ನಿವೃತ್ತಿಯ ಬೆನ್ನಲ್ಲೇ ಆತಂಕದಲ್ಲಿ ಆರ್ ಅಶ್ವಿನ್ ದಾಖಲೆ; ಈ ವಿಶ್ವದಾಖಲೆ ಮೇಲೆ ಕಣ್ಣಿಟ್ಟ ಆಸೀಸ್ ಬೌಲರ್ಸ್
- Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ವಿಶ್ವ ದಾಖಲೆ ಆತಂಕಕ್ಕೆ ಸಿಲುಕಿದೆ.
- Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ವಿಶ್ವ ದಾಖಲೆ ಆತಂಕಕ್ಕೆ ಸಿಲುಕಿದೆ.
(1 / 8)
ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಸೋತರೆ ರೋಹಿತ್ ಶರ್ಮಾ ನಾಯಕತ್ವ ಕಳೆದುಕೊಳ್ಳಬಹುದು, ವಿರಾಟ್ ಕೊಹ್ಲಿ ರೆಡ್-ಬಾಲ್ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ ಎಂಬ ವದಂತಿಗಳು ಹಬ್ಬಿದ್ದವು. ಇದನ್ನು ಸಾಕಷ್ಟು ಮಂದಿ ನಿರೀಕ್ಷಿಸಿದ್ದರು. ಆದರೆ, ರವಿಚಂದ್ರನ್ ಅಶ್ವಿನ್ ವಿದಾಯ ಹೇಳುತ್ತಾರೆದು ನಿರೀಕ್ಷಿಸಿರಲಿಲ್ಲ.(AFP)
(2 / 8)
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಆಘಾತವನ್ನುಂಟು ಮಾಡಿದೆ. ಯಾರು ನಿರೀಕ್ಷೆಯೂ ಮಾಡಿರಲಿಲ್ಲ. ಇನ್ನೂ ಎರಡು-ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಇದೀಗ ನಿವೃತ್ತಿಯ ಬೆನ್ನಲ್ಲೇ ತನ್ನ ದಾಖಲೆಯೊಂದು ಆತಂಕಕ್ಕೆ ಸಿಲುಕಿದೆ.
(3 / 8)
ಅಶ್ವಿನ್ ತಮ್ಮ ಅದ್ಭುತ ಟೆಸ್ಟ್ ವೃತ್ತಿಜೀವನದಲ್ಲಿ ಹಲವಾರು ವೈಯಕ್ತಿಕ ದಾಖಲೆಗಳನ್ನು ಬರೆದಿದ್ದಾರೆ. ಇನ್ನಷ್ಟು ಹಲವು ದಾಖಲೆ ಬರೆಯುವ ಅವಕಾಶವೂ ಇತ್ತು. ಆದರೆ, ಅವರ ಹಠಾತ್ ನಿವೃತ್ತಿಯ ಕಾರಣ ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ತನ್ನ ಶ್ರೇಷ್ಠ ವಿಶ್ವ ದಾಖಲೆ ಒಂದು ಅಪಾಯದಲ್ಲಿದೆ.
(4 / 8)
ಆದರೆ ಈ ದಾಖಲೆ ಮುರಿಯುವುದು ಭಾರತೀಯ ಆಟಗಾರನಲ್ಲ. ಎದುರಾಳಿ ಆಸ್ಟ್ರೇಲಿಯಾದ ಇಬ್ಬರು ಬೌಲರ್ಗಳು. ಸ್ಪಿನ್ನರ್ ನಾಥನ್ ಲಿಯಾನ್ ಮತ್ತು ವೇಗಿ ಪ್ಯಾಟ್ ಕಮಿನ್ಸ್ ಅವರಿಗೆ ಅಶ್ವಿನ್ ಅವರ ವಿಶ್ವ ದಾಖಲೆ ಮುರಿಯುವ ಅವಕಾಶ ಇದೆ. ಇಷ್ಟಕ್ಕೂ ಯಾವುದು ಆ ದಾಖಲೆ? ಇಲ್ಲಿದೆ ವಿವರ.
(5 / 8)
ವಿಶ್ವ ಚೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿದೆ. ಡಬ್ಲ್ಯುಟಿಸಿಯಲ್ಲಿ 41 ಪಂದ್ಯಗಳ 78 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದು, 195 ವಿಕೆಟ್ ಪಡೆದಿದ್ದಾರೆ. ಇದೀಗ ಈ ದಾಖಲೆ ಅಪಾಯಕ್ಕೆ ಸಿಲುಕಿದೆ.
(6 / 8)
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಲಿಯಾನ್ ಮತ್ತು ಕಮಿನ್ಸ್ ಅವರಿಗೆ ಅಶ್ವಿನ್ ಅವರ ಈ ದಾಖಲೆಯನ್ನು ಮುರಿಯಲು ಅವಕಾಶ ಇದೆ. ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಲಿಯಾನ್ ಮತ್ತು ಕಮಿನ್ಸ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
(7 / 8)
ಲಿಯಾನ್ 46 ಪಂದ್ಯಗಳ 82 ಇನ್ನಿಂಗ್ಸ್ಗಳಲ್ಲಿ ಒಟ್ಟು 190 ವಿಕೆಟ್ ಪಡೆದಿದ್ದಾರೆ. ಕಮಿನ್ಸ್ 45 ಪಂದ್ಯಗಳ 84 ಇನ್ನಿಂಗ್ಸ್ಗಳಲ್ಲಿ 189 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರನ್ನು ಹಿಂದಿಕ್ಕಲು ಲಿಯಾನ್ಗೆ 6 ವಿಕೆಟ್, ಮತ್ತು ಕಮಿನ್ಸ್ಗೆ 7 ವಿಕೆಟ್ಗಳ ಅಗತ್ಯವಿದೆ.(HT_PRINT)
ಇತರ ಗ್ಯಾಲರಿಗಳು