Jos Buttler Record: ಕಳೆದ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದರು; ಈ ಬಾರಿ ಡಕೌಟ್ ಆಗುವುದರಲ್ಲಿ ಕುಖ್ಯಾತಿ ಪಡೆದ ಜೋಸ್ಟ್ ಬಟ್ಲರ್
- ಕಳೆದ ಆವೃತ್ತಿಯಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್, ಈ ಆವೃತ್ತಿಯಲ್ಲಿ ಹೆಚ್ಚು ಬಾರಿ ಡಕೌಟ್ ಆಗುವ ಮೂಲಕ ಕುಖ್ಯಾತಿ ಪಡೆದಿದ್ದಾರೆ.
- ಕಳೆದ ಆವೃತ್ತಿಯಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್, ಈ ಆವೃತ್ತಿಯಲ್ಲಿ ಹೆಚ್ಚು ಬಾರಿ ಡಕೌಟ್ ಆಗುವ ಮೂಲಕ ಕುಖ್ಯಾತಿ ಪಡೆದಿದ್ದಾರೆ.
(1 / 6)
2022ರ ಐಪಿಎಲ್ನಲ್ಲಿ 4 ಶತಕಗಳ ಸಹಾಯದಿಂದ 863 ರನ್ ಗಳಿಸಿ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್, 2023ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ.
(2 / 6)
ಐಪಿಎಲ್ 16ರಲ್ಲಿ ಜೋಸ್ ಬಟ್ಲರ್, ಕೂಡ ನಿರಾಸೆ ಮೂಡಿಸಿದರು. ಆಡಿರುವ 14 ಪಂದ್ಯಗಳಲ್ಲಿ 392 ರನ್ ಸಿಡಿಸಿದ್ದಾರೆ. ಕಳೆದ ಪಂದ್ಯವು ಪಂಜಾಜ್ ಕಿಂಗ್ಸ್ ವಿರುದ್ಧ ಡಕೌಟ್ ಆಗಿ ಹೊರ ನಡೆದರು. ಗಮನಾರ್ಹ ಪ್ರದರ್ಶನದ ಹೊರತಾಗಿಯೂ ಕೆಟ್ಟ ದಾಖಲೆಗೂ ಒಡೆಯನಾಗಿದ್ದಾರೆ.
(3 / 6)
16ನೇ ಆವೃತ್ತಿಗೂ ಮುನ್ನ ಬಟ್ಲರ್ ಒಂದು ಬಾರಿ ಡಕೌಟ್ ಆಗಿದ್ದರು. ಅದು ಕೂಡ 2016ರಲ್ಲಿ. ಈ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ ಕೊನೆಯ 10 ಪಂದ್ಯಗಳಲ್ಲಿ ಡಕೌಟ್ಗಳ ದಾಖಲೆ ಬರೆದಿದ್ದಾರೆ.
(4 / 6)
ಪ್ರಸಕ್ತ ಆವೃತ್ತಿಯ ಐಪಿಎಲ್ನಲ್ಲಿ ತಾನಾಡಿದ 14 ಪಂದ್ಯಗಳಲ್ಲಿ ಪೈಕಿ ಒಟ್ಟು 5 ಬಾರಿ ಡಕೌಟ್ ಆಗಿದ್ದಾರೆ. ಆರಂಭಿಕ 4 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಉಳಿದ 10 ಪಂದ್ಯಗಳಲ್ಲಿ 5 ಸಲ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.
(5 / 6)
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2 ಬಾರಿ, ಗುಜರಾತ್ ಟೈಟಾನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ತಲಾ 1 ಬಾರಿ ಡಕೌಟ್ ಆಗಿದ್ದಾರೆ. 0, 40, 0, 27, 18, 8, 95, 0, 0, 0 ಇದು ಕೊನೆಯ 10 ಇನ್ನಿಂಗ್ಸ್ಗಳ ಸ್ಕೋರ್. ಅಂತಿಮ 3 ಪಂದ್ಯಗಳಲ್ಲಿ ಹ್ಯಾಟ್ರಿಕ್ ಡಕೌಟ್ ಆಗಿದ್ದಾರೆ.
ಇತರ ಗ್ಯಾಲರಿಗಳು