Tala Cauvery Theerthodbhava: ತಲಕಾವೇರಿ ತೀರ್ಥೋದ್ಭವದ ಮಧ್ಯರಾತ್ರಿಯಲ್ಲೂ ಭಕ್ತರು, ಚಿತ್ರ ತಾರೆಯರು, ಗಣ್ಯರ ದಂಡು
- ಕೊಡಗಿನವರ( Kodagu) ಆರಾಧ್ಯದೈವ ಕಾವೇರಿ. ಕೊಡಗಿನವಲ್ಲದೇ ಹೊರಗೆ ಇರುವವರೂ ತಲಕಾವೇರಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ತೀರ್ಥೋದ್ಭವದ ಕ್ಷಣವಂತೂ ಅವರಿಗೆ ಪುಣ್ಯ ಘಳಿಗೆ. ಈ ಬಾರಿ ಮಧ್ಯರಾತ್ರಿ ಬಂದರೂ ಉತ್ಸಾಹದಲ್ಲಿ ಏನು ಕಡಿಮೆ ಇರಲಿಲ್ಲ. ಅಸಂಖ್ಯಾತ ಭಕ್ತರು, ಚಿತ್ರ ತಾರೆಯರು, ಜನಪ್ರತಿನಿಧಿಗಳು, ಗಣ್ಯರು ತಲಕಾವೇರಿಗೆ ಆಗಮಿಸಿದ್ದರು. ಈ ಕ್ಷಣಗಳು ಹೀಗಿದ್ದವು.

(1 / 6)
ಕೊಡಗಿನ ಪ್ರಮುಖ ಉತ್ಸವಗಳಲ್ಲಿ ಒಂದಾದ ಕಾವೇರಿ ತೀರ್ಥೋದ್ಭವದ ಕ್ಷಣ. ಈ ಬಾರಿ ಇದರ ಉಸ್ತುವಾರಿ ಹೊತ್ತ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕೊಡಗಿನ ಗೃಹಿಣಿಯರು ಭಾಗಮಂಡಲದ ಭಂಗಡೇಶ್ವರ ದೇಗುಲದ ಮುಂದೆ ಪೂಜೆ ಸಲ್ಲಿಸಿದ ಸಂದರ್ಭ.
(2 / 6)
ಕೊಡಗಿನ ತಲಕಾವೇರಿಯ ತೀರ್ಥೋದ್ಭವ ಆರಂಭಕ್ಕೂ ಮುನ್ನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಪ್ರತಾಪಸಿಂಹ, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ ಅವರು ಪೂಜೆ ಸಲ್ಲಿಸಿದರು.
(3 / 6)
ಕೊಡಗಿನವರೇ ಆದ ನಟ ಭುವನ್ ಪೊನ್ನಣ್ಣ,. ನಟಿ ಹರ್ಷಿಕಾ ಪೂಣಚ್ಛ ದಂಪತಿ ಹೊಸದಾಗಿ ಮದುವೆಯಾಗಿರುವ ಖುಷಿಯಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸಿದ ಕ್ಷಣ,.
(4 / 6)
ಕಾವೇರಿ ತೀರ್ಥೋದ್ಭವದ ಕ್ಷಣಕ್ಕಾಗಿ ಕಾಯುತ್ತಿರುವ ಸಮಯ. ಗಣ್ಯರು, ಸ್ಥಳೀಯರು ಸೇರಿದಂತೆ ಸಹಸ್ರಾರು ಭಕ್ತರು ಮಧ್ಯರಾತ್ರಿ ಅಣಿಯಾಗಿರುವುದು.
(5 / 6)
ತಲಕಾವೇರಿಯಲ್ಲಿ ತೀರ್ಥೋದ್ಭವ ಇನ್ನೇನು ಆಗಬೇಕು ಎನ್ನುವ ಹೊತ್ತಿಗೆ ತೀರ್ಥ ಸ್ವೀಕರಿಸಲು ಕಾವೇರಿ ಮಾತೆಯತ್ತ ನುಗ್ಗಿ ಬರುತ್ತಿರುವ ಭಕ್ತರ ದಂಡು. ಇದು ನಿಜಕ್ಕೂ ಭಕ್ತಿಯ ಕ್ಷಣ,
ಇತರ ಗ್ಯಾಲರಿಗಳು