ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ಸಿಕ್ಕಿತು ತಲಾ 10 ಲಕ್ಷ ರೂಪಾಯಿ ಬಹುಮಾನ
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ಸಿಕ್ಕಿತು ತಲಾ 10 ಲಕ್ಷ ರೂಪಾಯಿ ಬಹುಮಾನ

ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ಸಿಕ್ಕಿತು ತಲಾ 10 ಲಕ್ಷ ರೂಪಾಯಿ ಬಹುಮಾನ

Namma Bengaluru Challenge: ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರು ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಇದನ್ನು ಗುರುತಿಸಿ ಅನುಷ್ಠಾನ ಯೋಗ್ಯ ಪರಿಹಾರ ಒದಗಿಸಲು ನಮ್ಮ ಬೆಂಗಳೂರು ಚಾಲೆಂಜ್‌ ಸ್ಪರ್ಧೆ ಆಯೋಜನೆಯಾಗಿತ್ತು. ಇಂತಹ ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.

ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತು.
ನಮ್ಮ ಬೆಂಗಳೂರು ಚಾಲೆಂಜ್‌; ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತು.

Namma Bengaluru Challenge: ಅನ್‌ಬಾಕ್ಸಿಂಗ್ ಬೆಂಗಳೂರು ಮತ್ತು ನಿಖಿಲ್ ಕಾಮತ್ ಅವರ ಡಬ್ಲ್ಯುಟಿ ಫಂಡ್‌ನ ನಮ್ಮ ಬೆಂಗಳೂರು ಚಾಲೆಂಜ್ ಸ್ಪರ್ಧೆಯ ಐವರು ವಿಜೇತರ ವಿವರ ಪ್ರಕಟವಾಗಿದೆ. ಬೆಂಗಳೂರನ್ನು ಸುಸಜ್ಜಿತ ನಗರವನ್ನಾಗಿ ಪರಿವರ್ತಿಸುವುದಕ್ಕೆ ಪೂರಕವಾಗಿ ಸಮಸ್ಯೆಗಳಿಗೆ ಅನುಷ್ಠಾನ ಯೋಗ್ಯ ಪರಿಹಾರ ಐಡಿಯಾ ಕೊಡುವ ಐವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅನ್‌ಬಾಕ್ಸಿಂಗ್ ಬೆಂಗಳೂರು ಮತ್ತು ನಿಖಿಲ್ ಕಾಮತ್ ಅವರ ಡಬ್ಲ್ಯುಟಿ ಫಂಡ್‌ ಈ ನಮ್ಮ ಬೆಂಗಳೂರು ಚಾಲೆಂಜ್ ಸ್ಪರ್ಧೆಯನ್ನು ಆಯೋಜಿಸಿತ್ತು. ಇತ್ತೀಚೆಗೆ ನಡೆದ ಬಿಎಲ್‌ಆರ್ ಹಬ್ಬದಲ್ಲಿ ಈ ಸ್ಪರ್ಧೆಯನ್ನು ಘೋಷಿಸಲಾಗಿತ್ತು.

ನಮ್ಮ ಬೆಂಗಳೂರು ಚಾಲೆಂಜ್‌ ಹೀಗಿತ್ತು

ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಬಿಎಲ್‌ಆರ್ ಹಬ್ಬದ ಫ್ಯೂಚರ್ಸ್ ಕಾನ್ಫರೆನ್ಸ್‌ನಲ್ಲಿ ನಮ್ಮ ಬೆಂಗಳೂರು ಚಾಲೆಂಜ್ ಅನ್ನು ಘೋಷಿಸಲಾಗಿತ್ತು. ಉತ್ತಮ ಐಡಿಯಾ ಮತ್ತು ದೂರದೃಷ್ಟಿಯ ಆಲೋಚನೆಯಗಳೊಂದಿಗೆ ಬಂದ 5 ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಪ್ರಕಟಿಸಲಾಗಿತ್ತು. ಬೆಂಗಳೂರು ನಗರದ ಸವಾಲುಗಳನ್ನು ಗುರುತಿಸಿ, ಮಹಾ ನಗರದ ಅಭಿವೃದ್ಧಿಗೆ ಚಾಲನೆ ನೀಡುವ ಹೊಸ ಮತ್ತು ಸುಸ್ಥಿರ ಪರಿಹಾರೋಪಾಯಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಅಲ್ಲದೆ, ಅದನ್ನು ಕಾರ್ಯಗತಗೊಳಿಸುವುದಕ್ಕೆ ಯೋಗ್ಯವೆಂದು ಪರಿಗಣಿಸಲ್ಪಟ್ಟರೆ ಅನುದಾನ ನೀಡಲಾಗುವುದು ಎಂದು ಹೇಳಲಾಗಿತ್ತು.

ನವೆಂಬರ್ ತಿಂಗಳಲ್ಲಿ ಪ್ರಾರಂಭವಾದ ನಮ್ಮ ಬೆಂಗಳೂರು ಚಾಲೆಂಜ್‌ಗೆ ಸುಮಾರು 600 ಸ್ಪರ್ಧಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಬಳಿಕ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್ ಮತ್ತು ಡಬ್ಲ್ಯುಟಿ ಫಂಡ್‌ ಕೊನೆಯದಾಗಿ 16 ಬೆಸ್ಟ್ ಐಡಿಯಾಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದವು. ಬಳಿಕ 8 ತಂಡವನ್ನು ಆಯ್ಕೆ ಮಾಡಿ ಕೊನೆಯದಾಗಿ 5 ನವೋದ್ಯಮ ತಂಡಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

ನಮ್ಮ ಬೆಂಗಳೂರು ಚಾಲೆಂಜ್‌; ವಿಜೇತ ಪರಿಹಾರೋಪಾಯಗಳು

1) ಜಲಮೂಲ ಪುನರುಜ್ಜೀವನ ಮತ್ತು ಶುದ್ಧ ನೀರು: ಬೆಂಗಳೂರು ಜಲಮೂಲಗಳು ಸಂಸ್ಕರಿಸದ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ಮತ್ತು ತೀವ್ರ ಮಾಲಿನ್ಯವನ್ನು ಎದುರಿಸುತ್ತಿವೆ. ಇದು ನೀರಿನ ಗುಣಮಟ್ಟವನ್ನು ಕಡಿಮೆ ಮಾಡಿದೆ. ಜಲಮೂಲ ಪುನರುಜ್ಜೀವನ ಯೋಜನೆಯು ಈ ಪ್ರಮುಖ ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ಕುಡಿಯುವ ನೀರಿನ ಗುಣಮಟ್ಟಕ್ಕೆ ಹತ್ತಿರ ತರಲು ಅದರ ಸಮರ್ಥನೀಯ, ಪ್ರಕೃತಿ ಆಧಾರಿತ ಪರಿಹಾರೋಪಾಯಗಳೊಂದಿಗೆ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

2) ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್ ತರಬೇತಿ: ಮಹಿಳಾ ಶಕ್ತಿ ಕಾರ್ಯಕ್ರಮ ಸುರಕ್ಷಿತ ಮತ್ತು ಬೆಂಗಳೂರಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಪುರುಷ ಪ್ರಾಬಲ್ಯ ಕ್ಷೇತ್ರವನ್ನು ಪ್ರವೇಶಿಸಲು ಮಹಿಳೆಯರಿಗೆ ಸಹಕಾರಿಯಾಗಲಿದೆ.

3) ಆಟೋ ಮೀಟರ್: ಪಾರದರ್ಶಕ ಮತ್ತು ಸರ್ಕಾರದಿಂದ ಅನುಮೋದಿತ ಮೀಟರ್ ದರದ ಆಟೋರಿಕ್ಷಾ ಸೇವೆಗಳನ್ನು ನೀಡುವುದು.

4) ಅನಾಹತ್ ಫೌಂಡೇಶನ್ - ನಗರ ಪ್ರದೇಶದ ಬಡವರಿಗಾಗಿ ಪ್ರಾಥಮಿಕ ಮತ್ತು ಆರೋಗ್ಯ ರಕ್ಷಣೆ ಸುಧಾರಿಸುವುದು. ಆರೋಗ್ಯ ಸೇವೆಯು ಎಲ್ಲಾ ನಾಗರಿಕರಿಗೆ ತಲುಪುವಂತೆ ಮಾಡುವುದು.

5) ಪರಿಸರ ಸಂವೇದಿಗಳಾಗಿ ಬದಲಾಗೋಣ: ಸುಸ್ಥಿರ ತ್ಯಾಜ್ಯ ನಿರ್ವಹಣಾ ಯೋಜನೆಯ ದೃಷ್ಟಿಯೊಂದಿಗೆ ಅವರು ಉತ್ಪಾದಿಸುವ ತ್ಯಾಜ್ಯಕ್ಕೆ ನಾಗರಿಕರನ್ನೇ ಹೊಣೆಗಾರರನ್ನಾಗಿ ಮಾಡುವ ಮೂಲಕ 1% ಕ್ಕಿಂತ ಕಡಿಮೆ ತ್ಯಾಜ್ಯವನ್ನು ವ್ಯವಸ್ಥಿತ ಗುಂಡಿಗಳಿಗೆ ಕಳುಹಿಸುವುದು. ನಾಗರಿಕರು ಮತ್ತು ಬಿಬಿಎಂಪಿ ನಡುವೆ ಒಂದು ಸಹಕಾರ ಬೆಳೆಸುವುದು.

ಈ ಐದು ಬೆಸ್ಟ್‌ ಐಡಿಯಾಗಳನ್ನ ನೀಡಿದ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಬೆಂಗಳೂರು ನನಗೆ ತುಂಬಾ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಬೆಂಗಳೂರಿಗೆ ಏನಾದರೂ ಕೊಡಬೇಕಾದ್ದು ನನ್ನ ಕರ್ತವ್ಯ. ಈ ಚಾಲೆಂಜ್ ಈ ನಗರದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಜನರನ್ನು ಒಟ್ಟುಗೂಡಿಸುತ್ತದೆ. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು. ಈ ಆಲೋಚನೆಗಳು ಹೇಗೆ ವಿಕಸನಗೊಳ್ಳುತ್ತವೆ ಮತ್ತು ಮುಂಬರುವ ವರ್ಷಗಳಲ್ಲಿ ಯಾವ ರೀತಿಯಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ ಎಂಬುದನ್ನು ನೋಡಲು ನಿಜವಾಗಿಯೂ ಉತ್ಸುಕನಾಗಿದ್ದೇನೆ’ ಎಂದು ಹೇಳಿದರು.

Whats_app_banner