Asian Champions Trophy: ದಕ್ಷಿಣ ಕೊರಿಯಾ ಮಣಿಸಿ ಫೈನಲ್​ಗೇರಿದ ಭಾರತ; ಪ್ರಶಸ್ತಿ ಸುತ್ತಿನಲ್ಲಿ ಚೀನಾ ಎದುರಾಳಿ-harmanpreet singh strikes twice as clinical india march into asian champions trophy final china vs india final prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asian Champions Trophy: ದಕ್ಷಿಣ ಕೊರಿಯಾ ಮಣಿಸಿ ಫೈನಲ್​ಗೇರಿದ ಭಾರತ; ಪ್ರಶಸ್ತಿ ಸುತ್ತಿನಲ್ಲಿ ಚೀನಾ ಎದುರಾಳಿ

Asian Champions Trophy: ದಕ್ಷಿಣ ಕೊರಿಯಾ ಮಣಿಸಿ ಫೈನಲ್​ಗೇರಿದ ಭಾರತ; ಪ್ರಶಸ್ತಿ ಸುತ್ತಿನಲ್ಲಿ ಚೀನಾ ಎದುರಾಳಿ

  • Asian Champions Trophy: ಪುರುಷರ ಏಷ್ಯನ್​ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​​​ನಲ್ಲಿ ದಕ್ಷಿಣ ಕೊರಿಯಾ ತಂಡದ ವಿರುದ್ಧ 4-1 ಗೋಲುಗಳಿಂದ ಮಣಿಸಿ ಫೈನಲ್​ ಪ್ರವೇಶಿಸಿದೆ. ಅಲ್ಲದೆ, ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಚೀನಾ ತಂಡವನ್ನು ಎದುರಿಸಲಿದೆ.

ಹರ್ಮನ್ ಪ್ರೀತ್ ಸಿಂಗ್, ಉತ್ತಮ್ ಸಿಂಗ್ ಮತ್ತು ಜರ್ಮನ್ ಪ್ರೀತ್ ಸಿಂಗ್ ಗಳಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​​ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ಫೈನಲ್​​ ಪ್ರವೇಶಿಸಿದೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ವಿಜೇತ ಭಾರತ ಈಗ ಫೈನಲ್​​ನಲ್ಲಿ ಚೀನಾ ತಂಡವನ್ನು ಎದುರಿಸಲಿದ್ದು, ಹಾಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.
icon

(1 / 6)

ಹರ್ಮನ್ ಪ್ರೀತ್ ಸಿಂಗ್, ಉತ್ತಮ್ ಸಿಂಗ್ ಮತ್ತು ಜರ್ಮನ್ ಪ್ರೀತ್ ಸಿಂಗ್ ಗಳಿಸಿದ 2 ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​​ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ಫೈನಲ್​​ ಪ್ರವೇಶಿಸಿದೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ವಿಜೇತ ಭಾರತ ಈಗ ಫೈನಲ್​​ನಲ್ಲಿ ಚೀನಾ ತಂಡವನ್ನು ಎದುರಿಸಲಿದ್ದು, ಹಾಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

ಭಾರತದ ಪರ ಉತ್ತಮ್ ಸಿಂಗ್ (13ನೇ ನಿಮಿಷ), ನಾಯಕ ಹರ್ಮನ್ ಪ್ರೀತ್ ಸಿಂಗ್ (19 ಮತ್ತು 45ನೇ ನಿಮಿಷ) ಮತ್ತು ಜರ್ಮನ್ ಪ್ರೀತ್ ಸಿಂಗ್ (32ನೇ ನಿಮಿಷ) ಗೋಲು ಗಳಿಸಿದರೆ, ಕೊರಿಯಾ ಪರ ಯಾಂಗ್ ಜಿಹುನ್ (33ನೇ ನಿಮಿಷ) ಏಕೈಕ ಗೋಲು ಗಳಿಸಿದರು. ಪಂದ್ಯದ ಆರಂಭದಿಂದ ಕೊನೆಯ ತನಕ ಪ್ರಾಬಲ್ಯ ಸಾಧಿಸಿದ ಭಾರತ, ಕೊರಿಯಾಗೆ ಸೋಲುಣಿಸುವಲ್ಲಿ ಯಶಸ್ಸು ಕಂಡಿತು.
icon

(2 / 6)

ಭಾರತದ ಪರ ಉತ್ತಮ್ ಸಿಂಗ್ (13ನೇ ನಿಮಿಷ), ನಾಯಕ ಹರ್ಮನ್ ಪ್ರೀತ್ ಸಿಂಗ್ (19 ಮತ್ತು 45ನೇ ನಿಮಿಷ) ಮತ್ತು ಜರ್ಮನ್ ಪ್ರೀತ್ ಸಿಂಗ್ (32ನೇ ನಿಮಿಷ) ಗೋಲು ಗಳಿಸಿದರೆ, ಕೊರಿಯಾ ಪರ ಯಾಂಗ್ ಜಿಹುನ್ (33ನೇ ನಿಮಿಷ) ಏಕೈಕ ಗೋಲು ಗಳಿಸಿದರು. ಪಂದ್ಯದ ಆರಂಭದಿಂದ ಕೊನೆಯ ತನಕ ಪ್ರಾಬಲ್ಯ ಸಾಧಿಸಿದ ಭಾರತ, ಕೊರಿಯಾಗೆ ಸೋಲುಣಿಸುವಲ್ಲಿ ಯಶಸ್ಸು ಕಂಡಿತು.(Hockey India)

ಮತ್ತೊಂದು ಸೆಮಿಫೈನಲ್​​ನಲ್ಲಿ ಚೀನಾ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿ ಫೈನಲ್​ಗೇರಿದೆ. ಪೆನಾಲ್ಟಿ ಶೂಟೌಟ್​​ನಲ್ಲಿ ಪಾಕ್​ ತಂಡವನ್ನು 0-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಸೆಪ್ಟೆಂಬರ್​​ 17ರ ಮಂಗಳವಾರ ಫೈನಲ್​​ನಲ್ಲಿ ಭಾರತ ತಂಡವನ್ನು ಆತಿಥೇಯ ಚೀನಾವನ್ನು ಎದುರಿಸಲಿದೆ. 
icon

(3 / 6)

ಮತ್ತೊಂದು ಸೆಮಿಫೈನಲ್​​ನಲ್ಲಿ ಚೀನಾ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿ ಫೈನಲ್​ಗೇರಿದೆ. ಪೆನಾಲ್ಟಿ ಶೂಟೌಟ್​​ನಲ್ಲಿ ಪಾಕ್​ ತಂಡವನ್ನು 0-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಸೆಪ್ಟೆಂಬರ್​​ 17ರ ಮಂಗಳವಾರ ಫೈನಲ್​​ನಲ್ಲಿ ಭಾರತ ತಂಡವನ್ನು ಆತಿಥೇಯ ಚೀನಾವನ್ನು ಎದುರಿಸಲಿದೆ. (Hockey India)

ಫೈನಲ್​​​ಗೂ ಮುನ್ನ ಚೀನಾ ಮತ್ತು ಭಾರತ ತಂಡಗಳು ಲೀಗ್​​ನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿತ್ತು.
icon

(4 / 6)

ಫೈನಲ್​​​ಗೂ ಮುನ್ನ ಚೀನಾ ಮತ್ತು ಭಾರತ ತಂಡಗಳು ಲೀಗ್​​ನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿತ್ತು.(Hockey India)

2011ರಿಂದ ಆರಂಭಗೊಂಡ ಈ ಟೂರ್ನಿಯಲ್ಲಿ ಭಾರತ 4 ಸಲ ಚಾಂಪಿಯನ್ ಆಗಿದೆ. ಎರಡು ಬಾರಿ ಪಾಕಿಸ್ತಾನ ಚಾಂಪಿಯನ್ ಆಗಿದ್ದು, ಸೌತ್ ಕೊರಿಯಾ ವಿರುದ್ಧ ಒಂದು ಸಲ ಪ್ರಶಸ್ತಿ ಗೆದ್ದಿದೆ.
icon

(5 / 6)

2011ರಿಂದ ಆರಂಭಗೊಂಡ ಈ ಟೂರ್ನಿಯಲ್ಲಿ ಭಾರತ 4 ಸಲ ಚಾಂಪಿಯನ್ ಆಗಿದೆ. ಎರಡು ಬಾರಿ ಪಾಕಿಸ್ತಾನ ಚಾಂಪಿಯನ್ ಆಗಿದ್ದು, ಸೌತ್ ಕೊರಿಯಾ ವಿರುದ್ಧ ಒಂದು ಸಲ ಪ್ರಶಸ್ತಿ ಗೆದ್ದಿದೆ.(Hockey India)

2023ರಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವು ಮಲೇಷ್ಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್ ಆಗಿತ್ತು. ಇದೀಗ ಐದನೇ ಬಾರಿಗೆ ಚಾಂಪಿಯನ್ ಆಗಲು ಭಾರತ ಸಜ್ಜಾಗಿದೆ. ಮತ್ತೊಂದೆಡೆ ಚೀನಾ ಚೊಚ್ಚಲ ಚಾಂಪಿಯನ್ ಪಟ್ಟಕ್ಕೇರಲು ಭರ್ಜರಿ ಕಸರತ್ತು ನಡೆಸುತ್ತಿದೆ.
icon

(6 / 6)

2023ರಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವು ಮಲೇಷ್ಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್ ಆಗಿತ್ತು. ಇದೀಗ ಐದನೇ ಬಾರಿಗೆ ಚಾಂಪಿಯನ್ ಆಗಲು ಭಾರತ ಸಜ್ಜಾಗಿದೆ. ಮತ್ತೊಂದೆಡೆ ಚೀನಾ ಚೊಚ್ಚಲ ಚಾಂಪಿಯನ್ ಪಟ್ಟಕ್ಕೇರಲು ಭರ್ಜರಿ ಕಸರತ್ತು ನಡೆಸುತ್ತಿದೆ.(Hockey India)


ಇತರ ಗ್ಯಾಲರಿಗಳು