Sarika in Indian cricket team: ಸ್ಯಾಂಡಲ್‌ವುಡ್‌ ನಟಿ ಟೀಂ ಇಂಡಿಯಾ ಜೆರ್ಸಿ ತೊಟ್ಟಾಗ.. ಬ್ಯಾಟ್‌ ಹಿಡಿದು ಅಬ್ಬರಿಸಿದ ಸಾರಿಕಾ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sarika In Indian Cricket Team: ಸ್ಯಾಂಡಲ್‌ವುಡ್‌ ನಟಿ ಟೀಂ ಇಂಡಿಯಾ ಜೆರ್ಸಿ ತೊಟ್ಟಾಗ.. ಬ್ಯಾಟ್‌ ಹಿಡಿದು ಅಬ್ಬರಿಸಿದ ಸಾರಿಕಾ Photos

Sarika in Indian cricket team: ಸ್ಯಾಂಡಲ್‌ವುಡ್‌ ನಟಿ ಟೀಂ ಇಂಡಿಯಾ ಜೆರ್ಸಿ ತೊಟ್ಟಾಗ.. ಬ್ಯಾಟ್‌ ಹಿಡಿದು ಅಬ್ಬರಿಸಿದ ಸಾರಿಕಾ PHOTOS

  • Sarika in Indian cricket team: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಯಾರೂ ಮಾಡದ ಹೊಸ ಪ್ರಯತ್ನವೊಂದನ್ನು ಮಾಡಿದ್ದಾರೆ ನಟಿ ಸಾರಿಕಾ ರಾವ್.‌ ಅಂದರೆ, ತೆರೆಮೇಲೆ ಕ್ರಿಕೆಟರ್‌ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇಲ್ಲಿವೇ ನೋಡಿ ಆ ಹೊಸ ಪ್ರಯತ್ನದ ಸಣ್ಣ ಫೋಟೋ ಝಲಕ್..‌

ಕ್ರೀಡಾ ಆಧರಿತ ಸಿನಿಮಾಗಳು ಕನ್ನಡದಲ್ಲಿ ಅಪರೂಪ. ಇದೀಗ ಆ ಅಪರೂಪದ ಶೈಲಿಯ ಸಿನಿಮಾ ಮೂಲಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ ನಟಿ ಸಾರಿಕಾ ರಾವ್.‌   
icon

(1 / 9)

ಮಹಿಳಾ ಕ್ರಿಕೆಟರ್‌ ಆಗಿ ಕಾಣಿಸಿಕೊಂಡಿರುವ ಈ ಚಿತ್ರದ ಹೆಸರೂ ಅಷ್ಟೇ ವಿಶೇಷವಾಗಿದೆ. ಸಹರಾ ಎಂಬ ಟೈಟಲ್‌ ಇಟ್ಟಿದ್ದು, ಇನ್ನೇನು ಬಹುತೇಕ ಶೂಟಿಂಗ್‌ ಸಹ ಮುಗಿಸಿದೆ.   
icon

(2 / 9)

ಕಳೆದ 8 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 
icon

(3 / 9)

ಮೈಸೂರಿನ ಸಾರಿಕಾ ರಾವ್ ಈ ಚಿತ್ರದ ಪಾತ್ರಕ್ಕಾಗಿಯೇ ರಣಜಿ ಆಟಗಾರರಾದ. ಕೆ.ಬಿ. ಪವನ್ ಬಳಿ ಕ್ರಿಕೆಟ್ ಬಗ್ಗೆ ತರಬೇತಿ ಪಡೆದುಕೊಂಡು ಬಳಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.   
icon

(4 / 9)

ಚಿತ್ರದ ಅತಿಥಿ ಪಾತ್ರದಲ್ಲಿ ಭಾರತ ತಂಡ ಪ್ರತಿನಿಧಿಸಿದ ಕರ್ನಾಟಕದ ಮಾಜಿ ಆಟಗಾರರಾದ ಡೇವಿಡ್ ಜಾನ್ಸನ್ ಮತ್ತು ರಘುರಾಮ್ ಭಟ್ ಕಾಣಿಸಿಕೊಂಡಿದ್ದಾರೆ. 
icon

(5 / 9)

ಹಾಡುಗಳಿಗೆ ಜೇಮ್ಸ್ ಖ್ಯಾತಿಯ ಚೇತನ್, ಸಿಂಪಲ್ ಸುನಿ, ರತೀಶ್ ಜಯನ್, ಮಂಜೇಶ್ ಭಗವತ್ ಅವರ ಸಾಹಿತ್ಯವಿದೆ. 
icon

(6 / 9)

ಚಿತ್ರದ ಉಳಿದ ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.   
icon

(7 / 9)

ವಿನ್ಸೆಂಟ್ ಅಂಥೋಣಿ ರೂಥ್ ಅವರ ಛಾಯಾಗ್ರಹಣ, ಸೂರಜ್ ಜೋಯಿಸ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.   
icon

(8 / 9)

ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ವ್ಯಾಸರಾಜ್, ನವೀನ್ ಸಜ್ಜು, ಸಿದ್ದಾರ್ಥ ಬಲ್ಮಾ,  ಸುಪ್ರೀಯಾ ರಾಮ್ ಹಾಡುಗಳಿಗೆ ದನಿಯಾಗಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು