Most Wickets: 2024ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್; ಅಗ್ರಸ್ಥಾನ ಕಾಯ್ದುಕೊಂಡ ಜಸ್ಪ್ರೀತ್ ಬುಮ್ರಾ
- Most Wickets: 2024ರ ಕ್ಯಾಲೆಂಡರ್ ವರ್ಷದಲ್ಲಿ ಈವರೆಗೂ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಟಾಪ್-6 ಬೌಲರ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಇಬ್ಬರು ಇಂಗ್ಲೆಂಡ್ ಆಟಗಾರರು ಸ್ಥಾನ ಪಡೆದರೆ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡದ ತಲಾ ಒಬ್ಬರಿದ್ದಾರೆ.
- Most Wickets: 2024ರ ಕ್ಯಾಲೆಂಡರ್ ವರ್ಷದಲ್ಲಿ ಈವರೆಗೂ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಟಾಪ್-6 ಬೌಲರ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಇಬ್ಬರು ಇಂಗ್ಲೆಂಡ್ ಆಟಗಾರರು ಸ್ಥಾನ ಪಡೆದರೆ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡದ ತಲಾ ಒಬ್ಬರಿದ್ದಾರೆ.
(1 / 6)
ಜಸ್ಪ್ರೀತ್ ಬುಮ್ರಾ 2024ರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ ಆಡಿದ 12 ಪಂದ್ಯಗಳಿಂದ 62 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲೂ ಅವರೇ ನಂಬರ್ 1 ಆಗಿದ್ದಾರೆ. ನವೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಕೊನೆಯ ಟೆಸ್ಟ್ ಆಡಲಿದೆ. (AP)
(2 / 6)
ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ 2ನೇ ಸ್ಥಾನದಲ್ಲಿದ್ದಾರೆ. 11 ಟೆಸ್ಟ್ ಪಂದ್ಯಗಳಲ್ಲಿ 52 ವಿಕೆಟ್ ಉರುಳಿಸಿದ್ದಾರೆ. ಇವರು ಈ ವರ್ಷ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿರುವುದು ವಿಶೇಷ.(AFP)
(3 / 6)
ಇಂಗ್ಲೆಂಡ್‌ನ ಯುವ ಸ್ಪಿನ್ನರ್ ಶೋಯೆಬ್ ಬಶೀರ್ 2024ರಲ್ಲಿ 15 ಟೆಸ್ಟ್‌ಗಳಲ್ಲಿ 49 ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 8 ವಿಕೆಟ್ ಕಬಳಿಸಿದ್ದಾರೆ(AFP)
(4 / 6)
ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಈ ವರ್ಷ ಟೆಸ್ಟ್‌ನಲ್ಲಿ ಮಾರಕ ಬೌಲಿಂಗ್ ನಡೆಸಿದ್ದಾರೆ. 9 ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ.(AFP)
(5 / 6)
ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ 2024ರಲ್ಲಿ 9 ಪಂದ್ಯಗಳಲ್ಲಿ 48 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಈ ವರ್ಷ ಶ್ರೀಲಂಕಾ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ.(AP)
(6 / 6)
ಭಾರತದ ಲೆಜೆಂಡರಿ ಸ್ಪಿನ್ನರ್ ಆರ್ ಅಶ್ವಿನ್ 2024ರಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ನಿವೃತ್ತಿ ನೀಡುವ ಮೂಲಕ 50 ವಿಕೆಟ್ ಪಡೆಯುವ ಅವಕಾಶ ಕಳೆದುಕೊಂಡರು. ಈ ವರ್ಷ 11 ಟೆಸ್ಟ್‌ಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. ಡಿಸೆಂಬರ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.(AFP)
ಇತರ ಗ್ಯಾಲರಿಗಳು