Skin Care: ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋ ಮುನ್ನ ಯೋಚಿಸಿ; ತ್ವಚೆಯ ಕಾಂತಿ ಹೆಚ್ಚಿಸಲು ಈ ಫ್ರುಟ್ ಪೀಲ್ ಬಳಸಿ
- Skin care with Fruit Peels: ನವರಾತ್ರಿ ಸಮೀಪಿಸುತ್ತಿದೆ. ನಾರಿಮಣಿಯರೆಲ್ಲ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಚರ್ಮವು ಕಾಂತಿ ಕಳೆದುಕೊಳ್ಳುವ ಆತಂಕ ನಿಮಗಿರಬಹುದು. ಅದರ ಚಿಂತೆ ಬಿಡಿ. ಮನೆಯಲ್ಲೇ ಇರುವ ಹಣ್ಣು ತರಕಾರಿಗಳಿಂದ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಮಾಡಬಹುದು. ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋಕೂ ಮುಂಚೆ ಒಂದು ಸಲ ಯೋಚಿಸಿ.
- Skin care with Fruit Peels: ನವರಾತ್ರಿ ಸಮೀಪಿಸುತ್ತಿದೆ. ನಾರಿಮಣಿಯರೆಲ್ಲ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಚರ್ಮವು ಕಾಂತಿ ಕಳೆದುಕೊಳ್ಳುವ ಆತಂಕ ನಿಮಗಿರಬಹುದು. ಅದರ ಚಿಂತೆ ಬಿಡಿ. ಮನೆಯಲ್ಲೇ ಇರುವ ಹಣ್ಣು ತರಕಾರಿಗಳಿಂದ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಮಾಡಬಹುದು. ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋಕೂ ಮುಂಚೆ ಒಂದು ಸಲ ಯೋಚಿಸಿ.
(1 / 6)
ಮುಂದಿನ ತಿಂಗಳು ನವರಾತ್ರಿ ಹಬ್ಬವಿದೆ. ಹಬ್ಬಕ್ಕೆ ಚೆನ್ನಾಗಿ ಕಾಣಬೇಕು ಎಂಬ ಆಸೆ ನಿಮಗೂ ಇರಬಹುದು. ತ್ವಚೆಯನ್ನು ಇನ್ನಷ್ಟು ಕಾಂತಿಯುತವಾಗಿ ಮಾಡಲು ಪಾರ್ಲರ್‌ಗೆ ಅಲೆಯುವಷ್ಟು ಸಮಯ ಹಾಗೂ ತಾಳ್ಮೆ ನಿಮ್ಮಲ್ಲಿ ಇಲ್ಲದೆ ಇದ್ದರೆ, ಮನೆಯಲ್ಲೇ ತ್ವಚೆಯ ಕಾಳಜಿ ಮಾಡಬಹುದು. ವಿವಿಧ ಹಣ್ಣಿನ ಹಾಗೂ ತರಕಾರಿ ಸಿಪ್ಪೆಗಳನ್ನು ಬಳಸಿದರೆ ನಿಮ್ಮ ತ್ವಚೆ ಗಾಜಿನಂತೆ ಹೊಳೆಯುತ್ತದೆ.
(2 / 6)
ಪಪ್ಪಾಯಿ ಸಿಪ್ಪೆ: ನೀವು ಪಪ್ಪಾಯಿ ತಿಂದು ಅದರ ಸಿಪ್ಪೆಯನ್ನು ಖಚಿತವಾಗಿ ಎಸೆದಿರುತ್ತೀರಿ. ಇಂದಿನಿಂದ ಆ ರೀತಿ ಮಾಡಬೇಡಿ. ಪಪ್ಪಾಯಿ ಸಿಪ್ಪೆಯನ್ನು ಕನಿಷ್ಠ 5ರಿಂದ 10 ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಉಜ್ಜಿಕೊಳ್ಳಿ. ಅಂದರೆ ಸ್ಕ್ರಬ್‌ನಂತೆ ಉಜ್ಜಿ. ನಂತರ ಮುಖವನ್ನು ಚೆನ್ನಾಗಿ ತೊಳೆಯಿರಿ. ರೋಸ್ ವಾಟರ್ ಸಹ ಬಳಸಬಹುದು. ಈ ಸಿಪ್ಪೆ ಚರ್ಮದ ಮೇಲಿನ ಸತ್ತ ಜೀವಕೋಶಗಳ ಸಮಸ್ಯೆಯನ್ನು ಬಗೆಹರಿಸಿ ಚರ್ಮಕ್ಕೆ ಹೊಳಪನ್ನು ತರಲು ಸಹಾಯ ಮಾಡುತ್ತದೆ.(Freepik)
(3 / 6)
ಕಿವಿ ಹಣ್ಣಿನ ಸಿಪ್ಪೆ: ಕಿವಿ ಹಣ್ಣು ಹಲವು ಆರೋಗ್ಯ ಸಮಸ್ಯೆ ಇರುವವರು ತಿನ್ನುತ್ತಾರೆ. ಹಣ್ಣು ತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ಮುಂದಕ್ಕೆ ಈ ತಪ್ಪು ಮಾಡದಿರಿ. ಕಿವಿ ಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಸರನ್ನು ಬೆರೆಸಿ ಚರ್ಮದ ಮೇಲೆ 15 ನಿಮಿಷಗಳ ಕಾಲ ಇರಿಸಿ. ನಂತರ ತಣ್ಣೀರಿಂದ ತೊಳೆಯಿರಿ. ಇದೇ ಪ್ರಯೋಗವನ್ನು ಕೆಲವು ದಿನಗಳವರೆಗೆ ಮಾಡಿದರೆ, ನಿಮ್ಮ ತ್ವಚೆಯಲ್ಲಿ ಬದಲಾವಣೆ ಕಾಣಿಸುತ್ತದೆ.
(4 / 6)
ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದು ಚರ್ಮದ ಟೋನ್ ಹೆಚ್ಚಿಸುತ್ತದೆ. ಕಲೆಗಳನ್ನು ತೆಗೆದುಹಾಕಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಉತ್ತಮ. ಬಾಳೆಹಣ್ಣಿನ ಸಿಪ್ಪೆಯನ್ನು ದಿನಕ್ಕೆ 5 ರಿಂದ 10 ನಿಮಿಷಗಳ ಕಾಲ ಮುಖದ ಮೇಲೆ ಉಜ್ಜಬಹುದು. ಇದು ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ತ್ವಚೆಯನ್ನು ಕೋಮಲವಾಗಿಸುತ್ತದೆ.
(5 / 6)
ನಿಂಬೆ: ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರಲು ನಿಂಬೆ ಉತ್ತಮ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಅದರ ಸಿಪ್ಪೆಯನ್ನು ಚರ್ಮಕ್ಕೆ ಉಜ್ಜಿದಾಗ ರಸ ಹೊರಬರುತ್ತದೆ. ಇದನ್ನು ಮುಖಕ್ಕೆ ಹಚ್ಚಿಕೊಂಡು 10 ರಿಂದ 15 ನಿಮಿಷ ಕಾಲ ಹಾಗೆ ಬಿಡಿ. ಸಿಪ್ಪೆಯ ಮಿಕ್ಸಿಗೆ ಹಾಕಿ ಮೊಸರಿನೊಂದಿಗೆ ಮುಖಕ್ಕೆ ಉಜ್ಜಬಹುದು. ಇದು ಕೂಡಾ ತ್ವಚೆಯಲ್ಲಿ ಬದಲಾವಣೆ ತರುತ್ತದೆ.(Freepik)
ಇತರ ಗ್ಯಾಲರಿಗಳು