ದೀರ್ಘಕಾಲದವರೆಗೆ ಮಲ ವಿಸರ್ಜನೆ ಮಾಡದೇ ತಡೆದುಕೊಂಡಿರುತ್ತೀರಾ, ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ
ಮನುಷ್ಯನ ದೈಹಿಕ ಪ್ರಕ್ರಿಯೆಯಲ್ಲಿ ಮಲ, ಮೂತ್ರ ವಿಸರ್ಜನೆ ಕೂಡ ಒಂದು. ಪ್ರತಿದಿನ ಮಲ, ಮೂತ್ರ ಹೊರ ಹಾಕಲೇಬೇಕು. ಆದರೆ ಇತ್ತೀಚಿನ ಒತ್ತಡದ ಜೀವನದಲ್ಲಿ ಮಲ ವಿರ್ಸಜನೆಗೂ ಜನರಿಗೆ ಸಮಯವಿಲ್ಲದಂತಾಗಿದೆ. ಆ ಕಾರಣಕ್ಕೆ ದೀರ್ಘಕಾಲದವರೆಗೆ ಮಲವನ್ನು ವಿಸರ್ಜನೆಯನ್ನು ತಡೆದುಕೊಳ್ಳುತ್ತಾರೆ. ಇದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ.
(1 / 8)
ಮನೆ, ಕಚೇರಿ ಅಥವಾ ಸಾರ್ವಜನಿಕ ಸ್ಥಳ ಎಲ್ಲೇ ಆಗಿರಲಿ ಕೆಲವು ಸಂದರ್ಭಗಳಲ್ಲಿ ನಾವು ಮಲ, ಮೂತ್ರ ವಿಸರ್ಜನೆ ಮಾಡದೇ ತಡೆದಿಟ್ಟುಕೊಳ್ಳುತ್ತೇವೆ. ನೀವೂ ಈ ಸಾಲಿಗೆ ಸೇರುವವರಾದ್ರೆ ನಿಮಗೆ ತಿಳಿಯದಂತೆ ನೀವು ಹಲವಾರು ರೋಗಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವವರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. (shutterstock)
(2 / 8)
ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುವು ಗುದನಾಳದಿಂದ ಮಲವನ್ನು ಮತ್ತೆ ದೊಡ್ಡ ಕರುಳಿಗೆ ತಳ್ಳುವ ಕೆಲಸ ಮಾಡುತ್ತದೆ. ಇದರಿಂದ ಮಲದಲ್ಲಿನ ನೀರು ಮತ್ತೆ ದೇಹಕ್ಕೆ ಸೇರಿಕೊಳ್ಳುತ್ತದೆ, ಮಲ ಒಣಗುತ್ತದೆ. ಈ ಪ್ರಕ್ರಿಯೆಯ ನಂತರ ಸರಾಗ ಮಲ ವಿಸರ್ಜನೆಗೆ ನಿಮಗೆ ತೊಂದರೆ ಎದುರಾಗಬಹುದು. (shutterstock)
(3 / 8)
ವೈದ್ಯರ ಪ್ರಕಾರ, ಅನಿವಾರ್ಯ ಕಾರಣಗಳಿಂದ ಅಪರೂಪಕ್ಕೊಮ್ಮೆ ಮಲ ವಿರ್ಸಜನೆ ಮಾಡದೇ ತಡೆದುಕೊಳ್ಳುವುದು ಸರಿ, ಆದರೆ ನಿಯಮಿತವಾಗಿ ಮಲವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಮಲಬದ್ಧತೆ ಸಮಸ್ಯೆ ಆರಂಭವಾಗಲು ಕಾರಣವಾಗುತ್ತದೆ. (shutterstock)
(4 / 8)
ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವ ಅನಾನುಕೂಲಗಳು: ಹೊಟ್ಟೆಯಬ್ಬರ ಮತ್ತು ಗ್ಯಾಸ್ಟ್ರಿಕ್: ವ್ಯಕ್ತಿಯ ಮಲವು ಕೊಲೊನ್‌ನಲ್ಲಿ ಹೆಚ್ಚು ಕಾಲ ಉಳಿಯುತ್ತದೆ, ಹೀಗೆ ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದು ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಅತಿಯಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು. (shutterstock)
(5 / 8)
ಹೆಚ್ಚು ಸಮಯದವರೆಗೆ ಕರುಳಿನ ಚಲನೆಯನ್ನು ಹೊಂದಿಲ್ಲದಿರುವಂತೆ ಆಯಾಸಗೊಳಿಸುವುದರಿಂದ ಮೂತ್ರಕೋಶವನ್ನು ನಿಯಂತ್ರಿಸುವ ಸ್ನಾಯುಗಳಿಗೆ ಹಾನಿಯಾಗುತ್ತದೆ, ಇದು ಮೂತ್ರ ಸೋರಿಕೆಗೆ ಕಾರಣವಾಗಬಹುದು.(shutterstock)
(6 / 8)
ತಮ್ಮ ಕರುಳಿನಲ್ಲಿ ನಿಯಮಿತವಾಗಿ ಮಲವನ್ನು ಹಿಡಿದಿಟ್ಟುಕೊಳ್ಳುವ ಜನರ ದೇಹ ಯಾವಾಗಲೂ ಊದಿಕೊಂಡತೆ ಇರುತ್ತದೆ ಮತ್ತು ಅವರಲ್ಲಿ ಬ್ಯಾಕ್ಟೀರಿಯಾದ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ಒಂದು ಅಧ್ಯಯನವು ಹೇಳಿದೆ. ಈ ಎರಡೂ ಅಂಶಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಸೃಷ್ಟಿಸುತ್ತವೆ.(shutterstock)
(7 / 8)
ಮಲವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ನಿಮ್ಮ ಗುದದ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಮಲವು ಗಟ್ಟಿಯಾಗಲು ಮತ್ತು ಒಣಗಲು ಕಾರಣವಾಗುತ್ತದೆ, ಮಲಬದ್ಧತೆ, ಮೂಲವ್ಯಾಧಿ ಮತ್ತು ಗುದದ ಬಿರುಕುಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.(shutterstock)
ಇತರ ಗ್ಯಾಲರಿಗಳು