T20 World Cup Prize Money: ಐಪಿಎಲ್ ವಿಜೇತರಿಗಿಂತಲೂ 7 ಕೋಟಿ ಕಡಿಮೆ ಟಿ20 ವಿಶ್ವಕಪ್ ಚಾಂಪಿಯನ್ ಬಹುಮಾನ ಮೊತ್ತ
- T20 World Cup Prize Money: ಜೂನ್ 1 ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ತಂಡದ ಬಹುಮಾನ ಐಪಿಎಲ್ ಚಾಂಪಿಯನ್ ತಂಡಕ್ಕಿಂತಲೂ ಕಡಿಮೆ.
- T20 World Cup Prize Money: ಜೂನ್ 1 ರಿಂದ ಶುರುವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ತಂಡದ ಬಹುಮಾನ ಐಪಿಎಲ್ ಚಾಂಪಿಯನ್ ತಂಡಕ್ಕಿಂತಲೂ ಕಡಿಮೆ.
(1 / 5)
ಮುಂಬರುವ ಟಿ20 ವಿಶ್ವಕಪ್ ಆರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ. 2022ರ ಟಿ20 ವಿಶ್ವಕಪ್ಗೆ ಘೋಷಿಸಿದ ಬಹುಮಾನದ ಮೊತ್ತವೇ ಈ ಬಾರಿಯೂ ಅಷ್ಟೇ ಇರಲಿದೆ. ಆದರೆ ಐಪಿಎಲ್ ಚಾಂಪಿಯನ್ ತಂಡಕ್ಕೆ ಟಿ20 ವಿಶ್ವಕಪ್ ಬಹುಮಾನದ ಮೊತ್ತ ಹೋಲಿಸಿದರೆ 7 ಕೋಟಿ ಕಡಿಮೆ. ಐಪಿಎಲ್ vs ಟಿ20 ವಿಶ್ವಕಪ್ ಚಾಂಪಿಯನ್ ಮೊತ್ತದೊಂದಿಗೆ ಹೋಲಿಸಿ ನೋಡಿ ಎಷ್ಟಿದೆ?
(2 / 5)
2022ರ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೆ 1.6 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ ಭಾರತೀಯ ಮೌಲ್ಯದಲ್ಲಿ ಸುಮಾರು 13 ಕೋಟಿ ರೂಪಾಯಿ, ರನ್ನರ್ಸ್ ಅಪ್ ತಂಡ ಪಾಕಿಸ್ತಾನ 6.5 ಕೋಟಿ ರೂಪಾಯಿ ಗೆದ್ದಿತ್ತು. 2021ರ ಟಿ20 ವಿಶ್ವಕಪ್ನಿಂದ ಐಸಿಸಿ ಅಷ್ಟೇ ಮೊತ್ತದ ಬಹುಮಾನದ ಮೊತ್ತ ನೀಡುತ್ತಿದೆ.
(3 / 5)
ಐಪಿಎಲ್ ಚಾಂಪಿಯನ್ ಈ ವರ್ಷ ಐಪಿಎಲ್ ಗೆದ್ದು 20 ಕೋಟಿ ಗೆದ್ದುಕೊಂಡಿತು. ಇದರರ್ಥ ಐಪಿಎಲ್ ವಿಜೇತರೊಂದಿಗೆ ಟಿ20 ವಿಶ್ವ ಚಾಂಪಿಯನ್ಗಳೊಂದಿಗೆ ಹೋಲಿಸಿದರೆ 7 ಕೋಟಿ ಹೆಚ್ಚು. ಐಪಿಎಲ್ ರನ್ನರ್ಅಪ್ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 12.5 ಕೋಟಿ ಸಿಕ್ಕಿದೆ. ಐಪಿಎಲ್ ರನ್ನರ್ಅಪ್ ತಂಡದ ಬಹುಮಾನದ ಮೊತ್ತವು ಟಿ20 ವಿಶ್ವಕಪ್ನಲ್ಲಿ ರನ್ನರ್ಅಪ್ ತಂಡದ ಬಹುಮಾನದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
(4 / 5)
ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಐಸಿಸಿ 1.6 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 13 ಕೋಟಿ ರೂ ಸಿಕ್ಕಿತ್ತು.
ಇತರ ಗ್ಯಾಲರಿಗಳು