Ramya on Dhanush: ತಮಿಳು ನಟ ಧನುಷ್ ಜತೆ ಹಳೇ ನೆನಪುಗಳಿಗೆ ಜಾರಿದ ರಮ್ಯಾ.. ಸೆಲ್ಫಿ ಫೋಟೋಸ್ ಹೇಳ್ತಿವೆ ಹೊಸ ಕಥೆ..
- ನಟಿ ರಮ್ಯಾ ಕೇವಲ ಕನ್ನಡ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿಯೂ ಮಿಂಚಿದವರು. ತಮಿಳಿನಲ್ಲಿ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ಸದ್ದಿಲ್ಲದೆ ಚೆನ್ನೈಗೆ ತೆರಳಿರುವ ರಮ್ಯಾ, ಹಲವು ವರ್ಷಗಳ ಹಿಂದಿನ ನೆನಪುಗಳಿಗೆ ಜಾರಿದ್ದಾರೆ. ಅದೂ ನಟ ಧನುಷ್ ಜತೆ…
- ನಟಿ ರಮ್ಯಾ ಕೇವಲ ಕನ್ನಡ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿಯೂ ಮಿಂಚಿದವರು. ತಮಿಳಿನಲ್ಲಿ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ಸದ್ದಿಲ್ಲದೆ ಚೆನ್ನೈಗೆ ತೆರಳಿರುವ ರಮ್ಯಾ, ಹಲವು ವರ್ಷಗಳ ಹಿಂದಿನ ನೆನಪುಗಳಿಗೆ ಜಾರಿದ್ದಾರೆ. ಅದೂ ನಟ ಧನುಷ್ ಜತೆ…
(1 / 6)
2007ರಲ್ಲಿ ಧನುಷ್ ನಟನೆಯ ಪೊಲ್ಲಾಡವನ್ ಚಿತ್ರದ ಮೂಲಕ ಮೋಹಕ ತಾರೆ ಕಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಇದೀಗ ಆ ಸಿನಿಮಾ 15 ವರ್ಷಗಳನ್ನು ಪೂರೈಸಿದೆ.(Twitter/ Ramya/Divya Spandana)
(2 / 6)
ಈ 15 ವರ್ಷದ ಶುಭ ಸಂದರ್ಭದಲ್ಲಿ ಇಡೀ ತಂಡ ಒಟ್ಟಿಗೆ ಸೇರಿತ್ತು. ನಟ, ನಿರ್ದೇಶಕರು ಸೇರಿ ತಂಡದ ಹಲವರು ಗೆಟ್ ಟುಗೆದರ್ ಆಯೋಜಿಸಿದ್ದರು. ರಮ್ಯಾ ಸಹ ಭಾಗವಹಿಸಿದ್ದರು. (Twitter/ Ramya/Divya Spandana)
(3 / 6)
ನಿರ್ದೇಶಕ ವೆಟ್ರಿಮಾರನ್, ಧನುಷ್, ರಮ್ಯಾ ಮತ್ತು ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಬೃಹತ್ ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಿದ್ದಾರೆ.(Twitter/ Ramya/Divya Spandana)
(4 / 6)
ಈ ಸಂತೋಷಕೂಟದ ಫೋಟೋಗಳನ್ನು ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಂಡದ ಜತೆ ಕೆಲಸ ಮಾಡಿದ ಅನುಭವವನ್ನು ಹೇಳಿಕೊಂಡಿದ್ದಾರೆ. ಪೊಲ್ಲಾಡವನ್ ಚಿತ್ರದ ಮುಂದಿನ ಭಾಗಕ್ಕೆ ಕಾಯುತ್ತಿರುವೆ ಎಂದಿದ್ದಾರೆ.(Twitter/ Ramya/Divya Spandana)
(5 / 6)
ಗೆಳೆಯ ಧನುಷ್ ಜತೆಗೆ ಬಗೆಬಗೆ ಅವತಾರದಲ್ಲಿ ರಮ್ಯಾ ಮತ್ತು ಧನುಷ್ ಪೋಸ್ ನೀಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. (Twitter/ Ramya/Divya Spandana)
ಇತರ ಗ್ಯಾಲರಿಗಳು