Vata Savitri Vrat: ಸುಮಂಗಲಿಯರು ಆಚರಿಸುವ ವಟ ಸಾವಿತ್ರಿ ವ್ರತದ ಪೂಜಾ ನಿಯಮಗಳೇನು? ಆಲದ ಮರವನ್ನು ಹೇಗೆ ಪೂಜಿಸಬೇಕು?
ವಟ ಸಾವಿತ್ರಿ ವ್ರತವನ್ನು ಕೆಲವರು ಜೂನ್ 6 ರಂದು ಆಚರಿಸಿದರೆ ಇನ್ನೂ ಕೆಲವರು ಜೂನ್ 21 ರಂದು ಆಚರಿಸುತ್ತಿದ್ದಾರೆ. ಈ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮಗೆ ಆಶೀರ್ವದಿಸುತ್ತಾಳೆ. ಇದರಿಂದ ನಿಮ್ಮ ಕುಟುಂಬಕ್ಕೆ ಕೂಡಾ ಒಳ್ಳೆಯದಾಗುತ್ತದೆ.
(1 / 5)
ವಿವಾಹಿತ ಮಹಿಳೆಯರಿಗೆ ವಟ ಸಾವಿತ್ರಿ ವ್ರತ ಬಹಳ ಪ್ರಮುಖವಾಗಿದೆ. ಆ ದಿನ ಸುಮಂಗಲಿಯರು ಉಪವಾಸವಿದ್ದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ತರಲೆಂದು ದೇವರಿಗೆ ಪ್ರಾರ್ಥಿಸುತ್ತಾರೆ. ಈ ಬಾರಿ ಜೂನ್ 21 ರಂದು ವಟ ಸಾವಿತ್ರ ವ್ರತವನ್ನು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಪತಿಗೆ ದೀರ್ಘಾಯುಷ್ಯ ದೊರೆಯಲೆಂದು ಪ್ರಾರ್ಥಿಸಿ ಈ ವ್ರತ ಮಾಡುತ್ತಾರೆ.
(2 / 5)
ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಟಸಾವಿತ್ರಿ ವ್ರತ ಮಾಡಿದರೆ ಮನೆಯಲ್ಲಿ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ. ಈ ದಿನ ಪ್ರಮುಖವಾಗಿ ಮಹಿಳೆಯರು ಆಲದ ಮರಕ್ಕೆ ಪೂಜೆ ಮಾಡುತ್ತಾರೆ.
(3 / 5)
ಜ್ಯೇಷ್ಠ ಮಾಸದ ಅಮಾವಾಸ್ಯೆ ಹಾಗೂ ಜ್ಯೇಷ್ಠ ಮಾಸದ ಹುಣ್ಣಿಮೆಯಂದು ವಟ ಸಾವಿತ್ರಿ ವ್ರತವನ್ನು ಆಚರಿಸಬಹುದು. ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ಅನೇಕ ಕಡೆ ಜ್ಯೇಷ್ಠ ಮಾಸದ ಅಮವಾಸ್ಯೆಯ ದಿನ, ಅಂದರೆ ಜೂನ್ 6 ರಂದು ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ.
(4 / 5)
ಯಮನನ್ನು ಕಾಡಿ ಬೇಡಿ, ತನ್ನ ಪತಿಯ ಪ್ರಾಣವನ್ನು ವಾಪಸ್ ಪಡೆದ ಸಾವಿತ್ರಿಯನ್ನು ನೆನೆದು ಈ ವಟ ಸಾವಿತ್ರ ವ್ರತವನ್ನು ಆಚರಿಸಲಾಗುತ್ತದೆ. ಆಲದ ಮರಕ್ಕೆ ಹಸುವಿನ ಹಾಲನ್ನು ಅರ್ಪಿಸುತ್ತಾರೆ. ಆಲದ ಮರದಲ್ಲಿ ವಿಷ್ಣು, ಶಿವ ಮತ್ತು ಬ್ರಹ್ಮ ನೆಲೆಸಿದ್ದಾರೆಂದು ನಂಬಲಾಗಿದೆ.
ಇತರ ಗ್ಯಾಲರಿಗಳು