ಶಿವರಾಮ ಕಾರಂತರು ಶಿಕ್ಷಣ ಪಡೆದದ್ದು ಎಷ್ಟು, ಬರೆದದ್ದು ಎಷ್ಟಿರಬಹುದು; ಕಡಲತೀರದ ಭಾರ್ಗವನ ಅಪೂರ್ವ ಬದುಕಿನ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶಿವರಾಮ ಕಾರಂತರು ಶಿಕ್ಷಣ ಪಡೆದದ್ದು ಎಷ್ಟು, ಬರೆದದ್ದು ಎಷ್ಟಿರಬಹುದು; ಕಡಲತೀರದ ಭಾರ್ಗವನ ಅಪೂರ್ವ ಬದುಕಿನ ಕ್ಷಣಗಳು

ಶಿವರಾಮ ಕಾರಂತರು ಶಿಕ್ಷಣ ಪಡೆದದ್ದು ಎಷ್ಟು, ಬರೆದದ್ದು ಎಷ್ಟಿರಬಹುದು; ಕಡಲತೀರದ ಭಾರ್ಗವನ ಅಪೂರ್ವ ಬದುಕಿನ ಕ್ಷಣಗಳು

  • ಶಿಕ್ಷಣ ಕಡಿಮೆ ಇದ್ದರೂ ಲೋಕ ಜ್ಞಾನದ ಮೂಲಕವೇ ಅದ್ಭುತ ಪ್ರತಿಭೆಯಾಗಿ, ಆತ್ಮವಿಶ್ವಾಸದ ಖಣಿಯಾಗಿ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೈ ಎನ್ನಿಸಿಕೊಂಡ ಕೋಟ ಶಿವರಾಮಕಾರಂತರು ಕನ್ನಡಗಿರು ಎನ್ನುವುದು ಹೆಮ್ಮೆಯ ಸಂಗತಿ. ಅವರ ಜನುಮ ದಿನದ ಸಂದರ್ಭದಲ್ಲಿ ಕಾರಂತರ ಬದುಕಿನ ಇಣುಕು ನೋಟ ಇಲ್ಲಿದೆ. 

ತಮ್ಮ ಅಪರಿಮಿತ ಜ್ಞಾನ, ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,  ಶೇಷ ಕಾರಂತ-ಲಕ್ಷ್ಮಮ್ಮ ದಂಪತಿ ಪುತ್ರರಾಗಿ 1902ರ ಅಕ್ಟೋಬರ್‌ 10ರಂದು ಈಗಿನ ಉಡುಪಿಯ ಕೋಟಾದಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.
icon

(1 / 7)

ಕಾಲೇಜು ಮೆಟ್ಟಲು ಹತ್ತುವ ಮುನ್ನವೇ ಅವರು ತಮ್ಮನ್ನು ಹೋರಾಟಗಳಲ್ಲಿ ತೊಡಗಿಸಿಕೊಂಡರು. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ಎಂದೂ ದುಡಿಯದೇ ಸ್ವಾಭಿಮಾನಿಯಂತೆ ಬದುಕಿದರು.. ಒಂಟಿಸಲಗವೇ ಆಗಿದ್ದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳಲ್ಲೂ ಸೈ ಎನ್ನಿಸಿಕೊಂಡರು. ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದು  ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿಗೆ ಅನ್ವರ್ಥದಂತೆಯೇ ಬದುಕಿದರು,
icon

(2 / 7)

ಕಾರಂತರು ಹತ್ತಕ್ಕೂ ಹೆಚ್ಚು ಸಾಹಿತ್ಯ ಕ್ಷೇತ್ರದಲ್ಲಿ  200ಕ್ಕೂ ಅಧಿಕ ಕೃತಿ ರಚಿಸಿದ್ಧಾರೆ ಎನ್ನುವುದೇ ಅಚ್ಚರಿ ಸಂಗತಿ. ಓದಿದ್ದು ಕಡಿಮೆಯಾದರೂ ಬರೆದ ಪ್ರಮಾಣ ಅಗಾಧ. ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳವೇ.  44 ಕಾದಂಬರಿ, 14 ನಾಟಕ, 3 ಕಥಾಸಂಕಲನ, 6 ಪ್ರಬಂಧಗಳು, 9 ಕಲಾ ಗ್ರಂಥಗಳು, 5 ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-25, ಇತ್ಯಾದಿ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
icon

(3 / 7)

ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ  ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳು. ಹಲವಾರು ನಾಟಕಗಳನ್ನೂ ಅವರು ನೀಡಿದ್ದಾರೆ. 
icon

(4 / 7)

ಕಾರಂತರು ಎಂದರೆ ಹೊಸತನ,ಪ್ರಯೋಗ ಶೀಲತೆ, ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶನ ಮಾಡಿದರು. ಇದಾದ ಬಳಿಕ ಭೂತರಾಜ್ಯ (1931) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು.ಕುಡಿಯರ ಕೂಸು,ಚಿಗುರಿದ ಕನಸು,ಚೋಮನ ದುಡಿ, ಬೆಟ್ಟದ ಜೀವ, ಮೂಕಜ್ಜಿನ ಕನಸು ಕಾದಂಬರಿಗಳು ಚಿತ್ರಗಳಾಗಿವೆ.
icon

(5 / 7)

1958ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ 1962ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, 1968ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. 1951ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ 
icon

(6 / 7)

ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲ ತೊಡಗಿಸಿಕೊಂಡ ಕಾರಂತರು, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ಅವರ ಹಿರಿಮೆ.ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು 9-12.1997ರಲ್ಲಿ ಮಂಗಳೂರಿನಲ್ಲಿ ನಿಧನರಾದರು. 
icon

(7 / 7)

ಇತರ ಗ್ಯಾಲರಿಗಳು