವಿಶ್ವಕಪ್‌ನ 50ನೇ ವಾರ್ಷಿಕೋತ್ಸವವನ್ನು ಮಂಗಳವಾರ ಆಚರಿಸಿದೆ. ವಿಶೇಷವೆಂದರೆ ಮೊದಲ ವಿಶ್ವಕಪ್ ಕ್ರಿಕೆಟ್ ಆಡಿದ್ದು ಪುರುಷರಲ್ಲ, ಬದಲಾಗಿ ಮಹಿಳೆಯರು.
(1 / 8)
1973ರ ಜೂನ್ 20ರಂದು ಇಂಗ್ಲೆಂಡ್‌ನಲ್ಲಿ ಚೊಚ್ಚಕ ಕ್ರಿಕೆಟ್ ವಿಶ್ವಕಪ್ ನಡೆಯಿತು. ಅಂದರೆ ಮಹಿಳಾ ವಿಶ್ವಕಪ್ ಆರಂಭವಾಯ್ತು. ಹೀಗಾಗಿ ಅಂತಾರಾಷ್ಟರೀಯ ಕ್ರಿಕೆಟ್ ಮಂಡಳಿಯು(ICC) ವಿಶ್ವಕಪ್ 50ನೇ ವಾರ್ಷಿಕೋತ್ಸವವನ್ನು ಜೂನ್ 20ರ ಮಂಗಳವಾರ ಆಚರಿಸಿದೆ.
(2 / 8)
ಈ ಪಂದ್ಯಾವಳಿಯನ್ನು ಇಂಗ್ಲೆಂಡ್‌ನಲ್ಲಿ 1973ರ ಜೂನ್ 20ರಿಂದ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಮೊದಲ ವಿಶ್ವಕಪ್ ಅನ್ನು ಐದು ವಾರಗಳ ಕಾಲ, ಅಂದರೆ ಜುಲೈ 28ರವರೆಗೆ ನಡೆಸಲಾಗಿತ್ತು. ಜುಲೈ 28ರಂದು ಮೊದಲ ವಿಶ್ವಕಪ್ ಫೈನಲ್ ಪಂದ್ಯ ನಡೆದು 50 ವರ್ಷಗಳು ಪೂರ್ತಿಯಾಗುತ್ತವೆ.
(3 / 8)
ಆ ಸಮಯದಲ್ಲಿ ಪ್ರಾಯೋಜಕತ್ವವಿಲ್ಲದೆ ಇಷ್ಟು ದೊಡ್ಡ ಪಂದ್ಯಾವಳಿಯ ಆಯೋಜನೆ ಸುಲಭವಾಗಿರಲ್ಲ. ಆದ್ದರಿಂದ ಬ್ರಿಟಿಷ್ ಉದ್ಯಮಿ ಸರ್ ಜ್ಯಾಕ್ ಹೇವರ್ಡ್, ಆ ಸಮಯದಲ್ಲಿ 40,000 ಪೌಂಡ್ ಪ್ರಾಯೋಜಕತ್ವದೊಂದಿಗೆ ಕ್ರಿಕೆಟ್ ವಿಶ್ವಕಪ್ ಅನ್ನು ಮೊದಲ ಬಾರಿಗೆ ನಡೆಸಿದರು.
(4 / 8)
ಈ ವಿಶ್ವಕಪ್ ಪಂದ್ಯಾವಳಿಯ ಬಳಿಕ ಮಹಿಳಾ ಮತ್ತು ಪುರುಷರ ಎರಡೂ ವಿಭಾಗಗಳಲ್ಲಿಯೂ ವಿಶ್ವಕಪ್ ನಡೆಸಲಾಗುತ್ತಿದೆ. ಸದ್ಯ ವಿಶ್ವಕಪ್‌ನ ಸುವರ್ಣ ಮಹೋತ್ಸವ ನಿಮಿತ್ತ ಐಸಿಸಿಯು ಆ ಕಾಲದ ಕ್ರೆಕಟ್ ತಾರೆಯರಿಗೆ ಸೆಲ್ಯೂಟ್ ಮಾಡಿದೆ.
(5 / 8)
ವಿಶೇಷ ಸಂದರ್ಭವನ್ನು ಆಚರಿಸಲು ಐಸಿಸಿಯು ಮೊದಲ ವಿಶ್ವಕಪ್ ಈವೆಂಟ್‌ನ ಹಲವಾರು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
(6 / 8)
ಕ್ರಿಕೆಟ್ ಜನಕ ರಾಷ್ಟ್ರ ಇಂಗ್ಲೆಂಡ್ ತಂಡವು ಚೊಚ್ಚಲ ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಫೈನಲ್ ಪಂದ್ಯವು 1973ರ ಜುಲೈ 28ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಿತು. ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾವನ್ನು 92 ರನ್‌ಗಳಿಂದ ಸೋಲಿಸಿತು. ಟ್ರೋಫಿಯನ್ನು ವಿಜೇತ ತಂಡದ ನಾಯಕಿ ರಾಚೆಲ್ ಹೇಹೋ-ಫ್ಲಿಂಟ್ ಅವರಿಗೆ ನೀಡಲಾಯಿತು.
(7 / 8)
ಪಂದ್ಯಾವಳಿಯು ಏಳು ತಂಡಗಳನ್ನು ಒಳಗೊಂಡಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್, ಅಂತರರಾಷ್ಟ್ರೀಯ XI, ಜಮೈಕಾ, ನ್ಯೂಜಿಲೆಂಡ್, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಯಂಗ್ ಇಂಗ್ಲೆಂಡ್.
ಇತರ ಗ್ಯಾಲರಿಗಳು