Menstrual Pain: ಮುಟ್ಟಿನ ದಿನಗಳಲ್ಲಿ ಕಾಡುವ ಅಸಹಜ ನೋವಿಗೆ ಈ 5 ನೈಸರ್ಗಿಕ ಪಾನೀಯಗಳಲ್ಲಿದೆ ಪರಿಹಾರ
- ಕಾಡುವ ಮುಟ್ಟಿನ ನೋವು ವಿಪರೀತ ಹಿಂಸೆ ನೀಡುವುದು ಅಹಜ. ಮುಟ್ಟಿನ ದಿನಗಳಲ್ಲಿ ಉಂಟಾಗುವ ಈ ನೋವಿಗೆ ಮನೆಯಲ್ಲೇ ಕೆಲವೊಂದು ಪಾನೀಯಗಳನ್ನು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ 5 ಪಾನೀಯಗಳ ಕುರಿತ ವಿವರ ಇಲ್ಲಿದೆ.
- ಕಾಡುವ ಮುಟ್ಟಿನ ನೋವು ವಿಪರೀತ ಹಿಂಸೆ ನೀಡುವುದು ಅಹಜ. ಮುಟ್ಟಿನ ದಿನಗಳಲ್ಲಿ ಉಂಟಾಗುವ ಈ ನೋವಿಗೆ ಮನೆಯಲ್ಲೇ ಕೆಲವೊಂದು ಪಾನೀಯಗಳನ್ನು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ 5 ಪಾನೀಯಗಳ ಕುರಿತ ವಿವರ ಇಲ್ಲಿದೆ.
(1 / 6)
ಮುಟ್ಟಿನ ದಿನಗಳಲ್ಲಿ ಕಾಡುವ ನೋವು ವಿಪರೀತ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಹಲವರಿಗೆ ಮುಟ್ಟಿನ ಮೂರು ದಿನಗಳ ಕಾಲ ಕೆಳ ಹೊಟ್ಟೆಯ ಭಾಗದಲ್ಲಿ ವಿಚಿತ್ರವಾದ ನೋವು ಕಾಣಿಸುತ್ತದೆ. ಮುಟ್ಟಿನ ದಿನಗಳು ಮುಗಿದ ನಂತರ ಈ ನೋವು ಕಡಿಮೆಯಾಗುತ್ತದೆ. ಮುಟ್ಟನ ದಿನಗಳಲ್ಲಿ ಉಂಟಾಗುವ ನೋವಿಗೆ ಕೆಲವೊಂದು ಪಾನೀಯಗಳನ್ನು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ ಪಾನೀಯಗಳ ಕುರಿತ ವಿವರ ಇಲ್ಲಿದೆ.
(2 / 6)
ಬಿಸಿನೀರು: ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವಿಗೆ ನೈಸರ್ಗಿಕ ಪರಿಹಾರ ಬಿಸಿನೀರು. ಹೊಟ್ಟೆಯ ಸೆಳೆತದ ನೋವನ್ನು ಇದು ನಿವಾರಿಸುತ್ತದೆ. ಬೆಚ್ಚಗಿನ ನೀರು ದೇಹ ನಿರ್ಜಲೀಕರಣವಾಗುವುದನ್ನು ತಪ್ಪಿಸುತ್ತದೆ.
(3 / 6)
ಶುಂಠಿ ಪಾನೀಯ: ಶುಂಠಿಯನ್ನು ಕುದಿಸಿ ತಯಾರಿಸಿದ ಪೇಯ ಕೂಡ ಮುಟ್ಟಿನ ನೋವಿನ ಸುಧಾರಣೆಗೆ ಬಹಳ ಉತ್ತಮ. ಶುಂಠಿಯಲ್ಲಿ ಉರಿಯೂತ ವಿರೋಧಿ ಅಂಶವಿದ್ದು ಇದು ನೋವು ಕಡಿಮೆಯಾಗಲು ನೆರವಾಗುತ್ತದೆ.
(4 / 6)
ಕ್ಯಾಮೊಮಯಿಲ್ ಟೀ: ಕ್ಯಾಮೊಮಯಿಲ್ ಟೀ ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ ಇದು ಮುಟ್ಟಿನ ನೋವಿನ ನಿವಾರಣೆಗೂ ಸಹಕಾರಿ. ಇದರಲ್ಲಿ ಹಿಪ್ಪುರೇಟ್ ಮತ್ತು ಗ್ಲೈಸಿನ್ ಸಂಯುಕ್ತಗಳಿದ್ದು ಇದು ಸ್ನಾಯಗಳ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗರ್ಭಾಶಯಕ್ಕೆ ವಿಶ್ರಾಂತಿ ಸಿಗುವಂತೆ ಮಾಡುತ್ತದೆ. ಶುಂಠಿಯಂತೆ ಇದು ಕೂಡ ಉತ್ಕರ್ಷಣ ವಿರೋಧಿಯಾಗಿದೆ.
(5 / 6)
ಅರಿಸಿನದ ಹಾಲು: ಇದನ್ನು ಗೋಲ್ಡನ್ ಮಿಲ್ಕ್ ಎಂದೂ ಕರೆಯುತ್ತಾರೆ. ಇದು ಹಲವು ರೋಗಗಳಿಗೆ ಮದ್ದು. ಇದು ಉತ್ಕರ್ಷಣಾ ವಿರೋಧಿಯಾಗಿದ್ದು ಮುಟ್ಟಿನ ದಿನಗಳ ನೋವಿಗೆ ಪರಿಹಾರ ಒದಗಿಸುತ್ತದೆ.
ಇತರ ಗ್ಯಾಲರಿಗಳು