Karnataka Tourism: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಿವು; ಈ ಜಾಗಗಳನ್ನು ನೀವಿನ್ನೂ ನೋಡಿಲ್ವಾ? ಈಗ್ಲೇ ಟ್ರಿಪ್ ಪ್ಲಾನ್ ಮಾಡಿ ಹೊರಡಿ
- Best Places In Karnataka: ಬೆಂಗಳೂರಿನಿಂದ ಮಂಗಳೂರಿನವರೆಗೆ, ಗೋಕರ್ಣದಿಂದ ಹಂಪಿಯವರೆಗೆ ಕರ್ನಾಟಕದ ಈ ಪ್ರಸಿದ್ಧ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಈ ಬೇಸಿಗೆಯಲ್ಲಿ ನಿಮ್ಮ ಪ್ರವಾಸಕ್ಕೆ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ ಟ್ರಿಪ್ ಸಾರ್ಥಕ ಎನ್ನಿಸುವುದರಲ್ಲಿ ಎರಡು ಮಾತಿಲ್ಲ.
- Best Places In Karnataka: ಬೆಂಗಳೂರಿನಿಂದ ಮಂಗಳೂರಿನವರೆಗೆ, ಗೋಕರ್ಣದಿಂದ ಹಂಪಿಯವರೆಗೆ ಕರ್ನಾಟಕದ ಈ ಪ್ರಸಿದ್ಧ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಈ ಬೇಸಿಗೆಯಲ್ಲಿ ನಿಮ್ಮ ಪ್ರವಾಸಕ್ಕೆ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ ಟ್ರಿಪ್ ಸಾರ್ಥಕ ಎನ್ನಿಸುವುದರಲ್ಲಿ ಎರಡು ಮಾತಿಲ್ಲ.
(1 / 9)
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಐಟಿ-ಬಿಟಿ ಸಿಟಿ ಮಾತ್ರವಲ್ಲ, ಇಲ್ಲಿ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿವೆ. ನಗರ ಮಾತ್ರವಲ್ಲದೇ, ಸುತ್ತಲಿನ ಪ್ರವಾಸಿ ತಾಣಗಳು ಆಕರ್ಷಣೀಯವಾಗಿವೆ. ಸಂಸ್ಕೃತಿ ಹಾಗೂ ವರ್ಣರಂಜಿತ ನಗರವಾದ ಬೆಂಗಳೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಬೆಂಗಳೂರು ಅರಮನೆ, ಹಲಸೂರು ಸೋಮನಾಥ ದೇವಾಲಯ, ಲಾಲ್‌ಬಾಗ್, ಕಬ್ಬನ್‌ಪಾರ್ಕ್, ನೆಹರೂ ತಾರಾಲಯ, ಪ್ರಸಿದ್ಧ ಕೆರೆಗಳು, ಉದ್ಯಾನಗಳು, ಮೆಟ್ರೊ ಇವೆಲ್ಲವೂ ಬೆಂಗಳೂರಿನ ಆಕರ್ಷಣೆ. ಇದರೊಂದಿಗೆ ಸಮೀಪದ ನಂದಿಬೆಟ್ಟ, ಮುತ್ಯಾಲಮುಡವು, ಹೊಗೆನಕಲ್ ಫಾಲ್ಸ್ ಇವೆಲ್ಲವೂ ಬೆಂಗಳೂರಿನಿಂದ ಸಮೀಪವಿರುವ ಪ್ರವಾಸಿ ತಾಣಗಳು.
(2 / 9)
ಕೊಡಗು: ಬೇಸಿಗೆ ಹಾಗೂ ಚಳಿಗಾಲದ ಪ್ರವಾಸಕ್ಕೆ ಕೊಡಗು ಹೇಳಿ ಮಾಡಿಸಿದ ಜಾಗ. ಕೂರ್ಗ್ ಅಂತಲೂ ಕರೆಯುವ ಈ ಜಾಗವನ್ನು ʼಭಾರತದ ಸ್ಕಾಟ್ಲೆಂಡ್ʼ ಎಂದೂ ಕರೆಯಲಾಗುತ್ತದೆ. ಹಚ್ಚ ಹಸಿರಿನ ಬೆಟ್ಟ, ಗುಡ್ಡಗಳು, ಘಮ ಹರಡುವ ಕಾಫಿ ಎಸ್ಟೇಟ್‌ಗಳು, ಹಿಮಚ್ಛಾದಿತ ಗಿರಿಗಳು ಹಾಗೂ ಅದ್ಭುತ ಜಲಪಾತಗಳಿಂದ ತುಂಬಿದ ಕೊಡಗು ನಿಜಕ್ಕೂ ಸುಂದರ. ಇಲ್ಲಿನ ದುಬಾರಿ ಆನೆ ಕ್ಯಾಂಪ್, ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ರಾಜಾಸೀಟ್, ಅಬ್ಬೆ ಫಾಲ್ಸ್ ಈ ಎಲ್ಲಾ ತಾಣಗಳು ನಿಮ್ಮನ್ನು ಸೆಳೆಯುತ್ತವೆ.
(3 / 9)
ಹಂಪಿ: ಐತಿಹಾಸಿಕ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿರುವ ಹಂಪಿ ಕರ್ನಾಟಕದ ಹೆಮ್ಮೆಯೂ ಹೌದು. ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುವ ಹಂಪಿ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣ. ಸುಮಾರು 500 ವರ್ಷಕ್ಕೂ ಹಳೆಯ ವಾಸ್ತುಶಿಲ್ಪ ರಚನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮಂಕಿ ಟೆಂಪಲ್, ಆರ್ಕಿಯಾಲಜಿ ಮ್ಯೂಸಿಯಂ, ವಿಜಯ ವಿಠಲ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಹಂಪಿಗೆ ಹೋದವರು ಅಂಜನಾದ್ರಿ ಬೆಟ್ಟವನ್ನೂ ನೋಡಿ ಬರಬಹುದು.
(4 / 9)
ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು: ಹಂಪಿಯಂತೆಯೇ ದೇವಾಲಯಗಳು, ವಾಸ್ತುಶಿಲ್ಪ, ಅದ್ಭುತ ಬಂಡೆಕಲ್ಲುಗಳ ಸೌಂದರ್ಯದಿಂದ ಕೂಡಿರುವ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು. ಇದು ಕೂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿದೆ. ಕೆಂಪು ಕಲ್ಲಿನ ವಾಸ್ತುಶಿಲ್ಪ ಇಲ್ಲಿನ ವಿಶೇಷ. ಇಲ್ಲಿ ಸುಮಾರು 100ಕ್ಕೂ ಹೆಚ್ಚು ದೇವಾಲಯಗಳಿವೆ. ಬಾದಾಮಿ ಕೋಟೆ, ಭೂತನಾಥ ದೇವಾಲಯ, ಐಹೊಳೆಯ ದುರ್ಗಾ ದೇವಾಲಯ ಇವನ್ನು ನೋಡದೇ ಹಿಂದಿರುಗುವಂತಿಲ್ಲ.
(5 / 9)
ಮೈಸೂರು: ಮೈಸೂರು ದಸರಾ ಜಗತ್ಪ್ರಸಿದ್ಧ. ಮೈಸೂರು ಕೂಡ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ. ಮೈಸೂರು ಅರಮನೆ, ಕೆಆರ್‌ಎಸ್ ಡ್ಯಾಂ ಎಲ್ಲವೂ ಇಲ್ಲಿನ ಆಕರ್ಷಣೆ. ಇದರೊಂದಿಗೆ ಇಲ್ಲಿಗೆ ಸಮೀಪದ ಕಬಿನಿ ಅತ್ಯಂತ ಸುಂದರ ಹಾಗೂ ಶಾಂತಿಯು ಪ್ರವಾಸಿ ತಾಣಗಳಲ್ಲಿ ಒಂದು. ಕಬಿನಿ ಜಲಾಶಯದಲ್ಲಿ ಬೋಟಿಂಗ್ ಮಾಡುವುದನ್ನು ಮಿಸ್ ಮಾಡಿಕೊಳ್ಳಬಾರದು. ಇಲ್ಲಿನ ಕಾಫಿ ತೋಟಗಳು, ಜಲಪಾತಗಳು, ನಾಗರಹೊಳೆ ಅಭಯಾರಣ್ಯವನ್ನು ಮಿಸ್ ಮಾಡದೇ ನೋಡಬಹುದು.
(6 / 9)
ಜೋಗ ಜಲಪಾತ: ವಿಶ್ವಪ್ರಸಿದ್ಧ ಜೋಗ ಜಲಪಾತವು ದೇಶದ ಎರಡನೇ ಅತಿ ದೊಡ್ಡ ಜಲಪಾತವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವು ವರ್ಷವಿಡೀ ಪ್ರವಾಸಿಗರನ್ನು ಸೆಳೆಯುತ್ತದೆ. ಲಿಂಗನಮಕ್ಕಿ ಅಣೆಕಟ್ಟು, ತುಂಗಾ ಅಣೆಕಟ್ಟು, ತಾವರೆಕೊಪ್ಪ, ಸಕ್ರೆಬೈಲು ಪಕ್ಷಿಧಾಮ, ಆಗುಂಬೆ, ಕುಂದಾದ್ರಿ ಮುಂತಾದ ಸ್ಥಳಗಳನ್ನು ಇಲ್ಲಿ ನೋಡಬಹುದಾಗಿದೆ.
(7 / 9)
ಮಂಗಳೂರು: ಕಡಲತಡಿಯ ನಗರ ಮಂಗಳೂರು. ಕರಾವಳಿ ಭಾಗದಲ್ಲಿ ಸಾಕಷ್ಟು ಸಮುದ್ರ ತೀರಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕಾಸರಗೋಡಿನಿಂದ ಕಾರವಾರದವರೆಗೆ ಹಲವು ಸಮುದ್ರತೀರಗಳಿದ್ದು ಬೇಕಲ್‌ಪೋರ್ಟ್, ಪಣಂಬೂರು, ಮಲ್ಪೆ, ಮರವಂತೆ, ಮುಡೇಶ್ವರ ಮುಂತಾದ ಖ್ಯಾತ ಪ್ರವಾಸಿ ತಾಣಗಳು ಇಲ್ಲಿವೆ. ಇಲ್ಲಿ ಸರ್ಫಿಂಗ್ ಫೇಮಸ್ಸ್. ಮೀನು ಪ್ರಿಯರಿಗಂತೂ ಉಡುಪಿ, ಮಂಗಳೂರು ಹೇಳಿ ಮಾಡಿಸಿದ ಜಾಗ. ಬಂದರು, ವಿಮಾನನಿಲ್ದಾಣ ಕೂಡ ಇಲ್ಲಿನ ವಿಶೇಷ.
(8 / 9)
ಗೋಕರ್ಣ: ಇಲ್ಲಿನ ಸಮುದ್ರತೀರಗಳು ಭಿನ್ನವಾಗಿದ್ದು, ವಿದೇಶಿ ಪ್ರವಾಸಿಗರನ್ನು ಇಲ್ಲಿ ಹೆಚ್ಚು ಕಾಣಬಹುದಾಗಿದೆ. ಶಾಂತವಾದ ಕಡಲ ತೀರಗಳು ಜನರನ್ನು ಆಕರ್ಷಿಸದೇ ಇರುವುದಿಲ್ಲ. ಓಂ ಬೀಚ್ ಮತ್ತು ಮಹಾಬಲೇಶ್ವರ ದೇವಾಲಯವು ಇಲ್ಲಿನ ವಿಶೇಷ. ಓಂ ಬೀಚ್‌ನಲ್ಲಿ ಸೂರ್ಯಾಸ್ತ, ಬೋಟಿಂಗ್, ಸ್ನಾರ್ಕ್ಲಿಂಗ್ ಮತ್ತು ಪ್ಯಾರಾಸೈಲಿಂಗ್‌ನಂತಹ ಜಲ ಕ್ರೀಡೆಗಳು ನಿಮಗೆ ಅನನ್ಯ ಅನುಭವವನ್ನು ನೀಡುತ್ತವೆ.
ಇತರ ಗ್ಯಾಲರಿಗಳು