ಪುತ್ತೂರಿನಲ್ಲಿ ಹಲಸು ಮೇಳ; ವೈವಿಧ್ಯಮಯ ಸ್ಟಾಲ್‌ಗಳು, ವಿವಿಧ ಬಗೆಯ ಹಣ್ಣುಗಳು, ಫುಡ್ ಕೋರ್ಟ್; ಫೊಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪುತ್ತೂರಿನಲ್ಲಿ ಹಲಸು ಮೇಳ; ವೈವಿಧ್ಯಮಯ ಸ್ಟಾಲ್‌ಗಳು, ವಿವಿಧ ಬಗೆಯ ಹಣ್ಣುಗಳು, ಫುಡ್ ಕೋರ್ಟ್; ಫೊಟೋಸ್

ಪುತ್ತೂರಿನಲ್ಲಿ ಹಲಸು ಮೇಳ; ವೈವಿಧ್ಯಮಯ ಸ್ಟಾಲ್‌ಗಳು, ವಿವಿಧ ಬಗೆಯ ಹಣ್ಣುಗಳು, ಫುಡ್ ಕೋರ್ಟ್; ಫೊಟೋಸ್

  • ಕರಾವಳಿಯಲ್ಲಿ ಸೆಖೆ ಕರಗಿ ಮಳೆ ಆರಂಭಗೊಂಡ ಬೆನ್ನಲ್ಲೇ ಹಲಸು ಮೇಳದ ಸೀಸನ್ ಆರಂಭಗೊಂಡಿದೆ. ಪುತ್ತೂರಿನಲ್ಲಿ ಮೇ 24ರ ಶುಕ್ರವಾರ ಆರಂಭಗೊಂಡ ಮೇಳ ಭಾನುವಾರದವರೆಗೆ ಇರಲಿದೆ. ವೈವಿಧ್ಯಮಯ ಹಲಸಿನ ಹಣ್ಣುಗಳ ಭಂಡಾರದ ಜೊತೆಗೆ ಇತರ ಹಣ್ಣುಗಳೂ ಇಲ್ಲಿ ಪ್ರದರ್ಶನ, ಮಾರಾಟಕ್ಕೆ ಇಡಲಾಗಿದೆ. ಫೋಟೊಸ್ ನೋಡಿ.

ಪುತ್ತೂರಿನ ಹಲಸು ಮೇಳದಲ್ಲಿ ವಿವಿಧ ತಳಿಯ ಹನಸಿನ ಹಣ್ಣುಗಳಲ್ಲದೆ, ಪ್ರಸಿದ್ಧ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಿದ ತಳಿಗಳು, ಇತರ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
icon

(1 / 7)

ಹಸಲು ಮೇಳದಲ್ಲಿ ಹಿರಿಯ ಲೇಖಕ ನಾ.ಕಾರಂತ ಪೆರಾಜೆ ಅವರ ಕೃತಿ ’ಫಲಪ್ರದ’ವನ್ನು ಅನಾವರಣಗೊಳಿಸಲಾಯಿತು.
icon

(2 / 7)

ನವತೇಜ ಪುತ್ತೂರು, ಜೇಸಿ, ಜಿ.ಎಲ್.ಆಚಾರ್ಯ ಜುವೆಲರ್ಸ್, ಅಡಕೆ ಪತ್ರಿಕೆ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಲಸು ಮೇಳವನ್ನು ಆಯೋಜಿಸಲಾಗಿದ್ದು, ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಮೇಳದಲ್ಲಿ ಗೇರು ಹಣ್ಣುಗಳು ಗಮನ ಸೆಳೆದವು.
icon

(3 / 7)

ಸುವಾಸನೆ ಹಾಗೂ ರುಚಿಯಾದ ವಿವಿಧ ಬಗೆಯ ಹಲಸು ಮೇಳದಲ್ಲಿ ಗಮನ ಸೆಳೆಯಿತು. ಮೇಳಕ್ಕೆ ಭೇಟಿ ನೀಡಿದ್ದವರು ಹಲಸವನ್ನು ಸವಿದು ಖುಷಿ ಪಟ್ಟಿದ್ದಾರೆ.
icon

(4 / 7)

ಹಲಸಿನ ಹಣ್ಣಿನ ವಿವಿಧ ಖಾದ್ಯಗಳಾದ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ರೊಟ್ಟಿ, ಕೇಕ್, ಹಲ್ವಾ, ಸೇಮಿಗೆ, ಬನ್ಸ್ ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ ಕ್ರೀಮ್ ಸಹಿತ ಹಲವು ಬಗೆಯ ಖಾದ್ಯಗಳು ಇಲ್ಲಿದ ಫುಡ್ ಕೋರ್ಟ್ ನಲ್ಲಿ ಹಲಸುಪ್ರಿಯರ ಗಮನ ಸೆಳೆದವು. ವಿವಿಧ ಬಗೆಯ ತನಿಸುಗಳನ್ನು ಸ್ಥಳದಲ್ಲೇ ತಯಾರಿಸಿದ್ದು ಕಂಡು ಬಂದಿತು.
icon

(5 / 7)

ಪುತ್ತೂರಿನ ಜೈನ್ ಭವನದಲ್ಲಿ ಮೇ 24ರ ಶುಕ್ರವಾರ ಮೇಳಕ್ಕೆ ಚಾಲನೆ ನೀಡಲಾಗಿದೆ. ಮೇ 26ರ ಭಾನುವಾರದ ವರೆಗೆ ಹಲಸು ಮೇಳ ನಡೆಯಲಿದೆ. ಬಂಟ್ವಾಳ ತಾಲೂಕಿನ ಉಬರು-ಮುಳಿಯ ’ಹಲಸು ಸ್ನೇಹಿ ಕೂಟ’ವು 2011 ರಿಂದ ಸಕ್ರಿಯ. ಹಲಸು, ಗೆಡ್ಡೆ, ತರಕಾರಿ, ಮಾವು, ಕಾಡುಮಾವು, ಪುನರ್ಪುಳಿ, ಚಳಿಗಾಲದ ತರಕಾರಿ, ಸಿರಿಧಾನ್ಯ, ಸೊಪ್ಪು ತರಕಾರಿಗಳು, ಹಣ್ಣುಗಳ ಫಲಾಹಾರ. ಹೀಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಒಂದು ಗ್ರಾಮ ಮಟ್ಟದ ವ್ಯಾಪ್ತಿಯಲ್ಲಿ ನಡೆಸುತ್ತದೆ.
icon

(6 / 7)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್ ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ. ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(7 / 7)

ಇತರ ಗ್ಯಾಲರಿಗಳು