ಮೈಸೂರು ಜಂಬೂಸವಾರಿ ಮೆರವಣಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ; ಫೋಟೊಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ಜಂಬೂಸವಾರಿ ಮೆರವಣಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ; ಫೋಟೊಸ್

ಮೈಸೂರು ಜಂಬೂಸವಾರಿ ಮೆರವಣಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ; ಫೋಟೊಸ್

  • ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಅಂತಿಮ ಹಂತದ ಸಿದ್ಧತಗಳನ್ನು ಮಾಡಲಾಗುತ್ತಿದೆ. ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರವನ್ನು ಮಾಡಲಾಗಿದೆ. ಅದರ ಫೋಟೊಸ್ ಇಲ್ಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಅಂಬಾರಿಯನ್ನು ಹೊರುವ ಅಭಿಮನ್ಯು ನೇತೃತ್ವದ ಗಜಪಡೆಗೆ ವಿವಿಧ ಬಣ್ಣಗಳಿಂದ ಅಲಂಕಾರವನ್ನು ಮಾಡಲಾಗುತ್ತಿದೆ.
icon

(1 / 8)

ಅರಮನೆ ಆವರಣದ ನೀರಿನ ತೊಟ್ಟಿ ಬಳಿ ಸ್ನಾನ ಮಾಡಿಸಿದ ಬಳಿಕ ಆನೆಗಳಿಗೆ ಸಿಂಗಾರವನ್ನು ಮಾಡಲಾಯಿತು.
icon

(2 / 8)

ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕಾರ್ಯ ನಡೆಯಿತು.
icon

(3 / 8)

ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕಾರ್ಯ ನಡೆಯಿತು.

ಹುಣಸೂರು ಮೂಲದ ಒಟ್ಟು 8 ಕಲಾವಿದರಿಂದ ದಸರಾ ಆನೆಗಳಿಗೆ ವಿಶೇಷ ಬಣ್ಣದ ಅಲಂಕಾರವನ್ನು ಮಾಡಲಾಗಿದೆ.
icon

(4 / 8)

ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿಯನ್ನು ಬಿಡಿಸಲಾಗಿದೆ.
icon

(5 / 8)

ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ ಹಾಗೂ ಹೂವು ಬಳ್ಳಿಗಳ ಅಲಂಕಾರವನ್ನು ಮಾಡಲಾಗಿದೆ.
icon

(6 / 8)

ಆನೆಯ ಕಣ್ಣಿನ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸಲಾಗಿದೆ. ಜಂಬೂಸವಾರಿಯ ಆನೆಗಳ ಅಲಂಕಾರದ ಕಾರ್ಯ ಮುಕ್ತಾಯಗೊಂಡಿದೆ.
icon

(7 / 8)

ಅಭಿಮನುಷ್ಯ ನೇತೃತ್ವದ ಗಜಪಡೆ ಜಂಬೂಸವಾರಿಗೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಇಂದು ಸಂಜೆ 4 ರಿಂದ 4.30 ರ ಶುಭ ಕುಂಭಲಗ್ನದಲ್ಲಿ ನಾಡ ಅಧಿವೇತೆ ಚಾಮುಂಡಿಯನ್ನು  ಅಂಬಾರಿಯಲ್ಲಿ ಇಟ್ಟು ಪುಷ್ಪಾರ್ಚನೆ ಬಳಿಕ ಜಂಬೂಸವಾರಿ ಮೆರವಣಿಗೆ ಸಾಗಲಿದೆ.
icon

(8 / 8)

ಇತರ ಗ್ಯಾಲರಿಗಳು