Saptami Gowda: ನ್ಯಾಷನಲ್ ಸ್ವಿಮ್ಮರ್ ಸಿಂಗಾರದ ಸಿರಿ ಲೀಲಾ, ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ನೋಡಿ...ಫೋಟೋಸ್
ಸಿನಿಮಾ ನಟ-ನಟಿಯರಿಗೆ ಕೆಲವೊಂದು ಸಿನಿಮಾಗಳು ಬಹಳ ವಿಶೇಷವಾಗಿರುತ್ತವೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ಕೆಲವೊಂದು ನಿರ್ದಿಷ್ಟ ಪಾತ್ರಗಳಿಂದ ಅವರು ರಾತ್ರೋ ರಾತ್ರಿ ಬಹಳ ಫೇಮಸ್ ಆಗಿ ಬಿಡುತ್ತಾರೆ.
ಸಿನಿಮಾ ನಟ-ನಟಿಯರಿಗೆ ಕೆಲವೊಂದು ಸಿನಿಮಾಗಳು ಬಹಳ ವಿಶೇಷವಾಗಿರುತ್ತವೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ಕೆಲವೊಂದು ನಿರ್ದಿಷ್ಟ ಪಾತ್ರಗಳಿಂದ ಅವರು ರಾತ್ರೋ ರಾತ್ರಿ ಬಹಳ ಫೇಮಸ್ ಆಗಿ ಬಿಡುತ್ತಾರೆ.
(1 / 9)
ಕಳೆದ ಮೂರು ದಿನಗಳಿಂದ ಯೂಟ್ಯೂಬ್‌ನಲ್ಲಿ 'ಕಾಂತಾರ' ಚಿತ್ರದ ಸಿಂಗಾರದ ಸಿರಿಯೇ ಹಾಡು ಭಾರೀ ಹಲ್ ಚಲ್ ಕ್ರಿಯೇಟ್ ಮಾಡಿದೆ. ಈ ಹಾಡಿನಲ್ಲಿ ನಾಯಕ ನಾಯಕಿಯ ಕೆಮಿಸ್ಟ್ರಿ ಬಹಳ ಚೆನ್ನಾಗಿ ವರ್ಕೌಟ್ ಆಗಿದೆ.(PC: Saptami Gowda Social media)
(2 / 9)
ಬಿಡುಗಡೆಯಾದ ಮೂರೇ ದಿನಕ್ಕೆ ಈ ಹಾಡು 3 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್ ಕಂಡಿದೆ. ಶಿವ ಪಾತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಯುವಜನತೆಯ ದಿಲ್‌ಗೆ ಕನ್ನ ಹಾಕಿದ್ದಾರೆ. ಎಲ್ಲರೂ ಮತ್ತೆ ಮತ್ತೆ ಇದೇ ಹಾಡನ್ನು ನೋಡುತ್ತಿದ್ದಾರೆ.(PC: Saptami Gowda Social media)
(3 / 9)
ಸಪ್ತಮಿಗೌಡ ಚಿತ್ರರಂಗಕ್ಕೆ ಬಂದದ್ದು ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ. ಡಾಲಿ ಧನಂಜಯ್ ಜೊತೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದರು.(PC: Saptami Gowda Social media)
(4 / 9)
ಜೂನ್ 8, ಸಪ್ತಮಿ ಗೌಡ ಹುಟ್ಟುಹಬ್ಬದಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಲೀಲಾ/ಸಪ್ತಮಿ ಗೌಡ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು.(PC: Saptami Gowda Social media)
(5 / 9)
'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಸಪ್ತಮಿ ಗೌಡ ಗಿರಿಜ ಎಂಬ ಪಾತ್ರದಲ್ಲಿ ನಟಿಸಿದ್ದರು. ಅದಾದ ನಂತರ 5-6 ಕಥೆಗಳನ್ನು ಕೇಳಿದ್ದೆ. ಆದರೆ ಲೀಲಾ ಪಾತ್ರದ ಬಗ್ಗೆ ರಿಷಭ್ ಶೆಟ್ಟಿ ವಿವರಿಸಿದಾಗ ನಾನು ಕೂಡಲೇ ಒಪ್ಪಿಕೊಂಡೆ ಈ ಪಾತ್ರ ಬಹಳ ವಿಭಿನ್ನವಾಗಿದೆ ಎನ್ನುತ್ತಾರೆ ಸಪ್ತಮಿ.(PC: Saptami Gowda Social media)
(6 / 9)
ಸಪ್ತಮಿ ಗೌಡ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಪುತ್ರಿ. ನಟನೆ ಮಾತ್ರವಲ್ಲದೆ ಸಪ್ತಮಿ ರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿ ಕೂಡಾ ಹೆಸರು ಮಾಡಿದ್ದಾರೆ.(PC: Saptami Gowda Social media)
(7 / 9)
ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ ವಿಭಿನ್ನ ಪಾತ್ರಗಳನ್ನು ಮಾಡಬೇಕೆಂಬುದು ಸಪ್ತಮಿ ಗೌಡ ಆಸೆಯಂತೆ. ಆದ್ದರಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಕ್ರಿಪ್ಟ್ ವಿಚಾರದಲ್ಲಿ ಅವರು ಬಹಳ ಚೂಸಿಯಾಗಿದ್ದಾರೆ. ನಟಿಸಿರುವುದು ಎರಡನೇ ಸಿನಿಮಾಗಳಲ್ಲಾದರೂ ಸಪ್ತಮಿ ಸಾಕಷ್ಟು ಜನರ ಮನಸ್ಸು ಗೆದ್ದಿದ್ದಾರೆ.(PC: Saptami Gowda Social media)
(8 / 9)
'ಕಾಂತಾರ' ಚಿತ್ರದಲ್ಲಿ ಸಪ್ತಮಿ ಗೌಡ ಕರಾವಳಿ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದು ಕರಾವಳಿ ಭಾಗದ ಭಾಷೆಯನ್ನು ಕಲಿತಿದ್ದಾರಂತೆ.(PC: Saptami Gowda Social media)
ಇತರ ಗ್ಯಾಲರಿಗಳು