ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾದ್ರೆ ಪಾದಗಳ ಮೇಲಾಗುತ್ತೆ ಪರಿಣಾಮ; ಈ 6 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡ್ಬೇಡಿ, ಕಾಳಜಿ ಇರಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾದ್ರೆ ಪಾದಗಳ ಮೇಲಾಗುತ್ತೆ ಪರಿಣಾಮ; ಈ 6 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡ್ಬೇಡಿ, ಕಾಳಜಿ ಇರಲಿ

ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾದ್ರೆ ಪಾದಗಳ ಮೇಲಾಗುತ್ತೆ ಪರಿಣಾಮ; ಈ 6 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡ್ಬೇಡಿ, ಕಾಳಜಿ ಇರಲಿ

  • ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಡಯಾಬಿಟಿಸ್‌ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಜೀವನಶೈಲಿ. ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗಿರುವುದನ್ನು ಪಾದಗಳಿಂದಲೇ ಗುರುತಿಸಬಹುದು. ಮಾತ್ರವಲ್ಲ ಸಕ್ಕರೆ ಪ್ರಮಾಣ ಅಥವಾ ಮಧುಮೇಹ ಹೆಚ್ಚಾದ್ರೆ ಪಾದಗಳಲ್ಲಿ ಕೆಲವು ಸಮಸ್ಯೆಗಳು ಕಾಣಿಸಬಹುದು. ಇದನ್ನು ನಿರ್ಲಕ್ಷ್ಯ ಮಾಡ್ಬೇಡಿ. 

ಭಾರತವು ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಸಮರ್ಪಕ ಆಹಾರಪದ್ಧತಿ ಹಾಗೂ ಕಳಪೆ ಜೀವನಶೈಲಿ ಮಧುಮೇಹ ಹೆಚ್ಚಲು ಪ್ರಮುಖ ಕಾರಣವಾಗಿದೆ. ಮಧುಮೇಹಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೇ ಹೋದಲ್ಲಿ, ಇದು ಹೃದ್ರೋಗ, ನರಗಳ ಹಾನಿ ಮತ್ತು ಮಧುಮೇಹ ರೆಟಿನೋಪತಿಯಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರೊಂದಿಗೆ ಪಾದದ ಸಮಸ್ಯೆಯು ಮಧುಮೇಹಿಗಳಲ್ಲಿ ಹೆಚ್ಚು. ಮಧುಮೇಹ ಇರುವವರು ಪಾದದ ಕಾಳಜಿ ತಪ್ಪದೇ ಮಾಡಬೇಕು. 
icon

(1 / 10)

ಮಧುಮೇಹದಿಂದ ಕಾಲ್ಬೆರಳು ಅಥವಾ ಕಾಲು ಕಳೆದುಕೊಳ್ಳುವ ಭಯ ಅನೇಕರಿಗಿದೆ. ಹಾಗಾಗಿ ಮಧುಮೇಹಿಗಳು ಪ್ರತಿದಿನ ತಮ್ಮ ಪಾದಗಳನ್ನು ಗಮನಿಸುತ್ತಿರಬೇಕು. ಜೊತೆಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವುದು ಮುಖ್ಯವಾಗುತ್ತದೆ, ಇದು ನಿಮ್ಮ ಪಾದಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಧುಮೇಹಿಗಳಲ್ಲಿ ಕಾಣಿಸುವ ಪಾದದ ತೊಂದರೆಗಳು ಯಾವುವು, ಪಾದದ ಆರೈಕೆ ಹೇಗಿರಬೇಕು ಎಂಬ ವಿವರ ಇಲ್ಲಿದೆ. 
icon

(2 / 10)

ಪಾದಗಳಲ್ಲಿ ಗುರುತಿಸಬಹುದಾದ ಮಧುಮೇಹದ 6 ಚಿಹ್ನೆಗಳು ಹೀಗಿವೆ: 1. ಹಿಮ್ಮಡಿ, ಅಡಿಭಾಗ ಮತ್ತು ಕಾಲ್ಬೆರಳುಗಳಲ್ಲಿ ನಡೆಯಲು ಸಾಧ್ಯವಾಗದಂತಹ ನೋವು, 2. ಮರಗಟ್ಟುವಿಕೆ, 3. ಅಸ್ವಸ್ಥತೆ ಅಥವಾ ದೌರ್ಬಲ್ಯ. ಇದು ಸಾಮಾನ್ಯವಾಗಿ ಎರಡೂ ಪಾದಗಳಲ್ಲಿ ಪ್ರಾರಂಭವಾಗುತ್ತದೆ, 4. ಜುಮ್ಮೆನಿಸುವಿಕೆ, 5. ಇದ್ದಕ್ಕಿದ್ದಂತೆ ಪಾದಗಳು ತಣ್ಣಗಾಗುವುದು, 6. ಪಾದಗಳಲ್ಲಿ ಸ್ಪರ್ಶ ಜ್ಞಾನ ಕಳೆದುಕೊಳ್ಳುವುದು.
icon

(3 / 10)

ಮಧುಮೇಹವು ಪಾದಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ: ಮಧುಮೇಹವು ನರಗಳ ಹಾನಿಯನ್ನು ಉಂಟುಮಾಡಬಹುದು. ಇದನ್ನು ಡಯಾಬಿಟಿಕ್ ನ್ಯೂರೋಪತಿ ಎಂದೂ ಕರೆಯುತ್ತಾರೆ. ಇದು ಜುಮ್ಮೆನಿಸುವಿಕೆ ಮತ್ತು ನೋವನ್ನು ಉಂಟುಮಾಡಬಹುದು. ಅಲ್ಲದೆ ಪಾದದಲ್ಲಿ ಏನಾದರು ಇಟ್ಟರೆ, ಮುಟ್ಟಿದರೆ ನಿಮಗೆ ಸ್ಪರ್ಶ ಜ್ಞಾನ ಸಿಗದಂತಾಗಬಹುದು. ಇದರಿಂದ ಕಡಿತ ಮತ್ತು ಹುಣ್ಣುಗಳಿಗೆ ಕಾರಣವಾಗಿ, ಸೋಂಕಿಗೆ ಒಳಗಾಗಬಹುದು.
icon

(4 / 10)

ಮಧುಮೇಹವು ನಿಮ್ಮ ಪಾದಗಳಲ್ಲಿ ರಕ್ತದ ಹರಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಾಲುಗಳು ಮತ್ತು ಪಾದಗಳಿಗೆ ಸಾಕಷ್ಟು ರಕ್ತ ಹರಿಯದಿರುವುದು ಹುಣ್ಣು ಅಥವಾ ಸೋಂಕನ್ನು ಗುಣಪಡಿಸಲು ಕಷ್ಟವಾಗುತ್ತದೆ. ಈ ಸೋಂಕು ಗ್ಯಾಂಗ್ರೀನ್‌ಗೆ ಕಾರಣವಾಗಬಹುದು. ಅದಕ್ಕಾಗಿ ಪಾದಗಳ ಆರೈಕೆ ಹಾಗೂ ಕಾಳಜಿ ಮಾಡುವುದು ಬಹಳ ಮುಖ್ಯವಾಗುತ್ತದೆ. ಮಧುಮೇಹಿಗಳು ಪಾದದ ಕಾಳಹಿ ಹೇಗೆ ಮಾಡಬೇಕು ಎಂಬುದನ್ನು ಮುಂದೆ ಓದಿ. 
icon

(5 / 10)

ಪ್ರತಿದಿನ ನಿಮ್ಮ ಪಾದಗಳನ್ನು ಪರೀಕ್ಷಿಸಿ: ನೀವು ಪಾದದ ಸಮಸ್ಯೆಗಳನ್ನು ಹೊಂದಿರಬಹುದು. ಆದರೆ, ನಿಮ್ಮ ಪಾದಗಳಲ್ಲಿ ನೋವು ಇಲ್ಲದಿರಬಹುದು. ನೀವು ಕೆಲವು ಪಾದದ ಸಮಸ್ಯೆಗಳನ್ನು ಹೊಂದಿದ್ದರೆ ಅದು ನಿಮ್ಮ ಪಾದದ ಮೇಲೆ ನೋವನ್ನು ಉಂಟುಮಾಡುವ ಸಾಧ್ಯತೆಯಿದೆ. ಒಂದು ಗುಳ್ಳೆ ಅಥವಾ ಹುಣ್ಣು ಆರಂಭಿಕ ರೋಗ ಲಕ್ಷಣವಾಗಿರಬಹುದು. ಪ್ರತಿ ದಿನವೂ ನಿಮ್ಮ ಪಾದಗಳನ್ನು ಪರೀಕ್ಷಿಸುವುದರಿಂದ ಸಮಸ್ಯೆ ಹದಗೆಡುವ ಮೊದಲು ಅವನ್ನು ಗುರುತಿಸಲು ಸಹಾಯಕವಾಗುತ್ತದೆ.
icon

(6 / 10)

ಪ್ರತಿದಿನ ನಿಮ್ಮ ಪಾದಗಳನ್ನು ತೊಳೆಯಿರಿ: ನಿಮ್ಮ ಪಾದಗಳನ್ನು ಸಾಬೂನಿನಿಂದ ಉಗುರು ಬೆಚ್ಚಗಿನ (ತುಂಬಾ ಬಿಸಿ ನೀರು ಬಳಸಬಾರದು) ನೀರಿನಲ್ಲಿ ತೊಳೆಯಿರಿ. ನಿಮ್ಮ ಪಾದಗಳನ್ನು ತೊಳೆದು ಟವೆಲ್ ನಿಂದ ಒರೆಸಿದ ನಂತರ, ನಿಮ್ಮ ಕಾಲ್ಬೆರಳುಗಳ ನಡುವೆ ಟಾಲ್ಕಮ್ ಪೌಡರ್ ಹಾಕಿ. ಕಾಲ್ಬೆರಳುಗಳ ನಡುವಿನ ಚರ್ಮವು ತೇವವಾಗಿರುತ್ತದೆ. ಹೀಗಾಗಿ ಸೋಂಕನ್ನು ತಡೆಗಟ್ಟಲು ಪೌಡರ್ ಹಾಕುವುದರಿಂದ ಇದು ಚರ್ಮವನ್ನು ಒಣಗಿಸುತ್ತದೆ.
icon

(7 / 10)

ಧೂಮಪಾನ ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ: ನೀವು ಮಧುಮೇಹದಿಂದ ಬಳಲುತ್ತಿದ್ದು, ಇದು ವಿಪರೀತ ಮಟ್ಟಕ್ಕೆ ಹೋಗಿದ್ದರೆ ನೀವು ಬಹಳ ಜಾಗರೂಕರಾಗಿರಬೇಕು. ಮೇಲೆ ತಿಳಿಸಿದಂತಹ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪಾದಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ. ಯಾಕೆಂದರೆ ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ. ಒಮ್ಮೆ ನಿಮ್ಮಲ್ಲಿ ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ಅವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇಲ್ಲದಿದ್ದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬಹುದು.
icon

(8 / 10)

ನಿಮ್ಮ ಪಾದಗಳಿಗೆ ರಕ್ತ ಹರಿಯುವಂತೆ ಮಾಡಿ: ದಿನವಿಡೀ ಕೆಲವು ನಿಮಿಷಗಳ ಕಾಲ ನಿಮ್ಮ ಕಾಲ್ಬೆರಳುಗಳನ್ನು ತಿರುಗಿಸಿ. ನಿಮ್ಮ ಪಾದಗಳು ಮತ್ತು ಕಾಲುಗಳಲ್ಲಿ ರಕ್ತದ ಹರಿವನ್ನು ಸರಾಗವಾಗಿ ಸಂಚರಿಸುವಂತೆ ಮಾಡಲು ಕುಳಿತಲ್ಲೇ ಕಾಲುಗಳ ವ್ಯಾಯಾಮ ಮಾಡಬಹುದು. ಹೆಚ್ಚು ದೈಹಿಕವಾಗಿ ಕ್ರಿಯಾಶೀಲರಾಗಿರಿ. ವಾಕಿಂಗ್, ಡ್ಯಾನ್ಸ್, ಯೋಗ ಈಜು ಅಥವಾ ಸೈಕಲ್ ಸವಾರಿ ಮುಂತಾದವುಗಳನ್ನು ಪ್ರಯತ್ನಿಸಿ.
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

ಇತರ ಗ್ಯಾಲರಿಗಳು