Prem Nenapirali: ವೈವಾಹಿಕ ಜೀವನಕ್ಕೆ 22ರ ಸಂಭ್ರಮ..ಪತ್ನಿ ಜೊತೆ ಲವ್ಲಿ ಸ್ಟಾರ್ ಫೋಟೋಶೂಟ್​​
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Prem Nenapirali: ವೈವಾಹಿಕ ಜೀವನಕ್ಕೆ 22ರ ಸಂಭ್ರಮ..ಪತ್ನಿ ಜೊತೆ ಲವ್ಲಿ ಸ್ಟಾರ್ ಫೋಟೋಶೂಟ್​​

Prem Nenapirali: ವೈವಾಹಿಕ ಜೀವನಕ್ಕೆ 22ರ ಸಂಭ್ರಮ..ಪತ್ನಿ ಜೊತೆ ಲವ್ಲಿ ಸ್ಟಾರ್ ಫೋಟೋಶೂಟ್​​

  • ಪ್ರೇಮ್, ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಲವ್ಲಿ ಸ್ಟಾರ್ ಎಂದೇ ಕರೆಯುತ್ತಾರೆ. ಮೊದಲ ಸಿನಿಮಾದಿಂದ ಇಲ್ಲಿವರೆಗೂ ಪ್ರೇಮ್​​​​​​​​​​​​ ಸ್ವಲ್ಪವೂ ಬದಲಾಗಿಲ್ಲ. ಈ ಹ್ಯಾಂಡ್​​ಸಮ್ ನಟನಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು ಎನ್ನಬಹುದು.

ಪ್ರೇಮ್ ಇತ್ತೀಚೆಗೆ 22ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ನೆನಪಿಗಾಗಿ ಅವರು ಪತ್ನಿ ಜ್ಯೋತಿಯೊಂದಿಗೆ ವಿಶೇಷ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
icon

(1 / 7)

2004 ರಲ್ಲಿ ‘ಪ್ರಾಣ’ ಚಿತ್ರದ ಮೂಲಕ ಪ್ರೇಮ್ ಚಿತ್ರರಂಗಕ್ಕೆ ಬಂದರು. ಮೊದಲ ಚಿತ್ರದಲ್ಲಿ ಅವರಿಗೆ ಹೇಳಿಕೊಳ್ಳುವಂತ ಯಶಸ್ಸು ಸಿಗಲಿಲ್ಲ. ಆದರೆ ನಂತರ 2005 ರಲ್ಲಿ ಅವರು ಅಭಿನಯಿಸಿದ 'ನೆನಪಿರಲಿ' ಚಿತ್ರ ಪ್ರೇಮ್​​​ಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು.
icon

(2 / 7)

ಇದಾದ ನಂತರ ಅವರು ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು, ಸವಿ ಸವಿ ನೆನಪು, ಫೇರ್ ಅ್ಯಂಡ್ ಲವ್ಲಿ, ಮಳೆ, ಚೌಕ, ದಳಪತಿ, ಲೈಫ್ ಜೊತೆ ಒಂದ್ ಸೆಲ್ಫಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು.
icon

(3 / 7)

ನಗೆ ಬಾಲ್ಯದಿಂದಲೂ ಸಿನಿಮಾ ಬಗ್ಗೆ ಒಲವು. ನಾನು ಸಂಪಾದನೆ ಮಾಡಿದ ಅರ್ಧ ದುಡ್ಡನ್ನು ಸಿನಿಮಾ ನೋಡಲು, ಸಿನಿಮಾ ಸಂಬಂಧಿತ ಮ್ಯಾಗಜಿನ್, ನ್ಯೂಸ್ ಪೇಪರ್ ಖರೀದಿಸಲು ಖರ್ಚು ಮಾಡಿದ್ದೇನೆ ಎಂದು ಪ್ರೇಮ್ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನಟನಾಗಬೇಕೆಂಬ ಕನಸನ್ನು ಪ್ರೇಮ್ ನನಸು ಮಾಡಿಕೊಂಡಿದ್ದಾರೆ.
icon

(4 / 7)

ಸಿನಿಮಾಗೂ ಮುನ್ನ ಪ್ರೇಮ್ ಟಿ.ಎನ್. ಸೀತಾರಾಮ್ ಅವರ ಮನ್ವಂತರ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ನಂತರ ಅರ್ಧ ಸತ್ಯ ಧಾರಾವಾಹಿಯ ಕೆಲವು ಎಪಿಸೋಡ್​​​​ಗಳಲ್ಲಿ ಕಾಣಿಸಿಕೊಂಡರು. ಪ್ರೇಮ್ ಅಭಿನಯದ 25ನೇ ಸಿನಿಮಾ ಪ್ರೇಮಂ ಪೂಜ್ಯಂ ಕಳೆದ ವರ್ಷ ತೆರೆ ಕಂಡಿದೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಬಹಳ ಚೂಸಿಯಾಗಿರುವ ಪ್ರೇಮ್ ಇದುವರೆಗೂ ಹೊಸ ಸಿನಿಮಾ ಘೋಷಿಸಿಲ್ಲ.
icon

(5 / 7)

ತಾವು ಪ್ರೀತಿಸುತ್ತಿದ್ದ ಜ್ಯೋತಿಯನ್ನು ಪ್ರೇಮ್ 1 ಆಗಸ್ಟ್ 2000 ರಂದು ಮದುವೆಯಾದರು. ಇವರ ಪ್ರೀತಿಗೆ ಮನೆಯವರ ವಿರೋಧ ಇದ್ದಿದ್ದರಿಂದ ಇಬ್ಬರೂ ಮನೆ ಬಿಟ್ಟು ಸ್ನೇಹಿತರ ಸಹಾಯ ಪಡೆದು ಮದುವೆಯಾದರು. ಈಗ ಇವರ ದಾಂಪತ್ಯಕ್ಕೆ 22 ವರ್ಷಗಳು ತುಂಬಿವೆ. ಮದುವೆಯಾದಾಗಿನಿಂದ ಇಲ್ಲಿವರೆಗೂ ನಮ್ಮ ನಡುವೆ ಅದೇ ಪ್ರೀತಿ ಇದೆ ಎನ್ನುತ್ತಾರೆ ಪ್ರೇಮ್.
icon

(6 / 7)

ಪ್ರೇಮ್ ಹಾಗೂ ಜ್ಯೋತಿ ದಂಪತಿಗೆ ಅಮೃತಾ ಹಾಗೂ ಏಕಾಂತ್ ಎಂಬ ಮಕ್ಕಳಿದ್ದಾರೆ. ಅಮೃತಾ ಕಾಲೇಜು ಓದುತ್ತಿದ್ದರೆ, ಏಕಾಂತ್ ವಿದ್ಯಾಭ್ಯಾಸದ ಜೊತೆಗೆ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಮಾಮು ಟೀ ಅಂಗಡಿ, ರಾಮರಾಜ್ಯ-ಗಾಂಧಿ ತಾತನ ಕನಸು, ಸಾಹೇಬ, ಗುರುಶಿಷ್ಯರು ಚಿತ್ರದಲ್ಲಿ ಏಕಾಂತ್ ನಟಿಸಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು