ಮದುವೆಗೆ ಅಂತ ಬನಾರಸಿ ಸೀರೆ ಖರೀದಿ ಮಾಡಿದ್ದೀರಾ, ನೀವು ತಂದ ಸೀರೆ ಅಸಲಿನಾ ನಕಲಿನಾ, ಪರೀಕ್ಷೆ ಮಾಡೋಕೆ ಇಲ್ಲಿದೆ ಟ್ರಿಕ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆಗೆ ಅಂತ ಬನಾರಸಿ ಸೀರೆ ಖರೀದಿ ಮಾಡಿದ್ದೀರಾ, ನೀವು ತಂದ ಸೀರೆ ಅಸಲಿನಾ ನಕಲಿನಾ, ಪರೀಕ್ಷೆ ಮಾಡೋಕೆ ಇಲ್ಲಿದೆ ಟ್ರಿಕ್ಸ್‌

ಮದುವೆಗೆ ಅಂತ ಬನಾರಸಿ ಸೀರೆ ಖರೀದಿ ಮಾಡಿದ್ದೀರಾ, ನೀವು ತಂದ ಸೀರೆ ಅಸಲಿನಾ ನಕಲಿನಾ, ಪರೀಕ್ಷೆ ಮಾಡೋಕೆ ಇಲ್ಲಿದೆ ಟ್ರಿಕ್ಸ್‌

  • ಮದುವೆ ಸೀಸನ್‌ ಶುರುವಾಗಿದ್ದು, ಸೀರೆ ಖರೀದಿ ಭರಾಟೆ ಜೋರಾಗಿದೆ. ಈ ಸಮಯದಲ್ಲಿ ಬನಾರಸಿ ಸೀರೆಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಇವು ಭಾರತದ ಪರಂಪರೆಯ ಸಂಕೇತವೂ ಹೌದು. ಬನಾರಸಿ ಸೀರೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇದರಲ್ಲೂ ನಕಲಿ, ಅಸಲಿ ಇರುತ್ತೆ. ಹಾಗಾದರೆ ನೀವು ತಂದ ಬನಾರಸಿ ಸೀರೆ ಅಸಲಿಯೋ ನಕಲಿಯೋ ಪರೀಕ್ಷೆ ಮಾಡೋಕೆ ಇಲ್ಲಿದೆ ಟಿಪ್ಸ್.

ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶೇಷ ಮಹತ್ವವಿದೆ. ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳ ಸಂದರ್ಭ ಹೆಣ್ಣುಮಕ್ಕಳು, ಮಹಿಳೆಯರು ಸೀರೆ ಉಡಲು ಇಷ್ಟಪಡುತ್ತಾರೆ. ಅದರಲ್ಲೂ ಇಂತಹ ಕಾರ್ಯಕ್ರಮಗಳ ಸಂದರ್ಭ ಬನಾರಸಿ ಸೀರೆಗೆ ಬಹಳ ಬೇಡಿಕೆ. ವಾರಾಣಸಿ ಮೂಲದ ಕೈಮಗ್ಗದ ಸೀರೆ ಇದು. 
icon

(1 / 9)

ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶೇಷ ಮಹತ್ವವಿದೆ. ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳ ಸಂದರ್ಭ ಹೆಣ್ಣುಮಕ್ಕಳು, ಮಹಿಳೆಯರು ಸೀರೆ ಉಡಲು ಇಷ್ಟಪಡುತ್ತಾರೆ. ಅದರಲ್ಲೂ ಇಂತಹ ಕಾರ್ಯಕ್ರಮಗಳ ಸಂದರ್ಭ ಬನಾರಸಿ ಸೀರೆಗೆ ಬಹಳ ಬೇಡಿಕೆ. ವಾರಾಣಸಿ ಮೂಲದ ಕೈಮಗ್ಗದ ಸೀರೆ ಇದು. (PC: Canva)

ಬನಾರಸಿ ಸೀರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಸಂಕೀರ್ಣ ವಿನ್ಯಾಸ, ಬಟ್ಟೆ ಎಲ್ಲವೂ ಇದರಲ್ಲಿ ವಿಶೇಷವೇ. ಇದು ಭಾರತದ ಪರಂಪರೆ ಮತ್ತು ಕರಕುಶಲತೆಯ ಸಂಕೇತವಾಗಿದೆ. ಅತ್ಯುತ್ತಮ ರೇಷ್ಮೆ ಬಟ್ಟೆಯಿಂದ ಕೈಯಿಂದ ನೇಯ್ದ ಸೀರೆ ಇದಾಗಿದೆ. ಬನಾರಸಿ ಸೀರೆಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ನಕಲಿ ಸೀರೆಗಳ ಹಾವಳಿಯೂ ಶುರುವಾಗಿದೆ. ಹಾಗಾದರೆ ನಕಲಿ ಬನಾರಸಿ ಸೀರೆಯನ್ನು ಗುರುತಿಸುವುದು ಹೇಗೆ ನೋಡಿ. 
icon

(2 / 9)

ಬನಾರಸಿ ಸೀರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಸಂಕೀರ್ಣ ವಿನ್ಯಾಸ, ಬಟ್ಟೆ ಎಲ್ಲವೂ ಇದರಲ್ಲಿ ವಿಶೇಷವೇ. ಇದು ಭಾರತದ ಪರಂಪರೆ ಮತ್ತು ಕರಕುಶಲತೆಯ ಸಂಕೇತವಾಗಿದೆ. ಅತ್ಯುತ್ತಮ ರೇಷ್ಮೆ ಬಟ್ಟೆಯಿಂದ ಕೈಯಿಂದ ನೇಯ್ದ ಸೀರೆ ಇದಾಗಿದೆ. ಬನಾರಸಿ ಸೀರೆಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ನಕಲಿ ಸೀರೆಗಳ ಹಾವಳಿಯೂ ಶುರುವಾಗಿದೆ. ಹಾಗಾದರೆ ನಕಲಿ ಬನಾರಸಿ ಸೀರೆಯನ್ನು ಗುರುತಿಸುವುದು ಹೇಗೆ ನೋಡಿ. (PC: Canva)

ಬನಾರಸಿ ಸೀರೆಯ ಕೈಮಗ್ಗ ನೇಯ್ಗೆಯು ವಿಶೇಷವಾಗಿರುತ್ತದೆ. ಅಧಿಕೃತ ಬನಾರಸಿ ಸೀರೆಗಳು ಸಡಿಲವಾದ ಎಳೆಗಳನ್ನು ಹೊಂದಿರುತ್ತವೆ. ಸೀರೆಯ ಹಿಂಭಾಗದಲ್ಲಿ ವಾರ್ಪ್ ಮತ್ತು ನೇಯ್ಗೆ ಗ್ರಿಡ್‌ ಅನ್ನು ಒಳಗೊಂಡಿರುತ್ತವೆ. ನಕಲಿ ಸೀರೆಗಳು ಸಾಮಾನ್ಯವಾಗಿ ಕೆಳಭಾಗದಲ್ಲಿ ಫ್ಲಾಟ್, ನಯವಾದ ಮುಕ್ತಾಯವನ್ನು ಹೊಂದಿರುತ್ತವೆ. ಅಸಲಿ ಬನಾರಸಿ ಸೀರೆಗಳ ಅಂಚುಗಳ ಉದ್ದಕ್ಕೂ ಪಿನ್‌ಹೋಲ್‌ ಗುರುತುಗಳನ್ನು ಹೊಂದಿರುತ್ತವೆ. ಇದು ಸಾಂಪ್ರದಾಯಿಕ ಮಗ್ಗದಲ್ಲಿ ನೇಯ್ದಿರುವುದು ಎಂಬುದನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡುತ್ತದೆ.
icon

(3 / 9)

ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ಪ್ರಮಾಣ ಪತ್ರವನ್ನು ಕೇಳಿ ಪಡೆಯಿರಿ. ಇದು ನಿಮಗೆ ಶುದ್ಧ ರೇಷ್ಮೆಯಿಂದ ತಯಾರಿಸಿದ್ದು ಎಂಬುದನ್ನು ಖಚಿತ ಪಡಿಸುತ್ತದೆ. ಈ ಪ್ರಮಾಣೀಕರಣವು ದೃಢೀಕರಣದ ವಿಶ್ವಾಸಾರ್ಹ ಸೂಚಕವಾಗಿದೆ.  (ಸಾಂಕೇತಿಕ ಚಿತ್ರ)
icon

(4 / 9)

ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ಪ್ರಮಾಣ ಪತ್ರವನ್ನು ಕೇಳಿ ಪಡೆಯಿರಿ. ಇದು ನಿಮಗೆ ಶುದ್ಧ ರೇಷ್ಮೆಯಿಂದ ತಯಾರಿಸಿದ್ದು ಎಂಬುದನ್ನು ಖಚಿತ ಪಡಿಸುತ್ತದೆ. ಈ ಪ್ರಮಾಣೀಕರಣವು ದೃಢೀಕರಣದ ವಿಶ್ವಾಸಾರ್ಹ ಸೂಚಕವಾಗಿದೆ.  (ಸಾಂಕೇತಿಕ ಚಿತ್ರ)

ಅಧಿಕೃತ ಬನಾರಸಿ ಸೀರೆಗಳು ಸಾಮಾನ್ಯವಾಗಿ ಮೊಘಲ್ ಯುಗದ ಸಂಕೀರ್ಣ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಝರಿಯಲ್ಲಿ ರಚಿಸಲಾದ ಕಲ್ಗಾ ಮತ್ತು ಬೇಲ್‌ನಂತಹ ಸೊಗಸಾದ ಹೂವಿನ ಮತ್ತು ಎಲೆಗಳ ಮಾದರಿಗಳೊಂದಿಗೆ ಡೊಮಾಕ್, ಅಮೃ ಮತ್ತು ಅಂಬಿಯಂತಹ ಮೋಟಿಫ್ (ಚಿತ್ತಾರ) ‌ಗಳನ್ನು ನೋಡಿ. ಈ ಸಂಕೀರ್ಣ ವಿವರಗಳು ನಿಜವಾದ ಬನಾರಸಿ ಸೀರೆಗಳ ವಿಶಿಷ್ಟ ಲಕ್ಷಣಗಳಾಗಿವೆ. ನಕಲಿ ಸೀರೆಗಳಲ್ಲಿ ಇದು ಕಾಣ ಸಿಗುವುದಿಲ್ಲ. 
icon

(5 / 9)

ನಿಜವಾದ ಬನಾರಸಿ ಸೀರೆಗಳನ್ನು ಉತ್ತಮ ಗುಣಮಟ್ಟದ ರೇಷ್ಮೆಯಿಂದ ತಯಾರಿಸಲಾಗುತ್ತದೆ, ಇದು ಶ್ರೀಮಂತ ಹೊಳಪು ಮತ್ತು ನಯವಾದ, ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ. ಫ್ಯಾಬ್ರಿಕ್ ಒರಟಾಗಿದೆ ಅನ್ನಿಸಿದರೆ ಅದು ನಕಲಿಯಾಗಿರಬಹುದು.
icon

(6 / 9)

ನಿಜವಾದ ಬನಾರಸಿ ಸೀರೆಗಳನ್ನು ಉತ್ತಮ ಗುಣಮಟ್ಟದ ರೇಷ್ಮೆಯಿಂದ ತಯಾರಿಸಲಾಗುತ್ತದೆ, ಇದು ಶ್ರೀಮಂತ ಹೊಳಪು ಮತ್ತು ನಯವಾದ, ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ. ಫ್ಯಾಬ್ರಿಕ್ ಒರಟಾಗಿದೆ ಅನ್ನಿಸಿದರೆ ಅದು ನಕಲಿಯಾಗಿರಬಹುದು.

ಉತ್ತಮವಾದ ರೇಷ್ಮೆ ಮತ್ತು ಸಂಕೀರ್ಣವಾದ ನೇಯ್ಗೆ ತಂತ್ರಗಳ ಬಳಕೆಯಿಂದಾಗಿ, ಬನಾರಸಿ ಸೀರೆಗಳು ತುಂಬಾ ಭಾರವಾಗಿರುತ್ತವೆ.  ಭಾರವೂ ಸೀರೆ ಪೂರ್ತಿ ಒಂದೇ ರೀತಿ ಇರಬೇಕು. ಅಲ್ಲದೇ ಧರಿಸಲು ಆರಾಮದಾಯಕವಾಗಿರಬೇಕು. ಸೀರೆಯು ಅತಿಯಾದ ಭಾರ ಎನಿಸಿದರೆ, ಅದು ಅಸಲಿ ಆಗಿರಬಹುದು. 
icon

(7 / 9)

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲಿ ನಕಲಿ ಇರುವಂತೆ ಸೀರೆಯಲ್ಲಿಯೂ ನಕಲಿ ಹಾವಳಿ ಜೋರಾಗಿದೆ. ಮೇಲ್ನೋಟಕ್ಕೆ ಅಸಲಿಯ ಅಚ್ಚಿನಂತೆ ಕಾಣುವ ನಕಲಿ ಸೀರೆಗಳು ನಿಮ್ಮ ಕಣ್ಣಿಗೆ ಮೋಸ ಮಾಡುವುದು ಮಾತ್ರವಲ್ಲ, ಜೇಬಿಗೆ ಕತ್ತರಿ ಹಾಕಬಹುದು. ಆ ಕಾರಣದಿಂದ ಸೀರೆ ಖರೀದಿ ಮುನ್ನ ನಕಲಿ ಸೀರೆಯನ್ನು ಗುರುತಿಸುವುದು ಮುಖ್ಯವಾಗುತ್ತದೆ. 
icon

(8 / 9)

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲಿ ನಕಲಿ ಇರುವಂತೆ ಸೀರೆಯಲ್ಲಿಯೂ ನಕಲಿ ಹಾವಳಿ ಜೋರಾಗಿದೆ. ಮೇಲ್ನೋಟಕ್ಕೆ ಅಸಲಿಯ ಅಚ್ಚಿನಂತೆ ಕಾಣುವ ನಕಲಿ ಸೀರೆಗಳು ನಿಮ್ಮ ಕಣ್ಣಿಗೆ ಮೋಸ ಮಾಡುವುದು ಮಾತ್ರವಲ್ಲ, ಜೇಬಿಗೆ ಕತ್ತರಿ ಹಾಕಬಹುದು. ಆ ಕಾರಣದಿಂದ ಸೀರೆ ಖರೀದಿ ಮುನ್ನ ನಕಲಿ ಸೀರೆಯನ್ನು ಗುರುತಿಸುವುದು ಮುಖ್ಯವಾಗುತ್ತದೆ. (PC: Canva)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು