Virat Kohli Record: 500ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ಬರೆದ ವಿರಾಟ್ ಕೊಹ್ಲಿ; ಸಚಿನ್, ಪಾಂಟಿಂಗ್ ಸಾಲಿಗೂ ಸೇರಿದ ಕಿಂಗ್
- Virat Kohli: ತನ್ನ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆ ಮೂಲಕ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ. ಹಾಗಾದರೆ ಯಾವುದು ಆ ದಾಖಲೆಗಳು ಎಂಬುದನ್ನು ಈ ಮುಂದೆ ನೋಡೋಣ.
- Virat Kohli: ತನ್ನ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆ ಮೂಲಕ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ. ಹಾಗಾದರೆ ಯಾವುದು ಆ ದಾಖಲೆಗಳು ಎಂಬುದನ್ನು ಈ ಮುಂದೆ ನೋಡೋಣ.
(1 / 9)
ವೆಸ್ಟ್ ಇಂಡೀಸ್ ಎದುರಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದೆ. ಪರಿಣಾಮ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ.(AP)
(2 / 9)
ಆರಂಭಿಕರಾದ ಯಶಸ್ವಿ ಜೈಸ್ವಾಲ್ (57) ಮತ್ತು ರೋಹಿತ್ ಶರ್ಮಾ (80) ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಈ ಜೋಡಿ 139 ರನ್ಗಳ ಜೊತೆಯಾಟವಾಡಿದೆ.(AFP)
(3 / 9)
ವಿರಾಟ್ ಕೊಹ್ಲಿಗೆ ಇದು 500ನೇ ಅಂತಾರಾಷ್ಟ್ರೀಯ ಪಂದ್ಯ. ಈ ಸ್ಮರಣೀಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಅವರ ಸಾಲಿಗೂ ಸೇರಿದ್ದಾರೆ. (AP)
(4 / 9)
ಸದ್ಯ ಅಜೇಯ 87 ರನ್ ಸಿಡಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.(AP)
(5 / 9)
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದವರ ಪೈಕಿ ಸಚಿನ್ ತೆಂಡೂಲ್ಕರ್ 13,492 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಲಾ ಜಯವರ್ಧನೆ 9509 ರನ್, ಜಾಕ್ ಕಾಲಿಸ್ 9033 ರನ್, ಬ್ರಿಯಾನ್ ಲಾರಾ 7535 ರನ್ ಗಳಿಸಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ7097 ರನ್ ಗಳಿಸಿ 5ನೇ ಸ್ಥಾನಕ್ಕೆ ಏರಿದ್ದಾರೆ.
(6 / 9)
ಅಂತಾರಾಷ್ಟ್ರೀಯ ಕ್ರಿಕೆಟ್ನ 500ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸಚಿನ್, ಪಾಟಿಂಗ್ ಸೇರಿದಂತೆ ಹಲವರು 500ನೇ ಪಂದ್ಯದಲ್ಲಿ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.
(7 / 9)
ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಫಾರ್ಮೆಟ್ ಸೇರಿ ಅಧಿಕ ರನ್ ಗಳಿಸಿದ ಟಾಪ್-5 ಎಲೈಟ್ ಪಟ್ಟಿಗೂ ಕೊಹ್ಲಿ ಸೇರಿದ್ದಾರೆ. ಸಚಿನ್, ರಿಕಿ ಪಾಂಟಿಂಗ್, ಸೇರಿದಂತೆ ದಿಗ್ಗಜರ ನಂತರ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ನೇ ಆಟಗಾರ ಎನಿಸಿಕೊಂಡಿದ್ದಾರೆ.(BCCI)
(8 / 9)
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಸಚಿನ್ 34357 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕುಮಾರ್ ಸಂಗಕ್ಕಾರ 28016 ರನ್, ರಿಕಿ ಪಾಂಟಿಂಗ್ 27483 ರನ್, ಜಯವರ್ಧನೆ 25957 ರನ್ ಗಳಿಸಿ ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಸದ್ಯ 5ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 25548 ರನ್ ಗಳಿಸಿದ್ದಾರೆ (ಮೊದಲ ದಿನದಾಟದ ಅಂತ್ಯಕ್ಕೆ ವರದಿಯಾದ ವಿವರ). ಆ ಮೂಲಕ ದಿಗ್ಗಜ ಜಾಕ್ ಕಾಲಿಸ್ ದಾಖಲೆ ಮುರಿದು ಮುಂದೆ ಸಾಗಿದ್ದಾರೆ. 25,534 ರನ್ ಗಳಿಸಿದ್ದ ಕಾಲಿಸ್ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.(ICC)
ಇತರ ಗ್ಯಾಲರಿಗಳು