Hair Care: ಕೂದಲು ಸೊಂಪಾಗಿ ಬೇಗ ಬೇಗ ಬೆಳೆಯಬೇಕಾ? ಹಾಗಾದ್ರೆ 5 ಮನೆಮದ್ದು ಪ್ರಯತ್ನಿಸಿ
- Hair Care Tips: ನಿಮ್ಮ ಕೂದಲು ಬೇಗ ಬೇಗ ಬೆಳೀತಾ ಇಲ್ಲ ಅಂತ ಚಿಂತೆನಾ? ಅದಕ್ಕೆ ದುಬಾರಿ ಶಾಂಪೂಗಳನ್ನು ಹಚ್ಚುವ ಅವಶ್ಯಕತೆ ಇಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ವಸ್ತುಗಳೇ ಸಾಕು. ಇಲ್ಲಿ ಹೇಳಿರುವ 5 ವಸ್ತುಗಳನ್ನು ಬಳಸಿ ನೋಡಿ. ಉದ್ದ ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.
- Hair Care Tips: ನಿಮ್ಮ ಕೂದಲು ಬೇಗ ಬೇಗ ಬೆಳೀತಾ ಇಲ್ಲ ಅಂತ ಚಿಂತೆನಾ? ಅದಕ್ಕೆ ದುಬಾರಿ ಶಾಂಪೂಗಳನ್ನು ಹಚ್ಚುವ ಅವಶ್ಯಕತೆ ಇಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ವಸ್ತುಗಳೇ ಸಾಕು. ಇಲ್ಲಿ ಹೇಳಿರುವ 5 ವಸ್ತುಗಳನ್ನು ಬಳಸಿ ನೋಡಿ. ಉದ್ದ ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.
(1 / 6)
ಉದ್ದವಾದ, ದಟ್ಟ ಕೂದಲು ಬೆಳೆಸುವ ಆಸೆ ಯಾರಿಗೆ ಇರುವುದಿಲ್ಲ? ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಏನೇನೋ ವಸ್ತುಗಳನ್ನು ತಂದು ಹಚ್ಚುತ್ತಾರೆ? ಆದರೆ ಮನೆಯಲ್ಲಿಯೇ ಸಿಗುವ ವಸ್ತುಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ರಾಸಾಯನಿಕಗಳಿಲ್ಲದ, ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳಿಂದಲೂ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಹುದು. ನಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಲ್ಲಿ ಯಾವುದೇ ರೀತಿಯ ಹಾನಿಕಾರಕಗಳು ಇರುವುದಿಲ್ಲ. ಅವು ನೈಸರ್ಗಿಕವಾಗಿ ಕೂದಲು ಬೆಳೆಯಲು ಉತ್ತೇಜಿಸುತ್ತವೆ. ಇಲ್ಲಿ ಹೇಳಿರುವ ಮನೆಮದ್ದುಗಳನ್ನೊಮ್ಮೆ ಪ್ರಯತ್ನಿಸಿ, ಉದ್ದ, ಸುಂದರ ಕೂದಲು ನಿಮ್ಮದಾಗಿಸಿಕೊಳ್ಳಿ.
(2 / 6)
ಗ್ರೀನ್ ಟೀ: ಗ್ರೀನ್ ಟೀ ಮಾಡಿದ ನಂತರ ಆ ಬ್ಯಾಗ್‌ಗಳನ್ನು ಎಸೆಯುವ ಬದಲಿಗೆ ಅದನ್ನು ಪುನಃ ಉಪಯೋಗಿಸಿಕೊಂಡು ದಟ್ಟ ಕೂದಲು ಪಡೆದುಕೊಳ್ಳಬಹುದು. ಹೇಗೆಂದರೆ, ನೀವು ಬಳಿಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಒಂದು ನಿಮಿಷ ನೀರಿನಲ್ಲಿ ಕುದಿಸಿ. ಆ ಬೆಚ್ಚಗಿನ ನೀರನ್ನು ನೆತ್ತಿಯ ಮೇಲೆ ಹಚ್ಚಿ. ಸುಮಾರು 45 ನಿಮಿಷಗಳ ಕಾಲ ಬಿಡಿ, ನಂತರ ತಂಪಾದ ನೀರಿನಿಂದ ತೊಳೆಯಿರಿ. ಗ್ರೀನ್ ಟೀಯಲ್ಲಿ ಆಂಟಿಒಕ್ಸಿಡೆಂಟ್ ಸಮೃದ್ದವಾಗಿದ್ದು, ಅದು ಕೂದಲಿನ ಬೆಳವಣಿಗೆ ಉತ್ತೇಜಿಸಿ, ಬೇರುಗಳಿಂದಲೇ ಬಲಪಡಿಸುತ್ತದೆ. (HT PHOTO)
(3 / 6)
ಎಗ್ ಮಾಸ್ಕ್: ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ತಯಾರಿಸಿಕೊಳ್ಳಿ. ಆ ಮಿಶ್ರಣವನ್ನು ನೆತ್ತಿಯ ಭಾಗದಿಂದ ಕೂದಲಿನ ತುದಿಯವರೆಗೆ ಹಚ್ಚಿ. ಸುಮಾರು 20 ನಿಮಿಷಗಳ ಕಾಲ ಬಿಡಿ. ನಂತದ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಪ್ರೋಟೀನ್, ಫಾಸ್ಪೋರಸ್, ಸತು, ಕಬ್ಬಿಣ ಮುಂತಾದ ಪೋಷಕಾಂಶಗಳಿಂದ ತುಂಬಿರುವ ಮಿಶ್ರಣವು ನಿಮ್ಮ ಕೂದಲಿಗೆ ಉತ್ತಮ ಪೋಷಣೆ ನೀಡಿ, ಹೊಳೆಯುವ ಉದ್ದ, ಆರೋಗ್ಯಕರ ಕೂದಲು ಪಡೆಯಲು ಸಹಾಯಮಾಡುತ್ತದೆ. (HT PHOTO)
(4 / 6)
ಮೆಂತ್ಯ: ಮೆಂತ್ಯ ತೆಗೆದುಕೊಂಡು ನೀರು ಸೇರಿಸಿ ನಯವಾಗಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ. 40 ನಿಮಿಷಗಳ ಕಾಲ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಮೆಂತ್ಯವು ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲ ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಉತ್ತಮವಾಗಿದೆ. (HT PHOTO)
(5 / 6)
ಈರುಳ್ಳಿ ರಸ: ಈರುಳ್ಳಿಯ ರಸ ಕೂದಲಿಗೆ ಅದ್ಭುತವಾಗಿದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ಅದರಿಂದ ರಸ ತೆಗೆದುಕೊಳ್ಳಿ. ಅದನ್ನು 20 ನಿಮಿಷಗಳ ಕಾಲ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಈರುಳ್ಳಿ ರಸವು ಸಲ್ಫರ್‌ನಿಂದ ಸಮೃದ್ಧವಾಗಿರುವುದರಿಂದ ಕೊಲೆಜಿನ್ ಉತ್ಪಾದನೆ ಹೆಚ್ಚಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. (HT PHOTO)
(6 / 6)
ಆಪಲ್ ಸೈಡರ್ ವಿನೆಗಾರ್: ಒಂದು ಕಪ್ ಬೆಚ್ಚಗಿನ ನೀರಿಗೆ 2 ಟೇಬಲ್ ಸ್ಪೂನ್ ಆಪಲ್ ಸೈಡರ್ ವಿನೆಗಾರ್ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನೆತ್ತಿಯ ಭಾಗಕ್ಕೆ ಹಚ್ಚಿ, ಸುಮಾರು ಮೂರು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಸೌಮ್ಯವಾದ ಶಾಂಪೂನಿಂದ ತೊಳೆಯಿರಿ. ಇದು ಕೂದಲಿನ ಫಾಲಿಕಲ್‌ಗಳನ್ನು ಉತ್ತೇಜಿಸುವುದರ ಮೂಲಕ ಕೂದಲು ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ನೆತ್ತಿಯನ್ನು ಸ್ವಚ್ಚಗೊಳಿಸಿ, ತಲೆ ಹೊಟ್ಟು ಸಮಸ್ಯೆಯಿಂದ ದೂರವಿರಿಸುತ್ತದೆ. ಇದು ಕೂದಲಿನ ಪಿಹಚ್ ಸಮತೋಲನವನ್ನು ಕಾಪಾಡುತ್ತದೆ. (HT PHOTO)
ಇತರ ಗ್ಯಾಲರಿಗಳು