Farheen Prabhakar: ಕ್ರಿಕೆಟಿಗ ಮನೋಜ್ ಪ್ರಭಾಕರ್ ಕೈ ಹಿಡಿದ 'ಹಳ್ಳಿಮೇಷ್ಟ್ರು' ನಟಿ ಬಿಂದಿಯಾ ಈಗ ಹೇಗಿದ್ದಾರೆ ನೋಡಿ.. ಫೋಟೋ ಗ್ಯಾಲರಿ!
- ಪ್ರೀತಿ ಮಾಡು ತಪ್ಪೇನಿಲ್ಲ… ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಹಳ್ಳಿಮೇಷ್ಟ್ರು' ಚಿತ್ರದಲ್ಲಿ ಹಾಡಿ, ನಟಿಸಿದ್ದ ಬಿಂದಿಯಾ, ಕನ್ನಡದಲ್ಲಿ ನಟಿಸಿದ್ದು ಎರಡೇ ಸಿನಿಮಾಗಳು. ಆದರೂ ಕನ್ನಡಾಭಿಮಾನಿಗಳು ಅವರನ್ನು ಮರೆತಿಲ್ಲ.
- ಪ್ರೀತಿ ಮಾಡು ತಪ್ಪೇನಿಲ್ಲ… ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಹಳ್ಳಿಮೇಷ್ಟ್ರು' ಚಿತ್ರದಲ್ಲಿ ಹಾಡಿ, ನಟಿಸಿದ್ದ ಬಿಂದಿಯಾ, ಕನ್ನಡದಲ್ಲಿ ನಟಿಸಿದ್ದು ಎರಡೇ ಸಿನಿಮಾಗಳು. ಆದರೂ ಕನ್ನಡಾಭಿಮಾನಿಗಳು ಅವರನ್ನು ಮರೆತಿಲ್ಲ.
(1 / 13)
ಕನ್ನಡದಲ್ಲಿ ಮಾತ್ರವಲ್ಲ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಬಿಂದಿಯಾ ನಟಿಸಿದ್ದು ಕೆಲವು ಸಿನಿಮಾಗಳು ಮಾತ್ರ, ಬಾಲಿವುಡ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ಬಿಂದಿಯಾ ನಟಿಸಿದ ಎರಡನೇ ಸಿನಿಮಾವೇ 'ಹಳ್ಳಿಮೇಷ್ಟ್ರು'.(PC: farheenprabhakar Instagram)
(2 / 13)
ಬಿಂದಿಯಾ ಮೂಲಕ ಹೆಸರು ಫರ್ಹೀನ್ ಖಾನ್. ತಮಿಳು ಮುಸ್ಲಿಂ ಸಮುದಾಯದಲ್ಲಿ ಜನಿಸಿದ ಈ ಚೆಲುವೆ, ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬಿಂದಿಯಾ ಎಂದೇ ಚಿರಪರಿಚಿತ.
(3 / 13)
1992 ರಲ್ಲಿ ತೆರೆ ಕಂಡ ಜಾನ್ ತೇರಿ ನಾಮ್ ಚಿತ್ರದ ಮೂಲಕ ಫರ್ಹೀನ್ ನಟನೆ ಆರಂಭಿಸಿದರು. ಈ ಚಿತ್ರದಲ್ಲಿ ಅವರು ರೊನಿತ್ ರಾಯ್‌ಗೆ ನಾಯಕಿಯಾಗಿ ನಟಿಸಿದ್ದರು.
(4 / 13)
ಮೊದಲ ಹಿಂದಿ ಸಿನಿಮಾ ನಂತರ 'ಹಳ್ಳಿಮೇಷ್ಟ್ರು' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಬಿಂದಿಯಾ, ನಂತರ ಡಾ. ವಿಷ್ಣುವರ್ಧನ್ ಜೊತೆ 'ರಾಯರು ಬಂದರು ಮಾವನ ಮನೆಗೆ' ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದ ಮುದ್ದಿನ ಹುಡುಗಿ ಚೆಂದ ಹಾಡು ಇಂದಿಗೂ ಫೇಮಸ್.
(5 / 13)
ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿರುವಾಗಲೇ ಫರ್ಹೀನ್ ಖಾನ್, ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ಪ್ರೀತಿಸಿ ಮದುವೆ ಆದರು. ಈ ಬ್ಯೂಟಿ ಈಗ ಫರ್ಹೀನ್ ಪ್ರಭಾಕರ್ ಎಂದೇ ಫೇಮಸ್.
(6 / 13)
ಫರ್ಹೀನ್ ಹಾಗೂ ಮನೋಜ್ ಪ್ರಭಾಕರ್ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಮೊದಲ ಪುತ್ರನ ಹೆಸರು ರಾಹಿಲ್ ಪ್ರಭಾಕರ್. ಎರಡನೇ ಮಗ ಮನವಂಶ್ ಪ್ರಭಾಕರ್.
(8 / 13)
ಸಿನಿಮಾಗಳಿಂದ ನಟಿಸಿ ದೂರವಿದ್ದರೂ ಚಿತ್ರಪ್ರೇಮಿಗಳು ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಅವರ ಸೌಂದರ್ಯ ಒಂದು ಕಾರಣವಾದರೆ, ಚಿತ್ರರಂಗದಲ್ಲಿರುವಾಗ ಆಕೆ ಕೆಲವೊಂದು ವಿವಾದಗಳಿಗೆ ಸಿಲುಕಿದ್ದು ಮತ್ತೊಂದು ಕಾರಣ.
(10 / 13)
ಇತ್ತ ಕನ್ನಡದಲ್ಲಿ ನಟಿಸುವಾಗ ಬಿಂದಿಯಾ, ಶೂಟಿಂಗ್ ಸೆಟ್‌ನಲ್ಲಿ ಯಾವಾಗಲೂ ಕಿರಿಕ್ ಮಾಡಿಕೊಳ್ಳುತ್ತಿದ್ದಲ್ಲದೆೆ ರವಿಚಂದ್ರನ್ ಅವರ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದರು ಎಂಬ ಸುದ್ದಿ ಇದೆ.
(11 / 13)
ಫರ್ಹೀನ್, ಮದುವೆಯಾದಾಗಿನಿಂದ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಇತ್ತೀಚೆಗೆ ಅವರು ಕಮ್ ಬ್ಯಾಕ್ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದು ಅಧಿಕೃತವಾಗಿ ಘೋಷಣೆ ಆಗಿಲ್ಲ.
(12 / 13)
2019 ರಲ್ಲಿ ಫರ್ಹೀನ್, ಮಾಲ್‌ವೊಂದಕ್ಕೆ ತೆರಳುವಾಗ ಆಕೆಯನ್ನು ಹಿಂಬಾಲಿಸಿದ ನಾಲ್ವರು ಆಕೆಯ ಬಳಿ ಇದ್ದ ವಸ್ತುಗಳನ್ನು ದೋಚಿದ್ದರು. ಆಗ ಇದು ದೊಡ್ಡ ಸುದ್ದಿಯಾಗಿತ್ತು.
ಇತರ ಗ್ಯಾಲರಿಗಳು