ಶನಿ ದೋಷ ಕಾಡುತ್ತಿದೆಯೇ? ನಿಮ್ಮ ರಾಶಿಗೆ ಅನುಗುಣವಾಗಿ ಹೇಗೆ ಪರಿಹಾರ ಪಡೆದುಕೊಳ್ಳಬಹುದು ತಿಳಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶನಿ ದೋಷ ಕಾಡುತ್ತಿದೆಯೇ? ನಿಮ್ಮ ರಾಶಿಗೆ ಅನುಗುಣವಾಗಿ ಹೇಗೆ ಪರಿಹಾರ ಪಡೆದುಕೊಳ್ಳಬಹುದು ತಿಳಿಯಿರಿ

ಶನಿ ದೋಷ ಕಾಡುತ್ತಿದೆಯೇ? ನಿಮ್ಮ ರಾಶಿಗೆ ಅನುಗುಣವಾಗಿ ಹೇಗೆ ಪರಿಹಾರ ಪಡೆದುಕೊಳ್ಳಬಹುದು ತಿಳಿಯಿರಿ

  • ಶನಿ ದೋಷವು ವ್ಯಕ್ತಿಯ ಜನ್ಮ ಪಟ್ಟಿಯಲ್ಲಿ ಶನಿ ಸ್ಥಾನದಿಂದಾಗಿ ಸವಾಲುಗಳು ಮತ್ತು ಅಡೆತಡೆಗಳನ್ನು ತರುತ್ತದೆ ಎಂದು ನಂಬಲಾಗಿದೆ. ಅವುಗಳ ಪರಿಣಾಮಗಳನ್ನು ತಗ್ಗಿಸಲು ಮತ್ತು ಸಮತೋಲನವನ್ನು ಸಾಧಿಸಲು ದೋಷ ಪರಿಹಾರ ಮುಖ್ಯವಾಗಿರುತ್ತೆ. ಯಾವ ರಾಶಿಯವರಿಗೆ ಏನೆಲ್ಲಾ ಸಮಸ್ಯೆಗಳು ಪರಿಹಾರಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಎಲ್ಲಾ ಗ್ರಹಗಳಿಗಿಂತ ಶನಿ ತುಂಬಾ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷ ಬೇಕಾಗುತ್ತೆ. ಅದೇ ರೀತಿಯಾಗಿ ಶನಿ ನಕ್ಷತ್ರದಲ್ಲಿ ಸಂಚಾರವು ರಾಶಿಯವರ ಮೇಲೆ ಪರಿಣಾಮ ಬೀರುತ್ತೆ. ಯಾವ ರಾಶಿಯವರಿಗೆ ಶನಿ ದೋಷ ಇರುತ್ತೆ. ಅದಕ್ಕೆ ಪರಿಹಾರ ಏನು ಎಂಬುದನ್ನು ತಿಳಿಯೋಣ.
icon

(1 / 14)

ಮೇಷ ರಾಶಿ: ಇವರು ಶನಿ ದೋಷದಿಂದಾಗಿ ವಿಳಂಬ ಮತ್ತು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು, ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದು ಮತ್ತು ಶನಿವಾರದಂದು ಹನುಮಾನ್ ದೇವಾಲಯಗಳಿಗೆ ಭೇಟಿ ನೀಡುವುದು ಪ್ರಯೋಜನಕಾರಿಯಾಗಿದೆ.
icon

(2 / 14)

ವೃಷಭ ರಾಶಿ: ವೃಷಭ ರಾಶಿಯವರು ಆರ್ಥಿಕ ತೊಂದರೆಗಳು ಮತ್ತು ವೃತ್ತಿಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ನೀಲಿ ಮಣಿ ಧರಿಸುವುದು ನಿಮಗೆ ಸಹಾಯ ಮಾಡುತ್ತದೆ. ಶನಿ ದೋಷದ ದುಷ್ಪರಿಣಾಮಗಳನ್ನು ನಿವಾರಿಸಲು ಶನಿವಾರದಂದು ದೇವರಿಗೆ ಎಳ್ಳನ್ನು ಅರ್ಪಿಸಿ, ಬಡವರಿಗೆ ಕಾಳುಗಳನ್ನು ದಾನಮಾಡಬಹುದು.
icon

(3 / 14)

ಮಿಥುನ ರಾಶಿ: ಈ ರಾಶಿಯ ವ್ಯಕ್ತಿಗಳು ಸಂವಹನ ಸಮಸ್ಯೆಗಳು ಮತ್ತು ಚಡಪಡಿಕೆಯೊಂದಿಗೆ ಹೋರಾಡುತ್ತಿದ್ದಾರೆ. ಈ ಸವಾಲುಗಳನ್ನು ಎದುರಿಸಲು, ಶಿಸ್ತಿನ ದಿನಚರಿಯನ್ನು ಕಾಪಾಡಿಕೊಳ್ಳುಬಹುದು. ಶನಿವಾರದಂದು ಬಡವರಿಗೆ ಆಹಾರವನ್ನು ನೀಡುವುದರಿಂದ ಪರಿಹಾರವನ್ನು ಪಡೆಯಬಹುದು. ಶನಿ ಅಷ್ಟಾಕ್ಷರ ಮಂತ್ರವನ್ನು ಪಠಿಸುವುದು ಸಹ ಪ್ರಯೋಜನವನ್ನು ನೀಡುತ್ತೆ.
icon

(4 / 14)

ಕಟಕ ರಾಶಿ: ಕಟಕ ರಾಶಿಯವರು ಭಾವನಾತ್ಮಕ ಮತ್ತು ಸಾಮಾನ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಶನಿ ದೇವರಿಗೆ ನಿಯಮಿತವಾಗಿ ಪ್ರಾರ್ಥನೆ ಮಾಡಬಹುದು. ಪರಿಹಾರವಾಗಿ ಕೈಗೆ ಕಪ್ಪು ದಾರವನ್ನು ಧರಿಸುವುದು ಸಹಾಯ ಮಾಡುತ್ತೆ. ಮನೆಯ ಪರಿಸರವನ್ನು ಸ್ವಚ್ಛವಾಗಿ ಮತ್ತು ಸೌಹಾರ್ದಯುತವಾಗಿಡಲು ಸಹ ಸಲಹೆ ನೀಡಲಾಗಿದೆ. 
icon

(5 / 14)

ಸಿಂಹ ರಾಶಿ: ಅಧಿಕಾರ ಮತ್ತು ಸ್ವಾಭಿಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ. ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶನಿ ದೇವಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡುವುದರಿಂದ ಪರಿಹಾರ ಪಡೆಯಬಹುದು.
icon

(6 / 14)

ಕನ್ಯಾ ರಾಶಿ: ಈ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಬೇಸರ ತರಿಸಿವೆ. ಕೆಲಸಕ್ಕೆ ಸಂಬಂಧಿಸಿದ ಒತ್ತಡಗಳನ್ನು ಎದುರಿಸುತ್ತಿದ್ದೀರಿ. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಶನಿವಾರ ಕಪ್ಪು ಎಳ್ಳನ್ನು ಶನಿ ದೇವರಿಗೆ ಅರ್ಪಿಸಿ. ದಾನ ಮಾಡುವುದರಿಂದ ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು.
icon

(7 / 14)

ತುಲಾ ರಾಶಿ: ತುಲಾ ರಾಶಿಯವರು ಸಂಬಂಧಗಳು ಮತ್ತು ವ್ಯವಹಾರದಲ್ಲಿ ಪಾಲುದಾರಿಕೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇವುಗಳನ್ನು ಪರಿಹರಿಸಿಕೊಳ್ಳಲು ಎಲ್ಲಾ ವ್ಯವಹಾರಗಳಲ್ಲಿ ನ್ಯಾಯ ಮತ್ತು ಪ್ರಾಮಾಣಿಕವಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀಲಿ ನೀಲಮಣಿಯನ್ನು ಧರಿಸುವುದು ಮತ್ತು ಶನಿವಾರದಂದು ದತ್ತಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
icon

(8 / 14)

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಹಣಕಾಸಿನ ಒತ್ತಡ ಮತ್ತು ವೈಯಕ್ತಿಕ ಸಂಘರ್ಷಷಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ದಾನದಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಿಯಮಿತವಾಗಿ ಶನಿ ದೇವರನ್ನು ಪ್ರಾರ್ಥಿಸುವುದು ಪ್ರಯೋಜನಕಾರಿಯಾಗಿದೆ. ನೀಲಿ ನೀಲಮಣಿಯನ್ನು ಧರಿಸುವುದು ಸಹಾಯ ಮಾಡುತ್ತೆ.
icon

(9 / 14)

ಧನು ರಾಶಿ: ಧನು ರಾಶಿಯವರು ಪ್ರಯಾಣ ಮತ್ತು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಿಂದ ಪರಿಹಾರ ಪಡೆಲು ತಾಳ್ಮೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ದಾನಕ್ಕೆ ನಿಯಮಿತವಾಗಿ ದೇಣಿಗೆ ನೀಡುವುದು ಸಹಾಯಕವಾಗುತ್ತೆ. ಜೊತೆಗೆ ಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬೇಕು.
icon

(10 / 14)

ಮಕರ ರಾಶಿ: ಮಕರ ರಾಶಿಯನ್ನು ಶನಿ ಆಳುತ್ತಾನೆ. ಆದ್ದರಿಂದ ಶನಿ ದೋಷಲು ಈ ರಾಶಿಯವರಿಗೆ ಇರುತ್ತೆ. ಇದನ್ನು ಕಡಿಮೆ ಮಾಡಲು ಶಿಸ್ತುಬದ್ಧ ಜೀವನ ಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತ ಅಧ್ಯಾತ್ಮಿಕ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಶನಿ ದೇವರಿಗೆ ಎಣ್ಣೆ ಮತ್ತು ಕಪ್ಪು ಎಳ್ಳನ್ನು ಅರ್ಪಿಸಬೇಕು.
icon

(11 / 14)

ಕುಂಭ ರಾಶಿ: ಈ ರಾಶಿಯವರು ಅನಿರೀಕ್ಷಿತ ಸವಾಲುಗಳು, ಕೆಲಸದಲ್ಲಿ ಅಡ್ಡಿಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಣಾಮಗಳನ್ನು ತಗ್ಗಿಸಲು ಶನಿ ದೇವರಿಗೆ ನಿಯಮಿತವಾಗಿ ಪ್ರಾರ್ಥನೆ ಮಾಡುವುದು ಮತ್ತು ಶನಿವಾರದಂದು ಬಡವರಿಗೆ ಆಹಾರವನ್ನು ನೀಡುವುದಿಂದ ಪರಿಹಾರ ಸಿಗಲಿದೆ. ನೀಲಿ ನೀಲಮಣಿ ಅಥವಾ ಕಪ್ಪು ರತ್ನವನ್ನು ಧರಿಸುವುದು ಸಹಾಯ ಮಾಡುತ್ತೆ.
icon

(12 / 14)

ಮೀನ ರಾಶಿ: ಮೀನ ರಾಶಿಯವರು ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶನಿವಾರದಂದು ದತ್ತಿ ಸಂಸ್ಥೆಗಳಿಗೆ ದೇಣಿ ನೀಡುವುದರಿಂದ ಪರಿಹಾರ ಸಿಗುತ್ತೆ. ನಿಯಮಿತ ಧ್ಯಾನ ಮತ್ತು ಶನಿ ಮಂತ್ರಗಳ ಪಠಣದಿಂದ ಪರಿಹಾರ ಪಡೆಯಬಹುದು. 
icon

(13 / 14)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(14 / 14)

ಇತರ ಗ್ಯಾಲರಿಗಳು