ತುಲಾ ರಾಶಿಗೆ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಸುವರ್ಣ ಕಾಲ, ಆಸೆಗಳು ಈಡೇರುತ್ತವೆ, ಆರ್ಥಿಕ ಸಮಸ್ಯೆ ಇರಲ್ಲ
ಶುಕ್ರ ಸಂಕ್ರಮಣ: ಶುಕ್ರನು ಸಂಪತ್ತು, ಖ್ಯಾತಿ ಮತ್ತು ಪ್ರೀತಿಯ ಅಧಿಪತಿ. ತುಲಾ ರಾಶಿಗೆ ಶುಕ್ರನ ಪ್ರವೇಶವು ಹಲವು ರಾಶಿಯವರಿಗೆ ಶುಭಫಲಗಳನ್ನು ತರುತ್ತಿದೆ. ಕೆಲವು ರಾಶಿಯವರು ಆರ್ಥಿಕವಾಗಿ ಉತ್ತಮ ಮಟ್ಟವನ್ನು ತಲುಪುತ್ತಾರೆ. ಇವರಿಗೆ ನಿರೀಕ್ಷೆಗೂ ಮೀರಿದ ಹಣ ಬರುತ್ತೆ.
(1 / 7)
ಜ್ಯೋತಿಷ್ಯದ ಪ್ರಕಾರ, ಶುಕ್ರನನ್ನು ಪ್ರೀತಿ ಮತ್ತು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಕ್ರವು 2024ರ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 1:42 ಕ್ಕೆ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ. ಇದು ಕೆಲವು ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಆ ರಾಶಿಯವರು ಯಾರೆಂದು ನೋಡೋಣ.
(2 / 7)
ತುಲಾ ರಾಶಿಗೆ ಶುಕ್ರನ ಪ್ರವೇಶವು ಹಲವು ರಾಶಿಯವರಿಗೆ ಪ್ರಯೋಜನಗಳಿವೆ. ಅದರಲ್ಲೂ ಕೆಲವು ರಾಶಿಯವರು ಆರ್ಥಿಕವಾಗಿ ಉತ್ತಮ ಮಟ್ಟಕ್ಕೆ ತಲುಪುತ್ತಾರೆ.
(3 / 7)
ಶುಕ್ರ ಸಂಚಾರದಿಂದ ಕೆಲವು ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಶುಕ್ರನ ಆಶೀರ್ವಾದದೊಂದಿಗೆ ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಪ್ರಮುಖವಾಗಿ 3 ರಾಶಿವರಿಗೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನ ತಿಳಿಯೋಣ.
(4 / 7)
ಮೇಷ ರಾಶಿ: ಮಂಗಳನು ಮೇಷ ರಾಶಿಯ ಅಧಿಪತಿ. ಮೇಷ ರಾಶಿಯವರು ಪ್ರತಿ ಮಂಗಳವಾರ ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ, ಎಲ್ಲಾ ಆಸೆಗಳು ಈಡೇರುತ್ತವೆ. ಮಂಗಳವಾರದಂದು ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟವನ್ನು ತರುತ್ತವೆ. ಶುಕ್ರನ ಸಂಚಾರವು ಈ ರಾಶಿಯವರಿಗೆ ಹೆಚ್ಚು ಲಾಭವನ್ನು ತಂದಿದ್ದು, ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಉತ್ತಮ ಆರೋಗ್ಯ ಇರುತ್ತೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.
(5 / 7)
ಕುಂಭ ರಾಶಿ: 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿಯ ಉಪಸ್ಥಿತಿಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ, ಶಶ ರಾಜ ಯೋಗವು ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ಹಲವರಿಗೆ ಅದೃಷ್ಟವಾಗಿರುತ್ತದೆ. 2025ರ ಮಾರ್ಚ್ ವರೆಗೆ, ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನ್ಯಾಯಾಲಯದ ಪ್ರಕರಣಗಳಿಂದ ಪರಿಹಾರ ಪಡೆಯುತ್ತೀರಿ. ವಿದೇಶದಲ್ಲಿ ವ್ಯಾಪಾರ ಮಾಡುವುದು ಲಾಭದಾಯಕವಾಗಿರುತ್ತದೆ. ಉದ್ಯೋಗಿಗಳು ಬಡ್ತಿ ಪಡೆಯುತ್ತಾರೆ.
(6 / 7)
ಕಟಕ ರಾಶಿ: ಕೆಲವು ಕಾನೂನು ವಿಷಯಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಅಧ್ಯಯನದ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಮತ್ತೆ ಉದ್ಭವಿಸಬಹುದು, ಅವುಗಳನ್ನು ಪರಿಹರಿಸುವ ಬಗ್ಗೆ ಯೋಚಿಸುತ್ತೀರಿ, ಸಂಗಾತಿಯ ವೃತ್ತಿಜೀವನದಲ್ಲಿ ಪ್ರಗತಿಯನ್ನು ನೋಡಿ ನೀವು ಸಂತೋಷಪಡುತ್ತೀರಿ. ಕುಟುಂಬ ಸದಸ್ಯರ ಮಾತುಗಳು ನಿಮಗೆ ಕೆಟ್ಟದಾಗಿ ಅನಿಸಬಹುದು, ಆದರೆ ನೀವು ಏನನ್ನೂ ಹೇಳುವುದಿಲ್ಲ. ಹೊಸದಾಗಿ ಯೋಜನೆಗಳನ್ನು ರೂಪಿಸುತ್ತೀರಿ.
ಇತರ ಗ್ಯಾಲರಿಗಳು