ಭಾರತ ವಿರುದ್ಧದ ಟಿ20-ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಬೆನ್ ಸ್ಟೋಕ್ಸ್‌ ಇಲ್ಲ, ಜೇಕಬ್ ಬೆಥೆಲ್‌ಗೆ ಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ ವಿರುದ್ಧದ ಟಿ20-ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಬೆನ್ ಸ್ಟೋಕ್ಸ್‌ ಇಲ್ಲ, ಜೇಕಬ್ ಬೆಥೆಲ್‌ಗೆ ಸ್ಥಾನ

ಭಾರತ ವಿರುದ್ಧದ ಟಿ20-ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಬೆನ್ ಸ್ಟೋಕ್ಸ್‌ ಇಲ್ಲ, ಜೇಕಬ್ ಬೆಥೆಲ್‌ಗೆ ಸ್ಥಾನ

  • ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಎಡಗೈ ಸ್ನಾಯುಸೆಳೆತಕ್ಕೆ ಒಳಗಾಗಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್, 2024ರ ಚಾಂಪಿಯನ್ಸ್ ಟ್ರೋಫಿ ಹಾಗೂ ಭಾರತ ಪ್ರವಾಸದಿಂದ ಹೊರಬಿದ್ದಿದ್ದಾರೆ. ಇದೇ ವೇಳೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿರುವ ಜೇಕಬ್ ಬೆಥೆಲ್‌ ಭಾರತಕ್ಕೆ ಬಂದು ಆಡಲಿದ್ದಾರೆ.

ಜನವರಿ ತಿಂಗಳಲ್ಲಿ ಇಂಗ್ಲೆಂಡ್‌ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಈ ಎರಡೂ ಸರಣಿಗೆ ಪ್ರತ್ಯೇಕ ತಂಡವನ್ನು ಇಂಗ್ಲೆಂಡ್‌ ಪ್ರಕಟಿಸಿದೆ. ಇದೇ ವೇಳೆ ಚಾಂಪಿಯನ್ಸ್‌ ಟ್ರೋಫಿಗೂ ಇದೇ ಏಕದಿನ ತಂಡ ಇರಲಿದೆ.
icon

(1 / 9)

ಜನವರಿ ತಿಂಗಳಲ್ಲಿ ಇಂಗ್ಲೆಂಡ್‌ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಈ ಎರಡೂ ಸರಣಿಗೆ ಪ್ರತ್ಯೇಕ ತಂಡವನ್ನು ಇಂಗ್ಲೆಂಡ್‌ ಪ್ರಕಟಿಸಿದೆ. ಇದೇ ವೇಳೆ ಚಾಂಪಿಯನ್ಸ್‌ ಟ್ರೋಫಿಗೂ ಇದೇ ಏಕದಿನ ತಂಡ ಇರಲಿದೆ.(AFP)

ಸದ್ಯ ಚಾಂಪಿಯನ್ಸ್ ಟ್ರೋಫಿ ಮತ್ತು ಭಾರತ ಪ್ರವಾಸ ಎರಡರಿಂದಲೂ ಸ್ಟೋಕ್ಸ್ ಹೊರಗುಳಿಯಲಿದ್ದಾರೆ. ಇದೇ ವೇಳೆ ಪ್ರಮುಖ ಬ್ಯಾಟರ್ ಜೋ ರೂಟ್‌, ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ತಂಡಕ್ಕೆ ಮರಳಿದ್ದಾರೆ. ಅತ್ತ ವೇಗದ ಬೌಲರ್ ಮಾರ್ಕ್ ವುಡ್ ಕೂಡ ಏಕದಿನ ಮತ್ತು ಟಿ20 ತಂಡಕ್ಕೆ ಮರಳಿದ್ದಾರೆ.
icon

(2 / 9)

ಸದ್ಯ ಚಾಂಪಿಯನ್ಸ್ ಟ್ರೋಫಿ ಮತ್ತು ಭಾರತ ಪ್ರವಾಸ ಎರಡರಿಂದಲೂ ಸ್ಟೋಕ್ಸ್ ಹೊರಗುಳಿಯಲಿದ್ದಾರೆ. ಇದೇ ವೇಳೆ ಪ್ರಮುಖ ಬ್ಯಾಟರ್ ಜೋ ರೂಟ್‌, ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ನಂತರ ಮೊದಲ ಬಾರಿಗೆ ಏಕದಿನ ತಂಡಕ್ಕೆ ಮರಳಿದ್ದಾರೆ. ಅತ್ತ ವೇಗದ ಬೌಲರ್ ಮಾರ್ಕ್ ವುಡ್ ಕೂಡ ಏಕದಿನ ಮತ್ತು ಟಿ20 ತಂಡಕ್ಕೆ ಮರಳಿದ್ದಾರೆ.(AP)

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಇಂಗ್ಲೆಂಡ್‌ ಕಳಪೆ ಪ್ರದರ್ಶನ ನೀಡುತ್ತಿದೆ. 2023ರ ಏಕದಿನ ವಿಶವಕಪ್‌ ಹಾಗೂ ಟಿ20 ವಿಶ್ವಕಪ್ ಪ್ರಶಸ್ತಿ ಕಳೆದುಕೊಂಡ ಹೊರತಾಗಿಯೂ, ಜೋಸ್ ಬಟ್ಲರ್ ವೈಟ್-ಬಾಲ್ ತಂಡಗಳ ನಾಯಕನಾಗಿ ಮುಂದುವರೆದಿದ್ದಾರೆ. 
icon

(3 / 9)

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಇಂಗ್ಲೆಂಡ್‌ ಕಳಪೆ ಪ್ರದರ್ಶನ ನೀಡುತ್ತಿದೆ. 2023ರ ಏಕದಿನ ವಿಶವಕಪ್‌ ಹಾಗೂ ಟಿ20 ವಿಶ್ವಕಪ್ ಪ್ರಶಸ್ತಿ ಕಳೆದುಕೊಂಡ ಹೊರತಾಗಿಯೂ, ಜೋಸ್ ಬಟ್ಲರ್ ವೈಟ್-ಬಾಲ್ ತಂಡಗಳ ನಾಯಕನಾಗಿ ಮುಂದುವರೆದಿದ್ದಾರೆ. (AFP)

ನ್ಯೂಜಿಲೆಂಡ್‌ನಲ್ಲಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ, ಹಾಗೂ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ತಂಡದ ಪಾಲಾಗಿ ಸುದ್ದಿ ಮಾಡಿರುವ ಉದಯೋನ್ಮುಖ ತಾರೆ ಜೇಕಬ್ ಬೆಥೆಲ್, ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
icon

(4 / 9)

ನ್ಯೂಜಿಲೆಂಡ್‌ನಲ್ಲಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ, ಹಾಗೂ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ತಂಡದ ಪಾಲಾಗಿ ಸುದ್ದಿ ಮಾಡಿರುವ ಉದಯೋನ್ಮುಖ ತಾರೆ ಜೇಕಬ್ ಬೆಥೆಲ್, ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.(AP)

ಇಂಗ್ಲೆಂಡ್ ತಂಡವು ಜನವರಿ 17ರಂದು ಭಾರತಕ್ಕೆ ಬರಲಿದ್ದು, ಜನವರಿ 22ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಲಿದೆ.
icon

(5 / 9)

ಇಂಗ್ಲೆಂಡ್ ತಂಡವು ಜನವರಿ 17ರಂದು ಭಾರತಕ್ಕೆ ಬರಲಿದ್ದು, ಜನವರಿ 22ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಲಿದೆ.

ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
icon

(6 / 9)

ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
icon

(7 / 9)

ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.(AFP)

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಜನವರಿ 22ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಜನವರಿ 25 2ನೇ ಟಿ20 ಚೆನ್ನೈನ  ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದರೆ, 3ನೇ ಟಿ20 ಪಂದ್ಯ ಜನವರಿ 28ರಂದು ರಾಜ್ಕೋಟ್‌ನಲ್ಲಿ ನಡೆಯಲಿದೆ. ನಾಲ್ಕನೇ ಟಿ20 ಜನವರಿ 31ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ, ಐದನೇ ಟಿ20 ಫೆಬ್ರವರಿ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. 
icon

(8 / 9)

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಜನವರಿ 22ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಜನವರಿ 25 2ನೇ ಟಿ20 ಚೆನ್ನೈನ  ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದರೆ, 3ನೇ ಟಿ20 ಪಂದ್ಯ ಜನವರಿ 28ರಂದು ರಾಜ್ಕೋಟ್‌ನಲ್ಲಿ ನಡೆಯಲಿದೆ. ನಾಲ್ಕನೇ ಟಿ20 ಜನವರಿ 31ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ, ಐದನೇ ಟಿ20 ಫೆಬ್ರವರಿ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. (AP)

ಮೊದಲ ಏಕದಿನ ಪಂದ್ಯವು ಫೆಬ್ರವರಿ 6ರಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆದರೆ, ಎರಡನೇ ಏಕದಿನ ಪಂದ್ಯ ಫೆಬ್ರವರಿ 9ರಂದು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಫೆಬ್ರವರಿ 12ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
icon

(9 / 9)

ಮೊದಲ ಏಕದಿನ ಪಂದ್ಯವು ಫೆಬ್ರವರಿ 6ರಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆದರೆ, ಎರಡನೇ ಏಕದಿನ ಪಂದ್ಯ ಫೆಬ್ರವರಿ 9ರಂದು ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಫೆಬ್ರವರಿ 12ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.(AFP)


ಇತರ ಗ್ಯಾಲರಿಗಳು