ಯುರೋಪ್ ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ಕಳಪೆ ರಸ್ತೆ ಬಗ್ಗೆ ಟೆಕ್ಕಿ ಬೇಸರ
ಕನ್ನಡ ಸುದ್ದಿ  /  ಕರ್ನಾಟಕ  /  ಯುರೋಪ್ ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ಕಳಪೆ ರಸ್ತೆ ಬಗ್ಗೆ ಟೆಕ್ಕಿ ಬೇಸರ

ಯುರೋಪ್ ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ಕಳಪೆ ರಸ್ತೆ ಬಗ್ಗೆ ಟೆಕ್ಕಿ ಬೇಸರ

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಟೆಕ್ಕಿ, ನಗರದ ಕಳಪೆ ರಸ್ತೆ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ವಿದೇಶಿ ಸ್ನೇಹಿತರನ್ನು ಉದ್ಯಾನ ನಗರಿಯ ಮನೆಗೆ ಕರೆಯಲು ಮುಜುಗರವಾಗಿದ್ದರೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ರಸ್ತೆ ಬಗ್ಗೆ ಟೆಕ್ಕಿ ಬೇಸರ (representational photos)
ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ರಸ್ತೆ ಬಗ್ಗೆ ಟೆಕ್ಕಿ ಬೇಸರ (representational photos)

ಬೆಂಗಳೂರಿನ ರಸ್ತೆಗಳು ಯಾವತ್ತೂ ಸುದ್ದಿಯಲ್ಲಿರುತ್ತವೆ. ಹದಗೆಟ್ಟ ರಸ್ತೆಗಳಿಂದಾಗಿ ವಾಹನ ಸವಾರರಿಗೆ ಸಂಕಷ್ಟ ಮಾತ್ರವಲ್ಲದೆ, ಹಲವು ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡ ಸಂದರ್ಭಗಳು ಕೂಡಾ ಎದುರಾಗಿವೆ. ಇದೀಗ, ಟೆಕ್ಕಿಯೊಬ್ಬರು, ಉದ್ಯಾನ ನಗರದ ರಸ್ತೆಗಳಿಂದ ಮುಜುಗರ ಎದುರಿಸಿದ ಸನ್ನಿವೇಶದ ಬಗ್ಗೆ ಹೇಳಿಕೊಂಡಿದ್ದಾರೆ. ಟೆಕ್ಕಿಯೊಬ್ಬರು ತಮ್ಮ ಮನೆಗೆ ಹೋಗುವ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿರುವುದರಿಂದ, ವಿದೇಶಿ ಸ್ನೇಹಿತರನ್ನು ಮನೆಗೆ ಆಹ್ವಾನಿಸಲು ಮುಜುಗರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹತಾಶೆ ವ್ಯಕ್ತಪಡಿಸಿರುವ ವ್ಯಕ್ತಿ, ತಮ್ಮ ನಿವಾಸದ ಸುತ್ತಲಿನ ಕಳಪೆ ಮೂಲಸೌಕರ್ಯಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿದೇಶಿ ಸ್ನೇಹಿತರನ್ನು ಮನೆಗೆ ಕರೆಯುವುದು ಭಾರತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿಕೊಂಡಿದ್ದಾರೆ.

“ಯುರೋಪ್ ಮತ್ತು ಯುಎಸ್‌ನ ನನ್ನ ಸ್ನೇಹಿತರು ಡಿಸೆಂಬರ್ 7ರಂದು 100 ಕಿಮೀ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ನಾನು ಅವರನ್ನು ನನ್ನ ಮನೆಗೆ ಕರೆಯಬೇಕೆಂದು ಬಯಸುತ್ತೇನೆ. ಆದರೆ ನನ್ನ ಮನೆಗೆ ಹೋಗುವ ರಸ್ತೆ ಭಯಾನಕ ಸ್ಥಿತಿಯಲ್ಲಿರುವುದರಿಂದ, ಅವರನ್ನು ಕರೆಯಲು ಮನಸ್ಸು ಒಪ್ಪುತ್ತಿಲ್ಲ,” ಎಂದು ಈ ಹಿಂದೆ ಯುರೋಪ್‌ನಲ್ಲಿ ಕೆಲಸ ಮಾಡಿದ ನಂತರ ಬೆಂಗಳೂರಿಗೆ ಹಿಂದಿರುಗಿದ ಟೆಕ್ಕಿಯು ವಾಟ್ಸಾಪ್‌ ಸಂದೇಶದಲ್ಲಿ ಈ ಮಾತನ್ನು ಹೇಳಿದ್ದಾರೆ. ಸಿಟಿಜನ್ಸ್ ಮೂವ್‌ಮೆಂಟ್ ಎಂಬ ಟ್ವಿಟರ್‌ ಹ್ಯಾಂಡಲ್ ಇದನ್ನು ಪೋಸ್ಟ್‌ ಮಾಡಿದೆ. (ಈ X ಪೋಸ್ಟ್ ಅನ್ನು ಹಿಂದೂಸ್ತಾನ್‌ ಟೈಮ್ಸ್ ಸ್ವತಂತ್ರವಾಗಿ ಪರಿಶೀಲಿಸಿಲ್ಲ).

ಉದ್ಯಾನ ನಗರಿಯ ರಸ್ತೆಗಳು ಯಾವಾಗ ವಿಶ್ವ ದರ್ಜೆಯ ರಸ್ತೆಗಳಾಗಿ ಬದಲಾಗುತ್ತವೆ ಎಂದು ಟೆಕ್ಕಿ ಪ್ರಶ್ನಿಸಿದ್ದಾರೆ. “ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂದು ಅವರಿಗೆ ತೋರಿಸಲು ಇಷ್ಟಪಡುವುದಿಲ್ಲ. ಅದು ಭಾರತದ ಬಗ್ಗೆ ಅವರಲ್ಲಿ ಕೆಟ್ಟ ಅಭಿಪ್ರಾಯವನ್ನು ತರುತ್ತದೆ. ಈ ಹಂತದಲ್ಲಿ ನಾನು ನಿಜವಾಗಿಯೂ ನಿರಾಶನಾಗಿದ್ದೇನೆ. ನಾನು ಯುರೋಪ್‌ನಿಂದ ಬೆಂಗಳೂರಿಗೆ ಏಕೆ ಬಂದೆ ಎಂದು ನನಗೇ ಅಚ್ಚರಿಯಾಗುತ್ತಿದೆ. ನಮ್ಮ ರಸ್ತೆಗಳು ಯಾವಾಗ ವಿಶ್ವ ದರ್ಜೆಯಾಗುತ್ತವೆ?” ಎಂದು ಅವರು ಈ ಎಕ್ಸ್‌ ಹ್ಯಾಂಡಲ್‌ಗೆ ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದ್ದಾರೆ.

ಎಕ್ಸ್‌ ಪೋಸ್ಟ್‌ ಹೀಗಿದೆ

ಈ ಪೋಸ್ಟ್‌ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವೊಬ್ಬರು ಕೆಟ್ಟ ರಸ್ತೆಗಳನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಇನ್ನೂ ಕೆಲವರು ನಮ್ಮ ಬೆಂಗಳೂರನ್ನು ದೂಷಿಸಬೇಡಿ ಎಂದು ಟೆಕ್ಕಿಗೆ ಹೇಳಿದ್ದಾರೆ.

ಯಾವುದೋ ಹಳ್ಳಿಯನ್ನು ಬೆಂಗಳೂರು ಎಂದು ತೋರಿಸಬೇಡಿ

ಬಳಕೆದಾರರೊಬ್ಬರು ಟೆಕ್ಕಿಯ ಮಾತನ್ನು ಒಪ್ಪಿಲ್ಲ. “ಬೆಂಗಳೂರಲ್ಲಿ ಮನೆ ಖರೀದಿ ಮಾಡುವ ಮುನ್ನ ನೀವು ಹಿನ್ನೆಲೆಯಲ್ಲಿ ಏನು ಕೆಲಸ ಮಾಡಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ. ಖರೀದಿಸುವ ಮೊದಲು ನೀವು ರಸ್ತೆಗಳನ್ನು ಪರಿಶೀಲಿಸಲಿಲ್ಲವೇ? ನೀವು ಯಾವುದೋ ದೂರದ ಹಳ್ಳಿಯಲ್ಲಿ ಇಳಿದು ಅದನ್ನು ಬೆಂಗಳೂರು ಎಂದು ಕರೆಯುತ್ತೀರಿ. ಅದು ಬೆಂಗಳೂರು ಅಲ್ಲ. ನಿಮ್ಮ ಸ್ನೇಹಿತರಿಗೆ ಜಯನಗರ, ಜೆಪಿ ನಗರಕ್ಕೆ ಬಂದು ನಿಜವಾದ ಬೆಂಗಳೂರನ್ನು ನೋಡಲು ಹೇಳಿ” ಎಂದು ಟಾಂಗ್‌ ಕೊಟ್ಟಿದ್ದಾರೆ.

Whats_app_banner