ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ಸರಳ ಟಿಪ್ಸ್‌ ಅನುಸರಿಸಿದ್ರೆ ನೀವೇ ಹ್ಯಾಂಡ್‌ಸಮ್; ಮುಖದ ಈ ಕಾಳಜಿ ದಿನಚರಿಯಲ್ಲಿರಲಿ

ಈ ಸರಳ ಟಿಪ್ಸ್‌ ಅನುಸರಿಸಿದ್ರೆ ನೀವೇ ಹ್ಯಾಂಡ್‌ಸಮ್; ಮುಖದ ಈ ಕಾಳಜಿ ದಿನಚರಿಯಲ್ಲಿರಲಿ

  • ಪುರುಷರು ಕೂಡಾ ಮಹಿಳೆಯರಂತೆ ತಮ್ಮ ತ್ವಚೆಯ ಕಾಳಜಿ ವಹಿಸಬೇಕು. ಮಳೆ ಮತ್ತು ಚಳಿಗಾಲದ ಶೀತದ ವಾತಾವರಣ ಹಾಗೂ ಬೇಸಿಗೆಯ ಆರ್ದ್ರ ಪರಿಸ್ಥಿತಿಗಳಲ್ಲಿ ಹೆಚ್ಚಾಗಿ ಪುರುಷರು ಮನೆಯ ಹೊರಗಿರುತ್ತಾರೆ. ಹೀಗಾಗಿ ಚರ್ಮದ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ತಮ್ಮ ತ್ವಚೆಯ ಹೊಳಪನ್ನು ಆರೋಗ್ಯಕರವಾಗಿ ಉಳಿಸಲು ಇಲ್ಲಿವೆ ಸಲಹೆ.

ಪುರುಷರ ತ್ವಚೆಯು ಮಹಿಳೆಯರಿಗಿಂತ ಸುಮಾರು 20ರಿಂದ 25 ಪ್ರತಿಶತ ದಪ್ಪಗಿರುತ್ತದೆ. ಹೀಗಾಗಿ ಚರ್ಮವು ಕಠಿಣ ಮತ್ತು ಎಣ್ಣೆಯುಕ್ತವಾಗಿರುತ್ತದೆ. ಹೀಗಾಗಿ ಪುರುಷರು ಮಹಿಳೆಯರಿಗಿಂತ ವಿಭಿನ್ನವಾಗಿ ತಮ್ಮ ಚರ್ಮದ ಆರೈಕೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಚರ್ಮದ ವಿಧವನ್ನು ಸರಿಯಾಗಿ ಗುರುತಿಸಿಕೊಳ್ಳಬೇಕು. ಅದರಂತೆಯೇ ಚರ್ಮಕ್ಕೆ ಸೂಕ್ತವೆನಿಸುವ ಆರೈಕೆ ಹಾಗೂ ಸೂಕ್ತ ಉತ್ಪನ್ನಗಳನ್ನು ಮಾತ್ರವೇ ಬಳಸಬೇಕು.
icon

(1 / 7)

ಪುರುಷರ ತ್ವಚೆಯು ಮಹಿಳೆಯರಿಗಿಂತ ಸುಮಾರು 20ರಿಂದ 25 ಪ್ರತಿಶತ ದಪ್ಪಗಿರುತ್ತದೆ. ಹೀಗಾಗಿ ಚರ್ಮವು ಕಠಿಣ ಮತ್ತು ಎಣ್ಣೆಯುಕ್ತವಾಗಿರುತ್ತದೆ. ಹೀಗಾಗಿ ಪುರುಷರು ಮಹಿಳೆಯರಿಗಿಂತ ವಿಭಿನ್ನವಾಗಿ ತಮ್ಮ ಚರ್ಮದ ಆರೈಕೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಚರ್ಮದ ವಿಧವನ್ನು ಸರಿಯಾಗಿ ಗುರುತಿಸಿಕೊಳ್ಳಬೇಕು. ಅದರಂತೆಯೇ ಚರ್ಮಕ್ಕೆ ಸೂಕ್ತವೆನಿಸುವ ಆರೈಕೆ ಹಾಗೂ ಸೂಕ್ತ ಉತ್ಪನ್ನಗಳನ್ನು ಮಾತ್ರವೇ ಬಳಸಬೇಕು.(Unsplash)

ಪುರುಷರ ಮುಖದಲ್ಲಿ ಹೆಚ್ಚು ಮೊಡವೆಗಳು ಬೀಳುತ್ತವೆ. ಚರ್ಮದ ಮೇಲೆ ಹೆಚ್ಚುವರಿ ಎಣ್ಣೆಯಂಶ ಇರುತ್ತದೆ. ಹೀಗಾಗಿ ಪ್ರತಿದಿನ ಕನಿಷ್ಠ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಸೌಮ್ಯವಾದ ಫೇಸ್ ವಾಶ್ ನಿಂದ ಮುಖ ತೊಳೆಯಿರಿ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಫೇಸ್ ವಾಶ್ ಖರೀದಿಸಿ.
icon

(2 / 7)

ಪುರುಷರ ಮುಖದಲ್ಲಿ ಹೆಚ್ಚು ಮೊಡವೆಗಳು ಬೀಳುತ್ತವೆ. ಚರ್ಮದ ಮೇಲೆ ಹೆಚ್ಚುವರಿ ಎಣ್ಣೆಯಂಶ ಇರುತ್ತದೆ. ಹೀಗಾಗಿ ಪ್ರತಿದಿನ ಕನಿಷ್ಠ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಸೌಮ್ಯವಾದ ಫೇಸ್ ವಾಶ್ ನಿಂದ ಮುಖ ತೊಳೆಯಿರಿ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಫೇಸ್ ವಾಶ್ ಖರೀದಿಸಿ.(Unsplash)

ಸೀರಮ್ ದುಬಾರಿ ಉತ್ಪನ್ನ. ನಿಮ್ಮ ಬಜೆಟ್‌ನಲ್ಲಿ ನಿಮ್ಮ ಚರ್ಮಕ್ಕೆ ಸರಿಹೊಂದುವ ಯಾವುದೇ ಸೀರಮ್ ಅನ್ನು ನೀವು ಬಳಸಬಹುದು. ಮುಖ ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚುವ ಮೊದಲು ಇದನ್ನು ಬಳಸಬಹುದು.
icon

(3 / 7)

ಸೀರಮ್ ದುಬಾರಿ ಉತ್ಪನ್ನ. ನಿಮ್ಮ ಬಜೆಟ್‌ನಲ್ಲಿ ನಿಮ್ಮ ಚರ್ಮಕ್ಕೆ ಸರಿಹೊಂದುವ ಯಾವುದೇ ಸೀರಮ್ ಅನ್ನು ನೀವು ಬಳಸಬಹುದು. ಮುಖ ತೊಳೆದ ನಂತರ ಮಾಯಿಶ್ಚರೈಸರ್ ಹಚ್ಚುವ ಮೊದಲು ಇದನ್ನು ಬಳಸಬಹುದು.(Unsplash)

ಹೆಚ್ಚಿನ ಪುರುಷರು ತಮ್ಮ ಚರ್ಮವನ್ನು ತೇವಗೊಳಿಸುವುದಿಲ್ಲ. ಚರ್ಮವು ಒಣಗಲು ಬಿಡಬಾರದು. ಮುಖ್ಯವಾಗಿ ಚಳಿಗಾಲದಲ್ಲಿ ಮಾಯಿಶ್ಚರೈಸರ್ ಬಳಸುವುದು ತುಂಬಾ ಮುಖ್ಯ. ಬೇಸಿಗೆಯಲ್ಲಿ ಇದು ಬೇಕಿಲ್ಲ. ಮುಖವನ್ನು ತೊಳೆದಾಗ ತ್ವಚೆಯ ಮೇಲಿರುವ ಎಣ್ಣೆಯಂಶ ಹೋಗುತ್ತದೆ. ಆಗ ಚರ್ಮದ ಮೇಲಿನ ಪದರವು ಒಣಗಬಹುದು. ಇದನ್ನು ತಡೆಗಟ್ಟಲು ಲಘು ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ.
icon

(4 / 7)

ಹೆಚ್ಚಿನ ಪುರುಷರು ತಮ್ಮ ಚರ್ಮವನ್ನು ತೇವಗೊಳಿಸುವುದಿಲ್ಲ. ಚರ್ಮವು ಒಣಗಲು ಬಿಡಬಾರದು. ಮುಖ್ಯವಾಗಿ ಚಳಿಗಾಲದಲ್ಲಿ ಮಾಯಿಶ್ಚರೈಸರ್ ಬಳಸುವುದು ತುಂಬಾ ಮುಖ್ಯ. ಬೇಸಿಗೆಯಲ್ಲಿ ಇದು ಬೇಕಿಲ್ಲ. ಮುಖವನ್ನು ತೊಳೆದಾಗ ತ್ವಚೆಯ ಮೇಲಿರುವ ಎಣ್ಣೆಯಂಶ ಹೋಗುತ್ತದೆ. ಆಗ ಚರ್ಮದ ಮೇಲಿನ ಪದರವು ಒಣಗಬಹುದು. ಇದನ್ನು ತಡೆಗಟ್ಟಲು ಲಘು ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ.(Unsplash)

ಕಣ್ಣುಗಳ ಕೆಳಗೆ ಕಪ್ಪು ವೃತ್ತ ಅಥವಾ ಡಾರ್ಕ್‌ ಸರ್ಕಲ್‌ಗಳು ಮೂಡುತ್ತವೆ. ಇದರಿಂದ ಮುಖವು ದಣಿದಂತೆ ಕಾಣುತ್ತದೆ. ನಿದ್ದೆ ಕಡಿಮೆಯಾದಾಗ ಸಾಮಾನ್ಯವಾಗಿ ಕಣ್ಣುಗಳ ಕೆಳಗೆ ಕಪ್ಪಗೆ ಕಾಣಿಸುತ್ತದೆ. ಇದನ್ನು ಕಡಿಮೆ ಮಾಡಲು ನಿಯಮಿತ 8ರಿಂದ 9 ಗಂಟೆಗಳ ನಿದ್ರೆ ಮಾಡಬೇಕು. ಕಣ್ಣುಗಳ ಕೆಳಗೆ ನಿಯಮಿತವಾಗಿ ಮಾಯಿಶ್ಚರೈಸಿಂಗ್ ಕ್ರೀಮ್‌ ಹಚ್ಚಿದರೆ ಉತ್ತಮ.
icon

(5 / 7)

ಕಣ್ಣುಗಳ ಕೆಳಗೆ ಕಪ್ಪು ವೃತ್ತ ಅಥವಾ ಡಾರ್ಕ್‌ ಸರ್ಕಲ್‌ಗಳು ಮೂಡುತ್ತವೆ. ಇದರಿಂದ ಮುಖವು ದಣಿದಂತೆ ಕಾಣುತ್ತದೆ. ನಿದ್ದೆ ಕಡಿಮೆಯಾದಾಗ ಸಾಮಾನ್ಯವಾಗಿ ಕಣ್ಣುಗಳ ಕೆಳಗೆ ಕಪ್ಪಗೆ ಕಾಣಿಸುತ್ತದೆ. ಇದನ್ನು ಕಡಿಮೆ ಮಾಡಲು ನಿಯಮಿತ 8ರಿಂದ 9 ಗಂಟೆಗಳ ನಿದ್ರೆ ಮಾಡಬೇಕು. ಕಣ್ಣುಗಳ ಕೆಳಗೆ ನಿಯಮಿತವಾಗಿ ಮಾಯಿಶ್ಚರೈಸಿಂಗ್ ಕ್ರೀಮ್‌ ಹಚ್ಚಿದರೆ ಉತ್ತಮ.(Unsplash)

ಎಕ್ಫ್ಫೋಲಿಯೇಟ್: ನಿಮ್ಮ ಚರ್ಮದ ಮೇಲಿರುವ ಡೆಡ್ ಸ್ಕಿನ್ ಸೆಲ್‌ಗಳನ್ನು ಅಥವಾ ಸತ್ತ ಚರ್ಮಕೋಶಗಳನ್ನು ತೆಗೆದುಹಾಕಲು ಎಕ್ಸ್ಫೋಲಿಯೇಶನ್ ಮಾಡುವ ಮೂಲಕ ತೆಗೆದುಹಾಕಬಹುದು. ಎಕ್ಫ್ಫೋಲಿಯೇಟಿಂಗ್ ಮಾಡಲು ಸಕ್ಕರೆ ಮತ್ತು ಜೇನುತುಪ್ಪ ಅಥವಾ ಎಸ್ಪ್ರೆಸೊ ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಬಹುದು. 
icon

(6 / 7)

ಎಕ್ಫ್ಫೋಲಿಯೇಟ್: ನಿಮ್ಮ ಚರ್ಮದ ಮೇಲಿರುವ ಡೆಡ್ ಸ್ಕಿನ್ ಸೆಲ್‌ಗಳನ್ನು ಅಥವಾ ಸತ್ತ ಚರ್ಮಕೋಶಗಳನ್ನು ತೆಗೆದುಹಾಕಲು ಎಕ್ಸ್ಫೋಲಿಯೇಶನ್ ಮಾಡುವ ಮೂಲಕ ತೆಗೆದುಹಾಕಬಹುದು. ಎಕ್ಫ್ಫೋಲಿಯೇಟಿಂಗ್ ಮಾಡಲು ಸಕ್ಕರೆ ಮತ್ತು ಜೇನುತುಪ್ಪ ಅಥವಾ ಎಸ್ಪ್ರೆಸೊ ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಬಹುದು. (Unsplash)

ಬೇಸಿಗೆ ಕಾಲದಲ್ಲಿ ಮನೆಯಿಂದ ಹೊರಡುವ ಅರ್ಧ ಗಂಟೆಗೂ ಮೊದಲು ಸನ್‌ಸ್ಕ್ರೀನ್ ಹಚ್ಚಿ. ಇದು ಟ್ಯಾನಿಂಗ್, ಚರ್ಮದ ಹಾನಿ, ಪಿಗ್ಮೆಂಟೇಶನ್, ಕಲೆಗಳನ್ನು ತಡೆಯುತ್ತದೆ. ಗಡ್ಡದ ಬೆಳವಣಿಗೆಯ ದಿಕ್ಕಿನಲ್ಲಿ ಮಾತ್ರ ಶೇವಿಂಗ್ ಬ್ಲೇಡ್ ಹರಿಸಿ. ಗಡ್ಡ ಇರುವವರು ಮುಖವನ್ನು ನಿಯಮಿತವಾಗಿ ಫೇಸ್ ವಾಶ್‌ನಿಂದ ತೊಳೆಯಿರಿ. ಗಡ್ಡ ಅಥವಾ ಮೀಸೆಯನ್ನು ನಿಯಮಿತವಾಗಿ ಅದನ್ನು ಟ್ರಿಮ್ ಮಾಡಿ. 
icon

(7 / 7)

ಬೇಸಿಗೆ ಕಾಲದಲ್ಲಿ ಮನೆಯಿಂದ ಹೊರಡುವ ಅರ್ಧ ಗಂಟೆಗೂ ಮೊದಲು ಸನ್‌ಸ್ಕ್ರೀನ್ ಹಚ್ಚಿ. ಇದು ಟ್ಯಾನಿಂಗ್, ಚರ್ಮದ ಹಾನಿ, ಪಿಗ್ಮೆಂಟೇಶನ್, ಕಲೆಗಳನ್ನು ತಡೆಯುತ್ತದೆ. ಗಡ್ಡದ ಬೆಳವಣಿಗೆಯ ದಿಕ್ಕಿನಲ್ಲಿ ಮಾತ್ರ ಶೇವಿಂಗ್ ಬ್ಲೇಡ್ ಹರಿಸಿ. ಗಡ್ಡ ಇರುವವರು ಮುಖವನ್ನು ನಿಯಮಿತವಾಗಿ ಫೇಸ್ ವಾಶ್‌ನಿಂದ ತೊಳೆಯಿರಿ. ಗಡ್ಡ ಅಥವಾ ಮೀಸೆಯನ್ನು ನಿಯಮಿತವಾಗಿ ಅದನ್ನು ಟ್ರಿಮ್ ಮಾಡಿ. (Unsplash)


IPL_Entry_Point

ಇತರ ಗ್ಯಾಲರಿಗಳು