ಧೋನಿ ಜೊತೆ ದೀಪಾವಳಿ ಆಚರಿಸಿದ ರಿಷಭ್ ಪಂತ್; ಇಬ್ಬರನ್ನು ಒಟ್ಟಿಗೆ ನೋಡುವುದೇ ಸೊಗಸು ಎಂದ ಫ್ಯಾನ್ಸ್, PHOTOS
- MS Dhoni Diwali Celebration: ರಾಂಚಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಿದ ಧೋನಿ ಮನೆಗೆ ಅತಿಥಿಯಾಗಿ ರಿಷಭ್ ಪಂತ್ ಬರುವ ಮೂಲಕ ಹಬ್ಬದ ಕಳೆಯನ್ನು ಹೆಚ್ಚಿಸಿದರು.
- MS Dhoni Diwali Celebration: ರಾಂಚಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಿದ ಧೋನಿ ಮನೆಗೆ ಅತಿಥಿಯಾಗಿ ರಿಷಭ್ ಪಂತ್ ಬರುವ ಮೂಲಕ ಹಬ್ಬದ ಕಳೆಯನ್ನು ಹೆಚ್ಚಿಸಿದರು.
(1 / 9)
ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸ್ನೇಹಿತರು, ಆತ್ಮೀಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರೂ ಮಿಂಚಿದ್ದಾರೆ.
(2 / 9)
ರಾಂಚಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಿದ ಧೋನಿ ಮನೆಗೆ ಅತಿಥಿಯಾಗಿ ರಿಷಭ್ ಪಂತ್ ಬರುವ ಮೂಲಕ ಹಬ್ಬದ ಕಳೆಯನ್ನು ಹೆಚ್ಚಿಸಿದರು. ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್, ಮುಂದಿನ ಐಪಿಎಲ್ನಲ್ಲಿ ಮರಳಿದ್ದಾರೆ.
(3 / 9)
ಹಬ್ಬದ ಸಂಭ್ರಮದಲ್ಲಿ ಧೋನಿ ಮತ್ತು ಪತ್ನಿ ಸಾಕ್ಷಿ ಗೆಳೆಯರು, ಆತ್ಮಿಯರು ಪಾಲ್ಗೊಂಡಿದ್ದರು ಎಂಬುದು ವಿಶೇಷ. ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಾಕ್ಷಿಸಿಂಗ್ ಹಂಚಿಕೊಂಡಿದ್ದಾರೆ.
(4 / 9)
ರಾಂಚಿಯಲ್ಲಿ ಖಾಸಗಿ ಜೀವನ ನಡೆಸುತ್ತಿರುವ ಧೋನಿ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಪತ್ನಿ ಸಾಕ್ಷಿ ಸಿಂಗ್ ಹಬ್ಬದ ಆಚರಣೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(5 / 9)
ಮುಂದಿನ ವರ್ಷ ನಡೆಯುವ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ಪಾಲಿಗೆ ಕೊನೆಯ ಐಪಿಎಲ್ ಆದರೂ ಅಚ್ಚರಿ ಇಲ್ಲ. ಏಕೆಂದರೆ ಅವರಿಗೀಗ 42 ವರ್ಷ.
(6 / 9)
ಈ ವರ್ಷ ನಡೆದ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆ ಮೂಲಕ ಐದನೇ ಬಾರಿಗೆ ಸಿಎಸ್ಕೆ ತಂಡವನ್ನು ಚಾಂಪಿಯನ್ ಮಾಡಿ ದಾಖಲೆ ಬರೆದರು.
(7 / 9)
ಮುಂದಿನ ಐಪಿಎಲ್ನಲ್ಲಿ ಕಣಕ್ಕಿಳಿಯುವ ಕುರಿತು ಇತ್ತೀಚೆಗೆ ಅವರು ಸ್ಪಷ್ಟನೆ ನೀಡಿದ್ದರು. ಸಂದರ್ಶನವೊಂದರಲ್ಲಿ ನಿರೂಪಕರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮಾತ್ರ ನಿವೃತ್ತಿ ಘೋಷಿಸಿದ್ದೇನೆ ಎಂದು ಐಪಿಎಲ್ಗೆ ಮರಳುವ ಸುಳಿವು ನೀಡಿದರು.
(8 / 9)
ಧೋನಿ ಸದ್ಯ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮಿಳಿನಲ್ಲಿ ಲೆಟ್ಸ್ ಗೆಟ್ ಮ್ಯಾರಿಡ್ ಎಂಬ ಚಿತ್ರವನ್ನೂ ನಿರ್ಮಿಸಿದರು. ಆದರೆ, ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಯಿತು. ಹಾಕಿದ್ದ ಬಂಡವಾಳ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ವರದಿಗಳಾಗಿವೆ.
ಇತರ ಗ್ಯಾಲರಿಗಳು