International Cheetah Day 2024: ಚೀತಾಗಳಿಗೂ ಉಂಟು ಒಂದು ದಿನ; ಡಿಸೆಂಬರ್ 4 ಅಂತರರಾಷ್ಟ್ರೀಯ ಚೀತಾ ದಿನ, ಏನಿದರ ವಿಶೇಷ
- International Cheetah Day 2024: ಚೀತಾ ಎಂದ ತಕ್ಷಣ ನೆನಪಾಗೋದು ಅನಿಮಿಯತ ಓಟ. ಓಡುವುದರಲ್ಲಿ ಇವುಗಳನ್ನು ಮೀರಿಸುವ ಪ್ರಾಣಿ ಇಲ್ಲ. ಚೀತಾಗಳು ಭಾರತದಲ್ಲಿ ಪುನರುತ್ಥಾನ ಯೋಜನೆ ಮೂಲಕ ಪ್ರವೇಶ ಪಡೆದಿವೆ. ಚೀತಾಗಳ ಅಂತರಾಷ್ಟ್ರೀಯ ಇಂದು( ಡಿಸೆಂಬರ್ 4). ಅವುಗಳ ಕುರಿತಾದ ಮಾಹಿತಿಯ ಚಿತ್ರನೋಟ ಇಲ್ಲಿದೆ.
- International Cheetah Day 2024: ಚೀತಾ ಎಂದ ತಕ್ಷಣ ನೆನಪಾಗೋದು ಅನಿಮಿಯತ ಓಟ. ಓಡುವುದರಲ್ಲಿ ಇವುಗಳನ್ನು ಮೀರಿಸುವ ಪ್ರಾಣಿ ಇಲ್ಲ. ಚೀತಾಗಳು ಭಾರತದಲ್ಲಿ ಪುನರುತ್ಥಾನ ಯೋಜನೆ ಮೂಲಕ ಪ್ರವೇಶ ಪಡೆದಿವೆ. ಚೀತಾಗಳ ಅಂತರಾಷ್ಟ್ರೀಯ ಇಂದು( ಡಿಸೆಂಬರ್ 4). ಅವುಗಳ ಕುರಿತಾದ ಮಾಹಿತಿಯ ಚಿತ್ರನೋಟ ಇಲ್ಲಿದೆ.
(1 / 6)
ವಿಶ್ವದಲ್ಲೇ ವೇಗವಾಗಿ ಓಡಬಲ್ಲ ಕೆಲವೇ ಪ್ರಾಣಿಗಳಲ್ಲಿ ಚೀತಾಕ್ಕೆ ಮೊದಲ ಸ್ಥಾನ. ಚಿರತೆ- ಜಾಗ್ವರ್‌ನ ವಂಶಾವಳಿಯ ಚೀತಾಗಳು ವಿಶಿಷ್ಟ ಪ್ರಾಣಿಗಳೇ.ದು ಮೂರೇ ಮೂರು ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 96 ಕಿಲೋಮೀಟರ್ ವೇಗವನ್ನು ವರ್ಧಿಸಿಕೊಳ್ಳಬಲ್ಲದು
(2 / 6)
2010 ರಲ್ಲಿ, ವನ್ಯಜೀವಿ ತಜ್ಞರಾದ ಡಾ. ಲಾರಿ ಮಾರ್ಕರ್ ಡಿಸೆಂಬರ್ 4 ಅನ್ನು ಅಂತರರಾಷ್ಟ್ರೀಯ ಚಿರತೆ ದಿನವೆಂದು ಘೋಷಿಸಿದರು. ಓರೆಗಾನ್‌ನ ವಿನ್‌ಸ್ಟನ್‌ನಲ್ಲಿರುವ ವನ್ಯಜೀವಿ ಸಫಾರಿಯಲ್ಲಿ ಡಾ.ಲಾರಿ ಸಾಕಿದ ಖಯಾಮ್ ಎಂಬ ಚಿರತೆಯ ಮರಿ ನೆನಪಿಗಾಗಿ ವಾರ್ಷಿಕ ಆಚರಣೆಯನ್ನು ಶುರು ಮಾಡಿದರು.(Pic: Paul Goldstein)
(3 / 6)
ವಯಸ್ಕ ಚೀತಾದ ತೂಕ ಸಾಮಾನ್ಯವಾಗಿ 34 ರಿಂದ 56 ಕಿಲೋ. ಗಂಡು ಚೀತಾಗಳು ಹೆಚ್ಚು ಭಾರ. ಕೇಸರಿ ಕಂದು ಅಥವಾ ಹಳದಿ ಕಂದು ಮಿಶ್ರವರ್ಣದ ಇದರ ಚರ್ಮದ ಮೇಲೆ ಹೊಳೆಯುವ ಕಪ್ಪು ಚುಕ್ಕೆಗಳಿದ್ದು, ಇವು ಪ್ರತಿ ಚೀತಾಕ್ಕೂ ವಿಭಿನ್ನವಾಗಿರುತ್ತದೆ
(4 / 6)
ಉಭಯ ಕಂಗಳ ಒಳಬದಿಯಿಂದ ಬಾಯಿಯ ಹೊರಬದಿಯವರೆಗೆ ಕಪ್ಪು ಪಟ್ಟಿಗಳಿದ್ದು, ಇವು ಕಣ್ಣೀರಿನಂತೆ ಕಾಣಿಸುತ್ತವೆ. ಇವುಗಳ ಬಾಲ ದಪ್ಪ, ರೋಮಾವೃತ ಹಾಗೂ ಕಪ್ಪು ವೃತ್ತಗಳಿಂದ ಕೂಡಿದೆ. ಈ ಮೂರೂ ಜಾತಿಗಳಲ್ಲಿ ಚೀತಾಗಳು ಅತಿ ಅಳಿವಿನಂಚಿನ ಪ್ರಾಣಿಗಳು.
(5 / 6)
ದಶಕದ ಹಿಂದೆಯೇ ಯುಪಿಎ ಸರ್ಕಾರ ಇದ್ದಾಗ ರೂಪಿಸಿದ್ದ ಚೀತಾ ಪುನರುತ್ಥಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಕ್ಕೆ ತಂದರು. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಮರುಪರಿಚಯ ಕಾರ್ಯಕ್ರಮದಡಿ ಈಗಲೂ ಜಾರಿಯಲ್ಲಿದೆ.
ಇತರ ಗ್ಯಾಲರಿಗಳು