Amruthadhaare: ಭೂಮಿಕಾ-ಗೌತಮ್‌ ದಿವಾನ್‌ಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಅಮೃತಧಾರೆ ಧಾರಾವಾಹಿಯಲ್ಲಿ ಡುಮ್ಮ ಸರ್‌ ಸರ್‌ಪ್ರೈಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಭೂಮಿಕಾ-ಗೌತಮ್‌ ದಿವಾನ್‌ಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಅಮೃತಧಾರೆ ಧಾರಾವಾಹಿಯಲ್ಲಿ ಡುಮ್ಮ ಸರ್‌ ಸರ್‌ಪ್ರೈಸ್‌

Amruthadhaare: ಭೂಮಿಕಾ-ಗೌತಮ್‌ ದಿವಾನ್‌ಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಅಮೃತಧಾರೆ ಧಾರಾವಾಹಿಯಲ್ಲಿ ಡುಮ್ಮ ಸರ್‌ ಸರ್‌ಪ್ರೈಸ್‌

  • Amruthadhaare Kannada Serial today: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ಮತ್ತು ಭೂಮಿಕಾರ ವಿವಾಹ ವಾರ್ಷಿಕೋತ್ಸವದ ಸಂಭ್ರಮವಿದೆ. ತನ್ನ ಪ್ರೀತಿಯ ಮಡದಿಗೆ ಗೌತಮ್‌ ಸರ್‌ ಸರ್‌ಪ್ರೈಸ್‌ ಗಿಫ್ಟ್‌ ನೀಡಿದ್ದಾರೆ. ಇದೇ ಸಮಯದಲ್ಲಿ ಒಲವಿನಧಾರೆ ಸುರಿಸುವಂತಹ ಪ್ರೀತಿಯ ಮಾತುಗಳಿಗೆ ಇಂದಿನ ಎಪಿಸೋಡ್‌ ಸಾಕ್ಷಿಯಾಗಲಿದೆ.

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಮೋ ಪ್ರಕಟಿಸಿದೆ. ಆ ಪ್ರಮೋದಲ್ಲಿ ಗೌತಮ್‌ ಮತ್ತು ಭೂಮಿಕಾರ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಕಾಣಿಸಿದೆ. ವಿಶೇಷವಾಗಿ ಡುಮ್ಮ ಸರ್‌ ಮತ್ತು ಭೂಮಿಯ ಪ್ರೀತಿಯ ಮಾತುಗಳು ಕೇಳಿಸಿವೆ.  
icon

(1 / 8)

ಅಮೃತಧಾರೆ ಧಾರಾವಾಹಿಯು ಒಂದಿಷ್ಟು ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿತ್ತು. ಆದರೆ, ಈಗ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕೆ ಸೀರಿಯಲ್‌ ಅನ್ನು ತಿರುಗಿಸಲಾಗಿದೆ. ಸುಧಾ ಮತ್ತು ಭಾಗ್ಯಮ್ಮ ಗೌತಮ್‌ ಮನೆಯಲ್ಲಿದ್ದಾರೆ. ಭಾಗ್ಯಮ್ಮನಿಗೆ ಶಕುಂತಲಾದೇವಿಯ ಮನೆ ಇದೆಂದು ತಿಳಿದಿದೆ. ಶಕುಂತಲಾದೇವಿಗೆ ಕಾಣಿಸಿದಂತೆ ಮುಖ ಮರೆಸಿಕೊಳ್ಳುತ್ತಿದ್ದಾರೆ.
icon

(2 / 8)

ಇನ್ನೊಂದೆಡೆ ಡುಮ್ಮ ಸರ್‌  ತನ್ನ ತಾಯಿ ಮತ್ತು ತಂಗಿ ಮೃತಪಟ್ಟಿದ್ದಾರೆ ಎಂದು ತಿಥಿ ಕಾರ್ಯಗಳನ್ನು ಮುಗಿಸಿದ್ದಾರೆ. ತನ್ನ ತಾಯಿ ಮತ್ತು ತಂಗಿ ಮನೆಯಲ್ಲೇ ಇದ್ದರೂ ಗುರುತಿಸುವ ಸಂದರ್ಭ ಇನ್ನೂ ಬಂದಿಲ್ಲ. 
icon

(3 / 8)

ಇದೇ ಸಮಯದಲ್ಲಿ ಶಕುಂತಲಾ ಗ್ಯಾಂಗ್‌ಗೂ ಮನೆಯಲ್ಲಿಯೇ ತಾವು ಹುಡುಕುವವರು ಇದ್ದಾರೆ ಎಂದು ತಿಳಿದಿಲ್ಲ. ಈ ಘಟನೆ ಮುಂದೆನಾಗಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದಾಗ ಭೂಮಿಕಾ ಗೌತಮ್‌ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮ ಬಂದಿದೆ. 
icon

(4 / 8)

ಭೂಮಿಕಾಗೆ ಡುಮ್ಮಸರ್‌ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ರಿಂಗ್‌ ಉಡುಗೊರೆ ನೀಡಿದ್ದಾರೆ. ಆ ಉಂಗುರ ನೋಡಿ ಭೂಮಿಕಾ ತುಂಬಾ ಖುಷಿ ಪಡುತ್ತಾರೆ. "ಅನಿವರ್ಸರಿಗೆ ಸರ್‌ಪ್ರೈಸ್‌ ಕೊಡಬೇಕೆಂದು ತುಂಬಾ ತಯಾರಿ ಮಾಡಿಕೊಂಡಿದ್ದೀರಿ. ಥ್ಯಾಂಕ್‌ ಯು ಸೋ ಮಚ್‌" ಎಂದು ಭೂಮಿಕಾ ಹೇಳುತ್ತಾರೆ.
icon

(5 / 8)

"ಏನು ಗೊತ್ತ ಭೂಮಿಕಾ. ನೀವು ನನಗೆ ಡೈಲಿ ಈ ರೀತಿ ಕೋಟ್‌ ಆಗ್ತೀರಿ ಅಲ್ವಾ, ಅದೊಂದು ರೀತಿ ನನಗೆ ಖುಷಿ ನೀಡುತ್ತದೆ" ಎಂದು ಗೌತಮ್‌ ಹೇಳುತ್ತಾರೆ. "ಈ ಕೋಟ್‌ ಧರಿಸಿದ್ರೆ ಟೆಡ್ಡಿಬೇರ್‌ ರೀತಿ ಕಾಣಿಸ್ತಿರಿ" ಎಂದೆಲ್ಲ ಇಬ್ಬರ ಪ್ರೀತಿಯ ಮಾತುಕತೆಗಳು ಇರುತ್ತವೆ. ಬಳಿಕ ಇವರಿಬ್ಬರ ಅನಿರ್ಸರಿ ಕಾರ್ಯಕ್ರಮದ ಝಲಕ್‌ ಪ್ರಮೋದಲ್ಲಿ ಕಾಣಿಸಿದೆ. 
icon

(6 / 8)

ಗೌತಮ್‌ ಮತ್ತು ಭೂಮಿಕಾ ಅನಿವರ್ಸರಿಗೆ ಆನಂದ್‌ ಮತ್ತು ಅಪರ್ಣಾ ಕೇಕ್‌ ತಂದು ಕಟ್‌ ಮಾಡಿಸುವಂತೆ ಇದೆ. ಇದಾದ ಬಳಿಕ ಆನಂದ್‌ "ಮುಂದಿನ ಕಾರ್ಯಕ್ರಮ, ನೀವು ಗೆಳೆಯನ ಬಗ್ಗೆ, ಗೆಳೆಯ ನಿಮ್ಮ ಬಗ್ಗೆ ನಾಲ್ಕು ಲೈನ್‌ ಹೇಳಬೇಕು" ಎಂದು ಹೇಳುತ್ತಾರೆ.
icon

(7 / 8)

"ನೀವು ಬರುವ ಮುನ್ನ ಪ್ರೀತಿಸುವವರೆಲ್ಲ ಫೂಲ್ಸ್‌ ಅಂದುಕೊಂಡಿದ್ದೆ. ಈಗ ಪ್ರೀತಿಸದೆ ಇರುವವರು ಫೂಲ್ಸ್‌ ಎನಿಸುತ್ತಿದೆ" ಎಂದು ಗೌತಮ್‌ ಹೇಳುತ್ತಾರೆ. ಇದಾದ ಬಳಿಕ ಗೌತಮ್‌ ಭೂಮಿಕಾಗೆ ಹೂವು ನೀಡುತ್ತಾರೆ. ಇಬ್ಬರು ಹಗ್‌ ಮಾಡುತ್ತಾರೆ. ಇಂದಿನ ಎಪಿಸೋಡ್‌ನಲ್ಲಿ ಹೀಗೆ ಇವರಿಬ್ಬರ ಅನಿವರ್ಸರಿಯ ಖುಷಿ ಇರಲಿದೆ. 
icon

(8 / 8)

ಇತರ ಗ್ಯಾಲರಿಗಳು