ಮೈಸೂರಿನ ದಸರಾ ವಸ್ತು ಪ್ರದರ್ಶನಕ್ಕೆ ಬಂದಿದೆ ಕಾರ್ಮಿಕ ಚಿತ್ರಮಂದಿರ, ಸರ್ಕಾರಿ ಶಾಲೆ: ಹೇಗಿದೆ ವಿಶೇಷ ಚಿತ್ರಣ, ನೋಡಿದ್ದೀರಾ
ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರವೂ ಒಂದು. ಈ ಬಾರಿ ದಸರಾ ವಸ್ತು ಪ್ರದರ್ಶನವನ್ನು ವಿಭಿನ್ನವಾಗಿಯೇ ರೂಪಿಸಲಾಗಿದೆ. ಅದರ ಚಿತ್ರ ನೋಟ ಇಲ್ಲಿದೆ.
(1 / 9)
ಕಾರ್ಮಿಕ ಇಲಾಖೆಯು ಈ ಬಾರಿ ಕಾರ್ಮಿಕ ಚಿತ್ರಮಂದಿರವನ್ನು ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ರೂಪಿಸಿದೆ. ಇಲ್ಲಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಬಂದ ಚಿತ್ರಗಳ ಮಾಹಿತಿ, ಚಿತ್ರಮಂದಿರದ ಮಾದರಿಯನ್ನು ರೂಪಿಸಿರುವುದು ಗಮನ ಸೆಳೆಯುತ್ತಿದೆ.
(2 / 9)
ದಸರಾ ವಸ್ತು ಪ್ರದರ್ಶನದ ಗ್ರಾಮೀಣಾಭಿವೃದ್ದಿ ಇಲಾಖೆಯ ಮಳಿಗೆಯಂತೂ ವಿಶೇಷವಾಗಿದೆ. ಇಲ್ಲಿ ಸರ್ಕಾರಿ ಶಾಲೆಯನ್ಣೇ ನಿರ್ಮಿಸಲಾಗಿದೆ.
(3 / 9)
ಹಳ್ಳಿಗಳಲ್ಲಿನ ವಿಶೇಷತೆಗಳನ್ನು ಬಿಂಬಿಸುವ ಪ್ರಯತ್ನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಳಿಗೆಯಲ್ಲಿ ಆಗಿದೆ. ಅಲ್ಲಿನ ಬಸ್ ನಿಲ್ದಾಣವೂ ವಿಶೇಷಗಳಲ್ಲಿ ಒಂದು.
(6 / 9)
ಕರ್ನಾಟಕದಲ್ಲಿ ಮಹಾತ್ಮಗಾಂಧಿ ಅವರು ನಡೆದಾಡಿದ ಮಾಹಿತಿಯೂ ಒಳಗೊಂಡಂತೆ ವಿಶೇಷ ಮಳಿಗೆಯನ್ನು ಗ್ರಾಮೀಣಾಭಿವೃದ್ದಿ ಇಲಾಖೆ ರೂಪಿಸಿದೆ.
(8 / 9)
ಮೈಸೂರು ದಸರಾ ವಸ್ತು ಪ್ರದರ್ಶನದ ನಗರಾಭಿವೃದ್ದಿ ಇಲಾಖೆಯ ಮಳಿಗೆಯು ಇಂದಿರಾ ಕ್ಯಾಂಟಿನ್ ನ ಮಹತ್ವದ ಬಗ್ಗೆ ಒತ್ತು ನೀಡಿದೆ.
ಇತರ ಗ್ಯಾಲರಿಗಳು