ಈ ಟ್ರೆಂಡೀ ಬ್ಲೌಸ್ ಡಿಸೈನ್‌ಗಳು ಯಾವುದೇ ಸೀರೆಗೂ ಸೊಗಸಾದ ಲುಕ್ ಕೊಡುತ್ತೆ; ಭಾರವಾದ ಸೀರೆಗೂ ಒಪ್ಪುವ ವಿನ್ಯಾಸಗಳಿವು
- Latest Blouse Design: ರೇಷ್ಮೆ ಸೀರೆಗೆ ಅದಕ್ಕೊಪ್ಪುವಂತೆ ರವಿಕೆ ಹೊಲಿಸಿದರೆ, ನೋಡಲು ಸುಂದರವಾಗಿ ಕಾಣುತ್ತದೆ. ಈ ಹೊಸ ಮತ್ತು ಆಕರ್ಷಕ ಡಿಸೈನ್‌ಗಳಲ್ಲಿ ನಿಮ್ಮ ಬ್ಲೌಸ್ ಹೊಲಿಸಿದರೆ, ನೀರಸ ರೇಷ್ಮೆ ಸೀರೆ ಕೂಡಾ ಸೊಗಸಾಗಿ ಕಾಣುತ್ತದೆ. ಈ ವಿನ್ಯಾಸಗಳನ್ನೊಮ್ಮೆ ನೋಡಿ.
- Latest Blouse Design: ರೇಷ್ಮೆ ಸೀರೆಗೆ ಅದಕ್ಕೊಪ್ಪುವಂತೆ ರವಿಕೆ ಹೊಲಿಸಿದರೆ, ನೋಡಲು ಸುಂದರವಾಗಿ ಕಾಣುತ್ತದೆ. ಈ ಹೊಸ ಮತ್ತು ಆಕರ್ಷಕ ಡಿಸೈನ್‌ಗಳಲ್ಲಿ ನಿಮ್ಮ ಬ್ಲೌಸ್ ಹೊಲಿಸಿದರೆ, ನೀರಸ ರೇಷ್ಮೆ ಸೀರೆ ಕೂಡಾ ಸೊಗಸಾಗಿ ಕಾಣುತ್ತದೆ. ಈ ವಿನ್ಯಾಸಗಳನ್ನೊಮ್ಮೆ ನೋಡಿ.
(1 / 7)
ಯುವತಿಯರು ರೇಷ್ಮೆ ಸೀರೆಗಳನ್ನು ಹೆಚ್ಚಾಗಿ ಧರಿಸುವುದಿಲ್ಲ. ಈದಕ್ಕೆ ಕಾರಣ ಸಿಲ್ಕ್ ಫ್ಯಾಬ್ರಿಕ್ ಬ್ಲೌಸ್ ನೀರಸವಾಗಿ ಕಾಣುತ್ತದೆ ಎಂಬುದೇ ಬಹುತೇಕರ ಉತ್ತರ. ಆದರೆ ಈ ಡಿಸೈನ್‌ಗಳಿರುವ ರೇಷ್ಮೆ ಬ್ಲೌಸ್ ಸ್ಟೈಲಿಶ್ ಆಗಿ ಕಾಣುವುದಲ್ಲದೆ ನಿಮಗೆ ಸುಂದರ ಲುಕ್ ಕೂಡ ನೀಡುತ್ತದೆ.(instagram)
(2 / 7)
ಬೋಟ್ ನೆಕ್ ಡಿಸೈನ್: ರೇಷ್ಮೆ ಸೇರೆ ರವಿಕೆಯ ಮುಂಭಾಗದಿಂದ ಬೋಟ್ ನೆಕ್ ಅಥವಾ ರೌಂಡ್ ನೆಕ್ ವಿನ್ಯಾಸ ಮಾಡಿ, ಹಿಂಭಾಗದಿಂದ ಬ್ಯಾಕ್ ಲೆಸ್ ರೌಂಡ್ ಶೇಪ್ ವಿನ್ಯಾಸವನ್ನು ನೀಡಿದರೆ ಸೊಗಸಾದ ಲುಕ್ ಕೊಡುತ್ತದೆ. ನೀವಯ ಭಾರವಾದ ಸೀರೆಯನ್ನು ಪರಿಪೂರ್ಣವಾಗಿ ಕಾಣುವಂತೆ ಮಾಡುತ್ತದೆ.(instagram)
(3 / 7)
ಸ್ಲೀವ್‌ಲೆಸ್ ಡಿಸೈನ್: ನೀವು ಕಾಂಜೀವರಂ ಅಥವಾ ಬನಾರಸ್ ರೇಷ್ಮೆ ಸೀರೆ ಉಡುವುದಾದರೆ ಅದಕ್ಕೆ ತೋಳಿಲ್ಲದ (ಸ್ಲೀವ್‌ಲೆಸ್) ರವೊಕೆ ಹೊಲಿಸಿ. ಇದಕ್ಕೆ ಎಂಬ್ರಾಯ್ಡಿಂಗ್ ಬೇಕಾಗಿಲ್ಲ. ಹೆಚ್ಚಿನ ನೀರೆಯರ ನೆಚ್ಚಿನ ವಿನ್ಯಾಸ ಇದಾಗಿದ್ದು, ಬ್ಲೌಸ್‌ಗೆ ಪರಿಪೂರ್ಣ ಲುಕ್ ಕೊಡುತ್ತದೆ.(instagram)
(4 / 7)
ಕಾಂಟ್ರಾಸ್ಟ್ ಡಿಸೈನ್ ಬ್ಲೌಸ್: ರೇಷ್ಮೆ ಸೀರೆಯಲ್ಲಿ ಜರಿ ಕೆಲಸವು ದಪ್ಪಗೆ ಅಥವಾ ಗಾಢವಾಗಿದ್ದರೆ, ಅದಕ್ಕೆ ಸಾದಾ ರವಿಕೆ ಧರಿಸಿ. ಹೆಚ್ಚುವರಿ ಡಿಸೈನ್ ಬೇಡ. ಲಾಂಗ್ ಹಾಫ್ ಸ್ಲೀವ್ ಮತ್ತು ರೌಂಡ್ ನೆಕ್ ಬ್ಲೌಸ್ ಇದಕ್ಕೆ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ನಿಮ್ಮದಾಗುತ್ತದೆ.(instagram)
(5 / 7)
ಜರಿ ಬ್ಲೌಸ್: ರೇಷ್ಮೆ ಸೀರೆಯೊಂದಿಗೆ ವಿಶೇಷವಾದ ಜರಿಯ ರವಿಕೆಯನ್ನು ಕೂಡಾ ನೀವು ಧರಿಸಬಹುದು. ವಿ ಶೇಪ್ ನೆಕ್ ಲೈನ್ ಲೋ ಕಟ್ ಮಾಡಿದರೆ ಆಕರ್ಷಕ ಲುಕ್ ಸಿಗುತ್ತದೆ.(instagram)
(6 / 7)
ತೋಳುಗಳ ಪ್ರಯೋಗ: ನೀವು ಫ್ಯಾಶನ್ ಪ್ರಿಯರಾಗಿದ್ದರೆ, ಪ್ರಯೋಗ ಮಾಡುವುದು ಇಷ್ಟವಾದರೆ, ಬಿಷಪ್ ಸ್ಲೀವ್ ವಿನ್ಯಾಸದ ಬ್ಲೌಸ್ ಮಾಡಿಸಬಹುದು.(instagram)
ಇತರ ಗ್ಯಾಲರಿಗಳು