Anil Kumble photography: ಕ್ರಿಕೆಟಿಗ ಅನಿಲ್‌ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕರೂ ಹೌದು, ಕುಂಬ್ಳೆ ಕ್ಲಿಕ್ಕಿಸಿದ ಫೋಟೋ ಝಲಕ್‌ ನೋಡಿ photos-forest news cricketer anil kumble is best wildlife photographer also best photos clicked by kumble here kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Anil Kumble Photography: ಕ್ರಿಕೆಟಿಗ ಅನಿಲ್‌ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕರೂ ಹೌದು, ಕುಂಬ್ಳೆ ಕ್ಲಿಕ್ಕಿಸಿದ ಫೋಟೋ ಝಲಕ್‌ ನೋಡಿ Photos

Anil Kumble photography: ಕ್ರಿಕೆಟಿಗ ಅನಿಲ್‌ ಕುಂಬ್ಳೆ ವನ್ಯಜೀವಿ ಛಾಯಾಗ್ರಾಹಕರೂ ಹೌದು, ಕುಂಬ್ಳೆ ಕ್ಲಿಕ್ಕಿಸಿದ ಫೋಟೋ ಝಲಕ್‌ ನೋಡಿ photos

  • ಕೈಯಲ್ಲಿ ಬಾಲ್‌ ಕೊಟ್ಟರೆ ಗೂಗ್ಲಿ ಮೂಲಕ ಎದುರಾಳಿ ಮಣಿಸುವ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಕೈಗೆ ಕ್ಯಾಮರಾ ಸಿಕ್ಕರೆ ಎದುರಿಗೆ ಸಿಗುವ ಪ್ರಾಣಿ , ಪಕ್ಷಿ ಖುಷ್‌. ಏಕೆಂದರೆ ಅನಿಲ್‌ ಅವರ ಕೈಚಳಕದಿಂದ ಪ್ರಾಣಿ ,ಪಕ್ಷಿಗಳ ಭಿನ್ನ ನೋಟ ಸೆರೆಯಾಗುತ್ತದೆ. ಛಾಯಾಗ್ರಾಹಕರಾಗಿಯೂ ಅನಿಲ್‌ ಕುಂಬ್ಳೆ ಆಗಾಗ ಕಾಡು ಸುತ್ತುತ್ತಾರೆ. ಅವರು ತೆಗೆದ ಫೋಟೋಗಳ ನೋಟ ಇಲ್ಲಿದೆ. 

ಅನಿಲ್‌ ಕುಂಬ್ಳೆ( Anil Kumble) ಅಪ್ಪಟ ಪರಿಸರ ಪ್ರಿಯ. ಕ್ರಿಕೆಟ್‌,ಉದ್ಯಮದ ಜತೆಯಲ್ಲಿ ಕಾಡು ಸುತ್ತುವುದು ಅವರ ಹವ್ಯಾಸ. ಭಾರತದ ಪ್ರಮುಖ ಕಾಡು, ಬೆಟ್ಟಗಳ ತಾಣಗಳನ್ನು ಹುಡುಕಿ ಹೋಗುವ ಅವರ ಕೈಯಲ್ಲಿ ಕ್ಯಾಮರಾ ಸದಾ ಇರುತ್ತದೆ. ಛಾಯಾಗ್ರಾಹಕರಾಗಿ ಅನಿಲ್‌ ಕುಂಬ್ಳೆ ಅತ್ಯುತ್ತಮ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ.
icon

(1 / 12)

ಕಾಡಿಗೆ ಹೋದರೆ ಹುಲಿ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ಫ್ರೇಮಿಗೆ ನಾಲ್ಕು ಹುಲಿ ಸಿಗುವುದು ಎಂದರೆ.. ಅದು ಮಧ್ಯಪ್ರದೇಶದ ಪೆಂಚ್‌ನಲ್ಲಿ(pench tiger reserve) ಹೀಗೆ ಒಟ್ಟೊಟ್ಟಿಗೆ ಸಿಕ್ಕರೆ, ಅನಿಲ್‌ ಕುಂಬ್ಳೆ ಅವರಿಗೆ ದಶಕದ ಹಿಂದೆ ಸಿಕ್ಕ ನೋಟ.
icon

(2 / 12)

ಕಾಡಿಗೆ ಹೋಗೋರು ಹುಲಿ ಸಿಗಲಿ ಎಂದು ಧ್ಯಾನಿಸಿಕೊಂಡು ಹೋಗುತ್ತಾರೆ. ಹೀಗೆ ರಾಜವೈಭೋಗದೊಂದಿಗೆ ಸಿಕ್ಕರೆ ಖುಷಿಯೇ ಬೇರೆ. ಬಂಡೀಪುರದಲ್ಲಿ ಅನಿಲ್‌ ಕುಂಬ್ಳೆ ಅವರ ಕಣ್ಣಿಗೆ ಸಿಕ್ಕ ಹುಲಿಯ ಭಿನ್ನ ನೋಟ.
icon

(3 / 12)

ಆನೆಗೆ ನೀರು ಎಂದರೆ ಪಂಚಪ್ರಾಣ. ಮಳೆಯಲ್ಲಿ ನೆನೆಯೋದು ಖುಷಿಯೇ. ಮಳೆಯ ನಡುವೆ ನಿಂತ ಆನೆಯ ನೋಟವನ್ನು ಅನಿಲ್‌ ವಿಭಿನ್ನವಾಗಿಯೇ ಕ್ಲಿಕ್ಕಿಸಿದ್ದಾರೆ.
icon

(4 / 12)

ಚಿರತೆ ನಾಚಿಕೆ ಸ್ವಭಾವದ ಸದಾ ಮರದ ಮೇಲೆ ಅಡಗಿ ಕುಳಿತುಕೊಳ್ಳುವ ಪ್ರಾಣಿ. ಕೆಳಕ್ಕೆ ಬಂದಾಗ ಯಾವುದೋ ಬೇಟೆಯತ್ತ ಚಿತ್ತ ನೆಟ್ಟ ಕ್ಷಣ ಅನಿಲ್‌ ಅವರ ಕ್ಯಾಮರಾಕ್ಕೆ ಕಂಡಿತ್ತು.
icon

(5 / 12)

ಕಾಡಿನಲ್ಲಿ ಹುಲಿ, ಚಿರತೆ ನಂತರ ಪ್ರಮುಖ ಬೇಟೆ ಪ್ರಾಣಿ ಸೀಳುನಾಯಿ( Indian Dhole). ಅವುಗಳ ತೀಕ್ಷ್ಣ ನೋಟ ಹಾಗೂ ಓಟ ಸೆರೆ ಸಿಗುವುದು ಕಷ್ಟವೇ. ಅನಿಲ್‌ ಸೀಳು ನಾಯಿ ಓಟವನ್ನು ಹಿಡಿದಿಟ್ಟಿದ್ದಾರೆ.,
icon

(6 / 12)

ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾಂಸಾಹಾರಿಗಳ ಬೇಟೆ ಪ್ರಾಣಿ ಜಿಂಕೆ.ಯಾರೇ ಬಂದರೂ ಜಿಂಕೆಗಳು ಕುತೂಹಲದಿಂದಲೇ ನೋಡುತ್ತವೆ. ಇನ್ನು ಅನಿಲ್‌ ಕುಂಬ್ಳೆ ಅವರೇ ಬಂದಿದ್ದಾರೆ ಎಂದರೆ, ಹೇಗಿದೆ ನೋಡಿ ನೋಟ.
icon

(7 / 12)

ಕಾಡಿನಲ್ಲಿ ನವಿಲು ನರ್ತನ ನೋಟ ನಿಜಕ್ಕೂ ಚಂದ. ಮರದ ಕೊಂಬೆ ಏರಿ ಕುಳಿತ ಮಯೂರ ಅನಿಲ್‌ ಅವರ ಮಸೂರಕ್ಕೆ ಸಿಕ್ಕಿದ್ದು ಹೀಗೆ.
icon

(8 / 12)

ಅರಣ್ಯ, ಹಸಿರು ಪ್ರದೇಶವೆಂದರೆ ಅಲ್ಲಿ ಬಗೆಬಗೆಯ ಹಕ್ಕಿಗಳು ಸಾಮಾನ್ಯ. ಅವುಗಳ ನಿತ್ಯದ ಜೀವನ ಯಾನವೂ ವಿಶೇಷವೇ. ಅಂತಹ ಹಕ್ಕಿಯೊಂದು ಗೂಡು ಕಟ್ಟಲು ಎಲೆ ಎತ್ತಿಕೊಂಡು ಹೊರಟ ಸನ್ನಿವೇಶ.
icon

(9 / 12)

ಅರಣ್ಯದಲ್ಲಿ ಹದ್ದುಗಳು ಸಿಗುವುದು ಕೂಡ ಅಪರೂಪವೇ. ಹೀಗೆ ಕಾಡಿನಲ್ಲಿ ಸಿಕ್ಕ ಕಂದು ಬಣ್ನದ ತಲೆಯ ಹದ್ದು( Grey-headed Fish Eagle) ಹೀಗಿದೆ.
icon

(10 / 12)

ಕಾಡಿನಲ್ಲಿ ನೀರು ಸಿಕ್ಕರೆ ಹಕ್ಕಿಗಳ ಖುಷಿಯೇ ಬೇರೆ. ಪುಟ್ಟ ಬಾತು ಹಕ್ಕಿಯೊಂದು ನೀರಿನಲ್ಲಿ ಆಟವಾಡುವಾಗ ಸೃಷ್ಟಿಸಿದ ಲೋಕ ಹೀಗಿತ್ತು,
icon

(11 / 12)

ಅನಿಲ್‌ ಕುಂಬ್ಳೆ ಅವರಿಗೆ ಹೀಗೆ ಸಫಾರಿ ಹೋಗುವುದೆಂದರೆ ಖುಷಿ. ಸ್ನೇಹಿತರು, ಕುಟುಂಬದವರೊಂದಿಗೆ ಕಾಡು ಸುತ್ತುತ್ತಾರೆ. ಗುರುವಾರ ಬೆಳಿಗ್ಗೆಯೂ ಬಂಡೀಪುರದಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಪಂಕಜ್‌ ಕುಮಾರ್‌ ಪಾಂಡೆ ಅವರೊಂದಿಗೆ ಅನಿಲ್‌ ಸುತ್ತು ಹಾಕಿದ್ದು ಹೀಗೆ.
icon

(12 / 12)

ಇತರ ಗ್ಯಾಲರಿಗಳು