Gagana Chukki Falls Festival: ಗಗನಚುಕ್ಕಿಯಲ್ಲಿ ಬೆಳಕಿನ ವೈಭವದ ನಡುವೆ ಜಲಪಾತೋತ್ಸವ ಜೋಶ್; ಹೀಗಿತ್ತು ತಾರೆಯರ ನೃತ್ಯ, ಸಡಗರದ ಕ್ಷಣಗಳು
- GaganaChukki Falls Festival ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಎರಡು ದಿನಗಳ ಉತ್ಸವದ ಮೊದಲ ದಿನವಾದ ಶನಿವಾರದ ಕ್ಷಣಗಳು ಹೀಗಿದ್ದವು.
- GaganaChukki Falls Festival ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಎರಡು ದಿನಗಳ ಉತ್ಸವದ ಮೊದಲ ದಿನವಾದ ಶನಿವಾರದ ಕ್ಷಣಗಳು ಹೀಗಿದ್ದವು.
(1 / 10)
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಶನಿವಾರ ಆರಂಭಗೊಂಡ ಗಗನಚುಕ್ಕಿ ಉತ್ಸವಕ್ಕೆ ಆಗಮಿಸಿದ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಇತರರನ್ನು ವಿಶಿಷ್ಟ ಕಹಳೆಗಳಿಂದ ಸ್ವಾಗತಿಸಿದ್ದು ಹೀಗೆ.
(3 / 10)
ಗಗನಚುಕ್ಕಿ ಜಲಪಾತೋತ್ಸವದಲ್ಲಿ ಅತ್ತ ಕಾವೇರಿ ಧುಮ್ಮಿಕ್ಕುತ್ತಿದ್ದರೆ ಇತ್ತ ಖ್ಯಾತ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಅವರ ಗಾಯನಕ್ಕೆ ಪ್ರವಾಸಿಗರು ತಲೆದೂಗಿದರು.
(4 / 10)
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವನ ಸಮುದ್ರದಲ್ಲಿ ಆರಂಭಗೊಂಡ ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಎ.ಆರ್.ಕೃಷ್ಣಮೂರ್ತಿ, ಮಧುಮಾದೇಗೌಡ, ದಿನೇಶ್ ಗೂಳಿಗೌಡ, ಪ್ರಕಾಶ್ ರಾಥೋಡ್ ಮತ್ತಿತರರು ಭಾಗಿಯಾದರು.
(5 / 10)
ಈ ಬಾರಿ ಉತ್ತಮ ಮಳೆಯಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಗಗನಚುಕ್ಕಿ ಜಲಪಾತದ ವೈಭವವೂ ಮರಳಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಉತ್ಸವದಲ್ಲಿ ಬೆಳೆಕಿನಲ್ಲಿ ಮಿಂದೆದ್ದ ಜಲಪಾತ.
(6 / 10)
ಗಗನಚುಕ್ಕಿ ಜಲಪಾತಕ್ಕೆ ವಿವಿಧ ಬಣ್ಣ, ಬಗೆಯ ಲೇಸರ್ ಶೋ ಅಳವಡಿಸಿದ್ದು ನೋಡುಗರ ಮನ ಸೆಳೆಯುತ್ತಿದೆ. ಭಾನುವಾರವೂ ಪ್ರದರ್ಶನ ಇರಲಿದೆ.
(8 / 10)
ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಗಗನಚುಕ್ಕಿ ಜಲಪಾತದಲ್ಲಿ ಶನಿವಾರ ಆರಂಭಗೊಂಡ ಜಲಪಾತೋತ್ಸವದಲ್ಲಿ ಬಣ್ಣಗಳ ಲೇಸರ್ ಶೋ ವೈಭವ.
(9 / 10)
ಗಗನಚುಕ್ಕಿ ಜಲಪಾತೋತ್ಸವದ ನಡುವೆ ಸಂಜೆ ನಂತರ ವಿವಿಧ ತಂಡಗಳ ಸಾಂಸ್ಕೃತಿಕ ಸೊಬಗಿನ ಕಾರ್ಯಕ್ರಮಗಳಲ್ಲಿ ಕಲಾವಿದರ ನೃತ್ಯ ವೈಭವ.
ಇತರ ಗ್ಯಾಲರಿಗಳು