Egg Bonda Recipe: ಈ ಮಳೆಯ ಚಳಿಗೆ ಬಿಸಿಬಿಸಿ ಎಗ್ ಬೋಂಡಾ ತಿಂದ್ರೆ ಹೇಗಿರುತ್ತೆ? ಮೊಟ್ಟೆ ಪ್ರಿಯರಿಗಿದೋ ಗರಿಗರಿ ಮೊಟ್ಟೆ ಬೋಂಡಾ ರೆಸಿಪಿ
- Egg Bonda Recipe: ಮಳೆಗಾಲದಲ್ಲಿ ಹಪ್ಪಳ ಸೆಂಡಿಗೆ ಮಾತ್ರವಲ್ಲದೆ ಬಜ್ಜಿ ಪಕೋಡ ಬೋಂಡಾ ತಿಂದ್ರೆ ವಾಹ್ ಎನಿಸುತ್ತದೆ. ಮೊಟ್ಟೆ ಪ್ರಿಯರಂತೂ ಮೊಟ್ಟೆ ಬೋಂಡಾ (ಎಗ್ ಪಕೋಡ) ತಿನ್ನಲು ಬಯಸಬಹುದು. ಎಗ್ ಬೋಂಡ ಮಾಡೋದು ತುಂಬಾ ಸುಲಭ. ಎಗ್ ಬೋಂಡಾ/ ಎಗ್ ಪಕೋಡ ಮಾಡುವ ಸರಳ ವಿಧಾನ ಇಲ್ಲಿದೆ.
- Egg Bonda Recipe: ಮಳೆಗಾಲದಲ್ಲಿ ಹಪ್ಪಳ ಸೆಂಡಿಗೆ ಮಾತ್ರವಲ್ಲದೆ ಬಜ್ಜಿ ಪಕೋಡ ಬೋಂಡಾ ತಿಂದ್ರೆ ವಾಹ್ ಎನಿಸುತ್ತದೆ. ಮೊಟ್ಟೆ ಪ್ರಿಯರಂತೂ ಮೊಟ್ಟೆ ಬೋಂಡಾ (ಎಗ್ ಪಕೋಡ) ತಿನ್ನಲು ಬಯಸಬಹುದು. ಎಗ್ ಬೋಂಡ ಮಾಡೋದು ತುಂಬಾ ಸುಲಭ. ಎಗ್ ಬೋಂಡಾ/ ಎಗ್ ಪಕೋಡ ಮಾಡುವ ಸರಳ ವಿಧಾನ ಇಲ್ಲಿದೆ.
(1 / 9)
Egg bonda, Egg Pakoda, Egg Pakora Recipe: ಮಕ್ಕಳಿಂದ ಹಿರಿಯವರೆಗೆ ಮೊಟ್ಟೆ ಆರೋಗ್ಯಕರ ಆಹಾರ. ಒಂದು ಮೊಟ್ಟೆಯಲ್ಲಿ 77 ಕ್ಯಾಲೋರಿ ಇರುತ್ತದೆ. ಇದರಲ್ಲಿ 6 ಗ್ರಾಂ ಅತ್ಯಧಿಕ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಐರನ್, ವಿಟಮಿನ್, ಮಿನರಲ್ಸ್, ಕೋರ್ಬೊನಯ್ಡ್ಸ್ ಇತ್ಯಾದಿ ಅಗತ್ಯ ಪೋಷಕಾಂಶಗಳು ಇರುತ್ತವೆ. ಈ ಮೊಟ್ಟೆಯನ್ನ ಈ ಮಳೆಗಾಲದಲ್ಲಿ ಬಿಸಿಬಿಸಿ ಬೋಂಡ/ ಬಿಸಿ ಪಕೋಡ ಮಾಡಲು ಬಯಸುವವರಿಗೆ ಇಲ್ಲಿದೆ ಎಗ್ ಬೋಂಡಾ ರೆಸಿಪಿ. (Photos: Praveen Chandra)
(2 / 9)
ಎಗ್ಬೋಂಡಾ ಮಾಡುವುದು ತುಂಬಾ ಸುಲಭ. ಇದಕ್ಕೆ ಹಾಕುವ ಪದಾರ್ಥಗಳಲ್ಲಿ ಬದಲಾವಣೆಗಳನ್ನು ನಿಮ್ಮ ಟೇಸ್ಟ್ಗೆ ತಕ್ಕಂತೆ ಮಾಡಬಹುದು. ಆದರೆ, ಇಲ್ಲಿ ತಿಳಿಸುವ ವಿಧಾನದ ಮೂಲಕ ಮಾಡಿದರೆ ಮೊಟ್ಟೆಗೆ ಮಸಾಲ ಚೆನ್ನಾಗಿ ಅಂಟಿಕೊಳ್ಳುತ್ತದೆ. ಜತೆಗೆ, ತಿನ್ನಲು ರುಚಿಕರವಾಗಿರುತ್ತದೆ.
(3 / 9)
ಎಗ್ ಬೋಂಡ ಮಾಡಲು ಬೇಕಾಗುವ ಸಾಮಾಗ್ರಿಗಳು: 8 ಮೊಟ್ಟೆ (ನಿಮಗೆ ಬೇಕಾದ್ದಷ್ಟು), 1 ಕಪ್ ಕಡಲೆ ಹಿಟ್ಟು (ಸುಮಾರು 200 ಗ್ರಾಂ), ಅಕ್ಕಿ ಹಿಟ್ಟು - ನಾಲ್ಕು ಟೇಬಲ್ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಮೆಣಸಿನ ಪುಡಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಅರಶಿನ, ಅರ್ಧ ಚಮಚ ಕರಿಮೆಣಸಿನ ಪುಡಿ, ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬೋಂಡ ಮಾಡಲು ಎಣ್ಣೆ.
(4 / 9)
ಮೊದಲಿಗೆ ಎಂಟು ಮೊಟ್ಟೆ ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಮೊಟ್ಟೆಯನ್ನು ಸಿಪ್ಪೆ ತೆಗೆದು ಅರ್ಧ ಅರ್ಧ ಭಾಗ ಕಟ್ ಮಾಡಿಟ್ಟುಕೊಳ್ಳಿ.
(5 / 9)
ಈಗ ಒಂದು ಪಾತ್ರೆಯಲ್ಲಿ ಮಸಲಾ ರೆಡಿ ಮಾಡಿ. ಮೇಲೆ ತಿಳಿಸಿದ ಸಾಮಾಗ್ರಿಗಳನ್ನೆಲ್ಲ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. ಗಂಟು ಇರದಂತೆ ಚೆನ್ನಾಗಿ ಕಲಸಿ. ದೋಸೆ ಹಿಟ್ಟಿನಂತೆ ಹದವಾದ ಮಿಶ್ರಣ ರೆಡಿಯಾಗಲಿ.
(6 / 9)
ಈ ರೀತಿ ಹಿಟ್ಟು ರೆಡಿ ಮಾಡಿಟ್ಟು ಒಂದು ಹದಿನೈದು ನಿಮಿಷ ತೆಗೆದಿಡಿ. ಇದಾದ ಬಳಿಕ ಬೋಂಡಾ ಮಾಡಲು ರೆಡಿಯಾಗಿ. ಮೊಟ್ಟೆಯನ್ನು ಅದ್ದಿ ಬಿಸಿಬಿಸಿ ಎಣ್ಣೆ ಹಾಕುವ ಸಮಯ.
(7 / 9)
ಎಣ್ಣೆ ಸರಿಯಾಗಿ ಬಿಸಿಯಾಗಲಿ. ಮೊಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ ಬಿಸಿಬಿಸಿ ಎಣ್ಣೆಗೆ ಹಾಕುತ್ತ ಬನ್ನಿ. ಮೀಡಿಯಂ ಬೆಂಕಿಯಲ್ಲಿ ತುಸು ಬೆಂದರೆ ಸಾಕು. ಈ ರೀತಿ ಎಂಟು ಮೊಟ್ಟೆಯಲ್ಲಿ ಹದಿನಾರು ಮೊಟ್ಟೆ ಬೋಂಡಾ ರೆಡಿಯಾಗುತ್ತದೆ. ಮೊಟ್ಟೆ ಪೀಸ್ಗಳು ಮುಗಿದವು, ಮಸಲಾ ಉಳಿಯಿತೇ? ಚಿಂತಿಸಬೇಡಿ.
(8 / 9)
ಮನೆಯಲ್ಲಿ ಆಲೂಗಡ್ಡೆ ಅಥವಾ ಬಾಳೆಕಾಯಿ ಇದ್ದರೆ ಅದನ್ನು ಸ್ಲೈಸ್ ಮಾಡಿ ಇದೇ ಮಸಲಾಕ್ಕೆ ಅದ್ದಿ ಫ್ರೈ ಮಾಡಿ. ಆಲೂ ಬೋಂಡ ಅಥವಾ ಬಾಳೆಕಾಯಿ ಬೋಂಡವನ್ನೂ ಇದರಲ್ಲೇ ಮಾಡಬಹುದು. ದೊಣ್ಣೆ ಮೆಣಸಿನಕಾಯಿ ಇದ್ದರೆ ಮೆಣಸಿನ ಕಾಯಿ ಬಜ್ಜಿ ಮಾಡಬಹುದು.
ಇತರ ಗ್ಯಾಲರಿಗಳು