Year in Review: 2024ರಲ್ಲಿ ಹಸೆಮಣೆ ಏರಿದ ಕ್ರಿಕೆಟಿಗರು; ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಸ್ಟಾರ್‌ ಆಟಗಾರರ ಫೋಟೋ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review: 2024ರಲ್ಲಿ ಹಸೆಮಣೆ ಏರಿದ ಕ್ರಿಕೆಟಿಗರು; ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಸ್ಟಾರ್‌ ಆಟಗಾರರ ಫೋಟೋ

Year in Review: 2024ರಲ್ಲಿ ಹಸೆಮಣೆ ಏರಿದ ಕ್ರಿಕೆಟಿಗರು; ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಸ್ಟಾರ್‌ ಆಟಗಾರರ ಫೋಟೋ

  • 2024ರಲ್ಲಿ ಹಲವು ಕ್ರಿಕೆಟಿಗರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಮೂಲಕ ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಭಾರತ ತಂಡ ಹಾಗೂ ಕೆಕೆಆರ್‌ ಸ್ಟಾರ್‌ ಬ್ಯಾಟರ್ ವೆಂಕಟೇಶ್ ಅಯ್ಯರ್, ರಶೀದ್ ಖಾನ್ ಸೇರಿದಂತೆ ಈ ವರ್ಷ ಮದುವೆಯಾದ 6 ಕ್ರಿಕೆಟಿಗರು ಯಾರ್ಯಾರು ಎಂಬುದನ್ನು ನೋಡೋಣ.

ಮೊಹ್ಸಿನ್ ಖಾನ್: ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವ ಭಾರತೀಯ ಬೌಲರ್ ಮೊಹ್ಸಿನ್ ಖಾನ್ ನವೆಂಬರ್‌ ತಿಂಗಳಲ್ಲಿ ವಿವಾಹವಾದರು. 
icon

(1 / 6)

ಪ್ರೇರಕ ಮಂಕಡ್: ದೇಶೀಯ ಕ್ರಿಕೆಟ್‌ನ ಆಲ್‌ರೌಂಡರ್ ಪ್ರೇರಾಮ್ ಮಂಕಡ್, 2023ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ 5 ಪಂದ್ಯಗಳಲ್ಲಿ ಆಡಿದ್ದಾರೆ. 30 ವರ್ಷದ ಪ್ರೇರಕ್ ಈ ವರ್ಷ ತಮ್ಮ ಗೆಳತಿ ಕಿಂಜಾಲ್ ಅವರನ್ನು ವಿವಾಹವಾದರು.
icon

(2 / 6)

ಚೇತನ್ ಸಕರಿಯಾ: 26 ವರ್ಷದ ವೇಗದ ಬೌಲರ್ ಚೇತನ್ ಸಕರಿಯಾ, ಈ ವರ್ಷ ಹಸೆಮಣೆ ಏರಿದ್ದಾರೆ. ತಮ್ಮ ಗೆಳತಿ ಮೇಘನಾ ಜಂಬೂಚಾ ಅವರನ್ನು ವಿವಾಹವಾದರು. ಚೇತನ್ ಭಾರತದ ಪರ 1 ಏಕದಿನ ಹಾಗೂ 2 ಟಿ20 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಐಪಿಎಲ್‌ನಲ್ಲಿ 19 ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ, ಮುಂದಿನ ಆವೃತ್ತಿಯಲ್ಲಿ ಆಡಲು ಹರಾಜಿನಲ್ಲಿ ಯಾವುದೇ ತಂಡವು ಅವರನ್ನು ಖರೀದಿ ಮಾಡಿಲ್ಲ.
icon

(3 / 6)

ಪ್ರಿಯಾಂಕ್ ಪಾಂಚಾಲ್: ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ಪ್ರಿಯಾಂಕ್ ಪಾಂಚಾಲ್, ದೇಶೀಯ ಕ್ರಿಕೆಟ್‌ನಲ್ಲಿ ಗುಜರಾತ್ ತಂಡದ ನಾಯಕರಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ, ಅವರು ಕ್ರೀಡಾ ಮನಶ್ಶಾಸ್ತ್ರಜ್ಞರಾಗಿರುವ ಕಲ್ನಾ ಶುಕ್ಲಾ ಅವರೊಂದಿಗೆ ಹಸೆಮೆಣೆ ಏರಿದರು.
icon

(4 / 6)

ವೆಂಕಟೇಶ ಅಯ್ಯರ್: ಕೆಕೆಆ ಬ್ಯಾಟರ್‌ ವೆಂಕಟೇಶ್ ಅಯ್ಯರ್, ಈ ವರ್ಷದ ಜೂನ್ ತಿಂಗಳಲ್ಲಿ ಶ್ರುತಿ ರಘುನಾಥನ್ ಅವರನ್ನು ವಿವಾಹವಾದರು. ಇವರದ್ದೂ ಪ್ರೇಮ ವಿವಾಹ. ಟೀಮ್ ಇಂಡಿಯಾ ಪರ ಎರಡು ಏಕದಿನ ಹಾಗೂ 9 ಟಿ20 ಪಂದ್ಯಗಳಲ್ಲಿ ಆಡಿರುವ ವೆಂಕಟೇಶ್‌, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ.
icon

(5 / 6)

ರಶೀದ್ ಖಾನ್: ಅಫ್ಘಾನಿಸ್ತಾನದ ಸ್ಟಾರ್ ಬೌಲರ್ ರಶೀದ್ ಖಾನ್ ಅಕ್ಟೋಬರ್ 3ರಂದು ವಿವಾಹವಾದರು. ಅವರು ಕಾಬೂಲ್‌ನ ಇಂಪೀರಿಯಲ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಬಹಳ ವೈಭವದಿಂದ ವಿವಾಹವಾದರು.
icon

(6 / 6)

ಇತರ ಗ್ಯಾಲರಿಗಳು