ಪಾರ್ವತಿ ದೇವಿಯ ರೌದ್ರಾವತಾರಕ್ಕೆ ಏಳನೇ ದಿನ ನವರಾತ್ರಿ ಪೂಜೆ, ಕತ್ತೆಯ ಮೇಲೇರಿ ಬರುವ ಕಾಳರಾತ್ರಿ ದೇವಿಯ ದಂತಕಥೆಗಳು ಅನೇಕ
ನವರಾತ್ರಿ ದುರ್ಗಾ ಪೂಜೆಯಲ್ಲಿ ಏಳನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಿಯು ಪಾರ್ವತಿಯ ಮತ್ತೊಂದು ಅವತಾರ. ಕತ್ತೆಯ ಮೇಲೇರಿ ಬರುವ ಕಾಳರಾತ್ರಿ ದೇವಿಯ ಬಗ್ಗೆ ಅನೇಕ ದಂತಕಥೆಗಳೂ ಇವೆ. ಅವುಗಳಲ್ಲಿ ಕೆಲವನ್ನು ತಿಳಿಯೋಣ.
(1 / 9)
ದುರ್ಗಾಸಪ್ತ ಶತಿಯಲ್ಲಿ ಕಾಳರಾತ್ರಿಯ ಉಲ್ಲೇಖವಿದೆ. ಅದೇ ರೀತಿ ಮಾರ್ಕಂಡೇಯ ಪುರಾಣದ 81ರಿಂದ 93ನೇ ಅಧ್ಯಾಯ ನಡುವೆ ಕೂಡ ಕಾಳರಾತ್ರಿ ದೇವಿಯನ್ನು ಉಲ್ಲೇಖಿಸಲಾಗಿದೆ. ಕಾಳರಾತ್ರಿ ದೇವಿಯನ್ನು ಕಾಳಿ, ಮಹಾಕಾಳಿ, ಭದ್ರಕಾಳಿ, ಭೈರವಿ, ಮೃತ್ಯು-ರುದ್ರಾಣಿ, ಚಾಮುಂಡಾ, ಚಂಡಿ, ದುರ್ಗಾ, ರೌದ್ರಿ ಮತ್ತು ಧೂಮ್ರವರ್ಣ ಎಂಬ ಮಾತೃದೇವತೆಯ ಅನೇಕ ವಿನಾಶಕಾರಿ ರೂಪಗಳಲ್ಲಿ ವ್ಯಾಖ್ಯಾನಿಸಿ ಚಿತ್ರಿಸಲಾಗಿದೆ.
(2 / 9)
ದಂತಕಥೆಯ ಪ್ರಕಾರ ಚಾಮುಂಡಾ ದೇವಿಯು (ಕಾಳಿ) ದೇವಿ ಕಾಳರಾತ್ರಿಯ ಸೃಷ್ಟಿಕರ್ತಳು. ಶಕ್ತಿಶಾಲಿ ಕತ್ತೆಯ ಮೇಲೆ ಸವಾರಿ ಮಾಡುತ್ತಾ, ಕಾಳರಾತ್ರಿಯು ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಅಟ್ಟಿಸಿಕೊಂಡು ಬಂದು ಅವರನ್ನು ಹಿಡಿದು ಕಾರಾಗೃಹದಲ್ಲಿಟ್ಟ ನಂತರ ಕಾಳಿಯ ಬಳಿಗೆ ಕರೆತಂದಳು. ಅಲ್ಲಿ ಚಾಮುಂಡಾ ದೇವಿಯು ಈ ರಾಕ್ಷಸರನ್ನು ಕೊಂದರು ಎಂಬ ಉಲ್ಲೇಖವಿದೆ.
(3 / 9)
ಬಿಚ್ಚಿದ ಕೂದಲು, ಹೊಳೆಯುವ ಮಣಿ ಹಾರದೊಂದಿಗೆ ಭಯಂಕರ ರೂಪದೊಂದಿಗೆ ಕಾಣಿಸಿರುವ ಕಾಳರಾತ್ರಿ ದೇವಿಗೆ ಮೂರು ಕಣ್ಣು. ಮೂಗಿನಿಂದ ಬೆಂಕಿ ಹೊರಹೊಮ್ಮುತ್ತಿದ್ದು, ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ಕತ್ತೆಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.
(4 / 9)
ಕಾಳರಾತ್ರಿ ದೇವಿಯು ದುರ್ಗೆಯ ಅತ್ಯಂತ ಆಕ್ರಮಣಕಾರಿ ರೂಪ. ಈ ದೇವಿಯೂ ಚತುರ್ಭುಜದವಳು. ಮೇಲಿನ ಬಲಗೈಯಿಂದ ಭಕ್ತರಿಗೆ ವರವನ್ನು ನೀಡುತ್ತಾಳೆ. ತನ್ನ ಕೆಳಗಿನ ಬಲಗೈಯಲ್ಲಿ ಅಭಯ ಮತ್ತು ರಕ್ಷಣೆಯನ್ನು ಭರವಸೆ ನೀಡುತ್ತಾಳೆ, ಆದರೆ ಅವಳ ಎಡಗೈಯಲ್ಲಿ ಅವಳು ಖಡ್ಗ ಮತ್ತು ಕೆಳಗಿನ ಒಂದು ಕಬ್ಬಿಣದ ಸಲಾಕೆಯನ್ನು ಹಿಡಿದಿದ್ದಾಳೆ
(5 / 9)
ದೇವಿ ಭಾಗವತ ಪುರಾಣದ ಪ್ರಕಾರ, ಅಂಬಿಕಾ ದೇವಿಯು (ಕೌಶಿಕಿ/ ಚಂಡಿಕಾ) ಪಾರ್ವತಿ ದೇವಿಯ ಶರೀರದಿಂದ ಹೊರಬಂದ ನಂತರ, ಪಾರ್ವತಿ ದೇವಿಯ ಚರ್ಮವು ಕಡು ಕಪ್ಪು ವರ್ಣಕ್ಕೆ ತಿರುಗುತ್ತದೆ. ಹೀಗಾಗಿ ಈ ರೂಪಕ್ಕೆ ಕಾಳಿಕಾ ಅಥವಾ ಕಾಳರಾತ್ರಿ ಎಂಬ ಹೆಸರು ಬಂತು.
(6 / 9)
ಕಾಳರಾತ್ರಿಯನ್ನು ಶುಭಂಕರಿ ಎಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಶುಭ ಎಂದರೆ ಒಳ್ಳೆಯದು ಎಂದರ್ಥ. ಯಾವಾಗಲೂ ತನ್ನ ಭಕ್ತರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುವವಳು ಎಂಬ ನಂಬಿಕೆಯ ಕಾರಣ ಆಕೆ ಶುಭಂಕರಿ
(7 / 9)
ಭಾರತದಲ್ಲಿರುವ 5 ಕಾಳರಾತ್ರಿ ದೇವಾಲಯಗಳಿವು - ವಾರಾಣಸಿಯ ಕಾಳಿಕಾ ಗಲ್ಲಿಯಲ್ಲಿರುವ ಕಾಳರಾತ್ರಿ ದೇವಸ್ಥಾನ. ಬಿಹಾರದ ನಯಾಗಾಂವ್‌ನ ದುಮ್ರಿ ಬುಜುರ್ಗ್‌ನ ಕಾಳರಾತ್ರಿ ದೇವಸ್ಥಾನ. ಉತ್ತರ ಪ್ರದೇಶ ಮಿರ್ಜಾಪುರದ ವಿಂಧ್ಯಾಚಲ, ಪಂಜಾಬ್‌ನ ಪಟಿಯಾಲ ಮತ್ತು ಸಂಗ್ರೂರ್‌ಗಳಲ್ಲಿ ಕಾಳರಾತ್ರಿ ದೇಗುಲಗಳಿರುವ ಉಲ್ಲೇಖ ಇದೆ.
(8 / 9)
ಕಾಳರಾತ್ರಿ ದೇವಿಯು ಪಿಂಗಳ ನಾಡಿನ ಮೇಲೆ ದೈವಿಕ ಅಧಿಕಾರವನ್ನು ಹೊಂದಿದ್ದು, ಇದು ಪ್ರಾಣಿ ಶಕ್ತಿಯ ಮೂಲವಾಗಿದೆ. ನವರಾತ್ರಿಯ ಏಳನೇ ದಿನ ಕಾಳರಾತ್ರಿಯನ್ನು ಆರಾಧಿಸುವವರು ಸಹಸ್ರಾರ ಚಕ್ರದ ಮೇಲೆ ಗಮನ ಕೇಂದ್ರೀಕರಿಸಬೇಕು. ಸಹಸ್ರಾರ ಚಕ್ರದಲ್ಲಿರುವ ಮೇಧಾ ಶಕ್ತಿಯು ಸಾವಿರ ದಳಗಳ ಕಮಲವು ಸಂಪೂರ್ಣ, ತೆರೆದುಕೊಳ್ಳುವ ರೀತಿಯಲ್ಲಿ ಪ್ರಜ್ಞೆಯ ಸಂಕೇತವಾಗಿ ಅರಳುತ್ತದೆ ಎಂಬ ನಂಬಿಕೆ ಇದೆ.
(9 / 9)
ಕಾಳರಾತ್ರಿ ದೇವಿಯು ತನ್ನ ಆರಾಧಕರಿಗೆ ಎಲ್ಲ ಸಿದ್ಧಿಗಳನ್ನು ದಯಪಾಲಿಸುತ್ತಾಳೆ. ಭಕ್ತರಿಗೆ ಸಂಪತ್ಸಮೃದ್ಧಿ, ಮೋಕ್ಷವನ್ನೂ ಕರುಣಿಸುತ್ತಾಳೆ ಎಂದು ಭಕ್ತರು ನಂಬುತ್ತಾರೆ. ಆಕೆಯನ್ನು ಆರಾಧಿಸುವುದಕ್ಕೆ ಈ ಪ್ರಾರ್ಥನಾ ಮಂತ್ರ ಪಠಿಸಬಹುದು. ಕಾಳರಾತ್ರಿ ದೇವಿ ಪ್ರಾರ್ಥನಾ ಮಂತ್ರ : ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ ।ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ॥ ಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ ।ವರ್ಧನಮೂರ್ಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ॥
ಇತರ ಗ್ಯಾಲರಿಗಳು