Teachers Day: ಶಿಕ್ಷಕರು ಎಂದರೆ ಥಟ್ಟನೆ ನೆನಪಾಗುವ ಹೆಸರುಗಳಿವು, ಯಾರಿದ್ದಾರೆ ಅಂತಹ ಪ್ರೀತಿಯ ಮೇಷ್ಟ್ರುಗಳು
- ಮೇಷ್ಟ್ರು ಎಂದರೆ ಬರೀ ಪಾಠ ಹೇಳಿಕೊಡುವವರಲ್ಲ. ಬದುಕಿನ ದಿಕ್ಕು ತೋರುವವರು. ಅವರ ಪ್ರೇರಣೆ, ಪ್ರಭಾವ ಬದುಕಿನಲ್ಲಿ ಎಷ್ಟಿರುತ್ತದೆ ಎಂದರೆ ಅದನ್ನು ಅಳಿಸಲು ಆಗುವುದೇ ಇಲ್ಲ. ಅಂತಹ ವಿಭಿನ್ನ ಹಿರಿಯ, ಹೊಸ ತಲೆಮಾರಿನ ಶಿಕ್ಷಕರ ನೋಟ ಇಲ್ಲಿದೆ.
- ಮೇಷ್ಟ್ರು ಎಂದರೆ ಬರೀ ಪಾಠ ಹೇಳಿಕೊಡುವವರಲ್ಲ. ಬದುಕಿನ ದಿಕ್ಕು ತೋರುವವರು. ಅವರ ಪ್ರೇರಣೆ, ಪ್ರಭಾವ ಬದುಕಿನಲ್ಲಿ ಎಷ್ಟಿರುತ್ತದೆ ಎಂದರೆ ಅದನ್ನು ಅಳಿಸಲು ಆಗುವುದೇ ಇಲ್ಲ. ಅಂತಹ ವಿಭಿನ್ನ ಹಿರಿಯ, ಹೊಸ ತಲೆಮಾರಿನ ಶಿಕ್ಷಕರ ನೋಟ ಇಲ್ಲಿದೆ.
(1 / 12)
ಸರ್ವಪಲ್ಲಿ ರಾಧಾಕೃಷ್ಣನ್ ಎಂದರೆ ಮಾದರಿ ಶಿಕ್ಷಕ. ಭಾರತದ ಅತ್ಯುನ್ನತ ಹುದ್ದೆ ರಾಷ್ಟ್ರಪತಿಯೂ ಆದವರು. ಆದರೂ ಅವರು ಶಿಕ್ಷಕರಾಗಿಯೇ ಇರಲು ಇಷ್ಟಪಡುತ್ತಿದ್ದರು. ಮೈಸೂರಿನಿಂದ ಹೊರಟ ಅವರನ್ನು ಶಿಷ್ಯರು ಬೀಳ್ಕೊಟ್ಟ ಆ ಸನ್ನಿವೇಶ ಈಗಲೂ ಗುರು ಶಿಷ್ಯರ ಭಾಂದವ್ಯಕ್ಕೆ ಸಾಕ್ಷಿ.
(2 / 12)
ತಲೆಮಾರುಗಳನ್ನೇ ಪ್ರೇರೇಪಿಸಿದ ಕನ್ನಡದ ಮೇಷ್ಟ್ರು ಕುವೆಂಪು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರೂ ಅವರು ಬಹುತೇಕ ಕನ್ನಡದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು ಮೈಸೂರು ವಿವಿಯಲ್ಲಿ, ಕುಲಪತಿಯಾಗಿಯೂ ಕೆಲಸ ಮಾಡಿದವರು. ಅವರನ್ನು ಈಗಲೂ ನೆನಪಿಸುವವರ ಸಂಖ್ಯೆ ಅಧಿಕ.
(3 / 12)
ಮೇಷ್ಟ್ರೆಂದರೆ ಹೇಗಿರಬೇಕು ಎನ್ನುವುದಕ್ಕೆ ಅಬ್ದುಲ್ ಕಲಾಂ ಅವರಿಗಿಂಥ ಮಾದರಿಯಿಲ್ಲ. ತಮಿಳುನಾಡಿನ ಮೀನುಗಾರ ಕುಟುಂಬದಲ್ಲಿ ಜನಿಸಿ ವಿಜ್ಞಾನಿಯಾಗಿ, ರಾಷ್ಟ್ರಪತಿಯೂ ಆದ ಕಲಾಂ ಅವರು ಇಷ್ಟಪಡುತ್ತಿದ್ದುದು ಉಪನ್ಯಾಸಕ ವೃತ್ತಿಯನ್ನೇ. ವಿಜ್ಞಾನ,. ಎಂಜಿನಿಯರಿಂಗ್ ಮೇಷ್ಟ್ರಾಗಿ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದ್ದ ಪರಿ ವಿಭಿನ್ನ.
(4 / 12)
ಕನ್ನಡದ ನವ್ಯ ಹಾಗೂ ಬಂಡಾಯ ಸಾಹಿತಿಗಳ ಸಾಲಿನ ಹಿರಿಯರಾದ ಬರಗೂರು ರಾಮಚಂದ್ರಪ್ಪ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದರು.ಸಂದರ್ಶನ ಪ್ರಾಧ್ಯಾಪಕರಾಗಿ ಹಲವಾರು ವಿವಿಗಳಲ್ಲಿ ಪಾಠ ಮಾಡಿದ್ದಾರೆ. ಅವರ ಚಿಂತನೆ. ಒಳನೋಟ, ಮಾತಿನಿಂದಲೇ ಪ್ರಭಾವಳಿ ಸೃಷ್ಟಿಸಬಲ್ಲ ಪ್ರೀತಿಯ ಮೇಷ್ಟ್ರು ಬರಗೂರು ಅವರು.
(5 / 12)
ಕರಾವಳಿ ಭಾಗದವರಾದ ಪ್ರೊ.ಬಿ.ಎ.ವಿವೇಕ್ ರೈ ಅವರು ಜನಪದ ವಿದ್ವಾಂಸರು. ಅದಕ್ಕಿಂತ ಉತ್ಕೃಷ್ಠ ಅಧ್ಯಾಪಕರು. ಕನ್ನಡದ ಹಲವಾರು ವಿದ್ಯಾರ್ಥಿಗಳನ್ನು ತಮ್ಮದೇ ಶೈಲಿಯ ಪ್ರವಚನದಿಂದ ಪ್ರೇರೇಪಿಸುವ ರೈ ಅವರು ಮೈಸೂರಿನ ಕರಾಮುವಿ ಹಾಗೂ ಹಂಪಿ ಕನ್ನಡ ವಿವಿ ಕುಲಪತಿಗಳಾಗಿದ್ದರು.
(6 / 12)
ಕನ್ನಡದ ಮೇಷ್ಟ್ರಾಗಿ ಕವಿಯಾಗಿ ಹೆಸರು ಪಡೆದವರು ಕಮಲಾ ಹಂಪನಾ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅಧ್ಯಾಪಕರಾಗಿ ಮಕ್ಕಳ ಪ್ರೀತಿಯ ಗುರುವೂ ಅಗಿದ್ದವರು. ಕೆಲ ದಿನಗಳ ಹಿಂದೆಯಷ್ಟೇ ಕಾಲದವರು.
(7 / 12)
ವಿಜಯಪುರ ಮಹಿಳಾ ವಿವಿಯ ಕುಲಪತಿಯಾಗಿ ನಿವೃತ್ತರಾದ ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಸಬೀಹಾ ಭೂಮಿಗೌಡ ಕೂಡ ಬಹಳಷ್ಟು ವಿದ್ಯಾರ್ಥಿಗಳ ಪ್ರೀತಿಯ ಗುರುಗಳು. ತಮ್ಮದೇ ಚಿಂತನೆಗಳ ಮೂಲಕ ಪ್ರಭಾವಿಸುವ ಸಬೀಹಾ ಅವರ ತಂದೆ ಎಂ.ಆರ್.ಗಜೇಂದ್ರಗಡ ಕೂಡ ಶಿಕ್ಷಕರಾಗಿ ಕುಲಪತಿಯಾಗಿದ್ದವರು.
(8 / 12)
ಅಪ್ಪಟ ಮಂಡ್ಯ ಮಣ್ಣಿನ ಪ್ರತಿಭೆ ಪ್ರೊ.ಎಂ.ಕೃಷ್ಣೇಗೌಡ ಮೈಸೂರಿನಲ್ಲಿ ಮೂರು ದಶಕಕ್ಕೂ ಮಿಗಿಲಾಗಿ ಅಧ್ಯಾಪಕರಾಗಿದ್ದವರು. ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರೀತಿಯನ್ನು ಮಕ್ಕಳಲ್ಲಿ ಬಿತ್ತಿದವರು. ತಮ್ಮ ಮಾತಿನ ಮೂಲಕವೇ ಈಗ ಜನಪ್ರಿಯರು.
(9 / 12)
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ರಹಮತ್ ತರೀಕೆರೆ ಕೂಡ ಕನ್ನಡದ ಮೇಷ್ಟ್ರು. ಹಂಪಿ ಕನ್ನಡ ವಿವಿಯಲ್ಲಿ ಅಧ್ಯಾಪನ ವೃತ್ತಿ ಮಾಡಿ ನಿವೃತ್ತರಾದವರು. ಅವರ ಕ್ಷೇತ್ರ ಕಾರ್ಯ, ಇತಿಹಾಸ ನೋಟ, ವಿಭಿನ್ನ ಚಿಂತನೆಗಳ ಮೂಲಕ ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಇಷ್ಟವಾಗುವವರು.
(10 / 12)
ಹೊಸ ತಲೆಮಾರಿನ ಮೇಷ್ಟ್ರುಗಳಲ್ಲಿ ಸಂತೋಷ್ ಗುಡ್ಡಿಯಂಗಡಿ ಪ್ರಮುಖರು. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನವರಾದ ಸಂತೋಷ್ ಅವರು ಶಿಕ್ಷಣವನ್ನು ರಂಗಭೂಮಿ, ವಿಜ್ಞಾನದೊಂದಿಗೆ ಮಿಳಿತ ಮಾಡಿ ಮಕ್ಕಳನ್ನು ಆಕರ್ಷಿಸುತ್ತಾರೆ. ಸದ್ಯ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಶಿಕ್ಷಕ.
(11 / 12)
ಹೊಸ ತಲೆಮಾರಿನ ಅಧ್ಯಾಪಕರು ಹಾಗೂ ಕವಿಗಳಲ್ಲಿ ಪಿ.ಭಾರತಿ ದೇವಿ ಪ್ರಮುಖರು. ಕರಾವಳಿ ಭಾಗದವರು. ಹಾಸನದ ಹೊಳೆ ನರಸೀಪುರದಲ್ಲಿ ಉಪನ್ಯಾಸಕರಾಗಿದ್ದವರು. ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇತರ ಗ್ಯಾಲರಿಗಳು