ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Karaga: ಮೈಸೂರಿನ ಕರಗಕ್ಕೆ ಶತಮಾನದ ಸಂಭ್ರಮ, 5 ದಿನದ ಉತ್ಸವದ ಸಡಗರ ಹೀಗಿತ್ತು

Mysore Karaga: ಮೈಸೂರಿನ ಕರಗಕ್ಕೆ ಶತಮಾನದ ಸಂಭ್ರಮ, 5 ದಿನದ ಉತ್ಸವದ ಸಡಗರ ಹೀಗಿತ್ತು

  • ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಕರಗವೂ(Mysuru Karaga) ಜನಪ್ರಿಯವೇ. ನೂರು ವರ್ಷದ ಇತಿಹಾಸ ಇರುವ ಕರಗ ಈ ಬಾರಿ ವಿಜೃಂಭಣೆಯಿಂದ ನಡೆಯಿತು. ಇದರ ಚಿತ್ರನೋಟ ಇಲ್ಲಿದೆ. 

ಮೈಸೂರಿನ ಇಟ್ಟಿಗೆ ಗೂಡು ಪ್ರದೇಶದಲ್ಲಿರುವ ಚಾಮುಂಡೇಶ್ವರಿ ಹಾಗೂ ಮಾರಿಯಮ್ಮನ ಕರಗಕ್ಕೆ ಈ ವರ್ಷ ನೂರು ತುಂಬಿತು.
icon

(1 / 10)

ಮೈಸೂರು ಮೃಗಾಲಯ ಸಮೀಪ ಇರುವ ಜಾಗದಲ್ಲಿ ನೂರು ವರ್ಷದ ಹಿಂದೆ ಸಣ್ಣ ಗುಡುಸಿಲಿನಲ್ಲಿ ಆರಂಭಗೊಂಡ ಕರಗ ಮಹೋತ್ಸವವು ಈಗ ವಿಶಾಲವಾಗಿ ಬೆಳೆದಿದೆ. 
icon

(2 / 10)

ಮೈಸೂರು ಕರಗವನ್ನು ಐದು ದಿನಗಳ ಕಾಲ ಈ ಬಾರಿ ನಡೆಸಲಾಯಿತು. ಪ್ರತಿ ದಿನವೂ ಮೆರವಣಿಗೆ., ಪೂಜೆಗಳು ಇಟ್ಟಿಗೆ ಗೂಡು ಭಾಗದಲ್ಲಿ ಸಹಸ್ರಾರು ಭಕ್ತರನ್ನು ಆಕರ್ಷಿದವು,
icon

(3 / 10)

ಮೈಸೂರು ಮಹಾರಾಜರಾಗಿದ್ದ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿಯೇ ಕರಗಕ್ಕೆ ಪ್ರೋತ್ಸಾಹ ದೊರೆತು ದೇಗುಲವೂ ನಿರ್ಮಾಣವಾಗಿತ್ತು. ಇದನ್ನು ಮಿನಿ ದಸರಾ ಎಂದೇ ಆಗಿನಿಂದಲೂ ಕರೆಯಲಾಗುತ್ತದೆ.
icon

(4 / 10)

ಐದು ದಿನಗಳ ಕಾಲವೂ ದೇವಿಯನ್ನು ವಿಭಿನ್ನ ಅಲಂಕರಿಸಿ ಮೆರವಣಿಗೆ ಮಾಡುವುದು ಮೈಸೂರು ಕರಗದ ವಿಶೇಷ.
icon

(5 / 10)

ಐದು ದಿನಗಳ ಕಾಲವೂ ದೇವಿಯನ್ನು ವಿಭಿನ್ನ ಅಲಂಕರಿಸಿ ಮೆರವಣಿಗೆ ಮಾಡುವುದು ಮೈಸೂರು ಕರಗದ ವಿಶೇಷ.

ದೇವಿಗೆ ಆಯಾ ಭಕ್ತರ ಆಶಯದಂತೆಯೇ ವಿಶೇಷ ಅಲಂಕಾರ ಮಾಡಿ ಅವರ ಮನೆಗಳಿಗೆ ಕೊಂಡೊಯ್ಯಲಾಗುತ್ತದೆ. 
icon

(6 / 10)

ದೇವಿಗೆ ಆಯಾ ಭಕ್ತರ ಆಶಯದಂತೆಯೇ ವಿಶೇಷ ಅಲಂಕಾರ ಮಾಡಿ ಅವರ ಮನೆಗಳಿಗೆ ಕೊಂಡೊಯ್ಯಲಾಗುತ್ತದೆ. 

ಅದರಲ್ಲೂ ಅವಿವಾಹಿತ ಕನ್ಯೆಯರಿದ್ದರೆ ಅವರ ಮನೆಗಳಿಗೆ ಕರಗದೊಂದಿಗೆ ದೇವಿ ತೆರಳಿ ಮಾಂಗಲ್ಯ ಪೂಜೆ ಮಾಡುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡಿದೆ. 
icon

(7 / 10)

ಇದರೊಟ್ಟಿಗೆ ಲೋಕ ಕಲ್ಯಾಣಾರ್ಥವಾಗಿ ಜನ ಬರ, ಸಾಂಕ್ರಾಮಿಕ ರೋಗಗಳ ಬಾದೆಯಿಂದ ಬಳದಂತೆಯೂ ಕರಗದ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ.
icon

(8 / 10)

ಹಲವರು ತಮ್ಮ ಮನದಿಷ್ಠಾರ್ಥಗಳನ್ನು ಈಡೇರಿಸುವಂತೆ ದೇವಿಗೆ ಹರಕೆ ಸಲ್ಲಿಸುವುದೂ ನಡೆದುಕೊಂಡು ಬಂದಿದೆ. 
icon

(9 / 10)

ವಿಶೇಷವಾಗಿ ನಡೆಯುವ ಮೈಸೂರು ಕರಗ ಉತ್ಸವವನ್ನು ಮೈಸೂರಿನವರು ಮಾತ್ರವಲ್ಲದೇ ಹೊರಗಿನಿಂದಲೂ ಭಕ್ತರು ಆಗಮಿಸುತ್ತಾರೆ.
icon

(10 / 10)

ವಿಶೇಷವಾಗಿ ನಡೆಯುವ ಮೈಸೂರು ಕರಗ ಉತ್ಸವವನ್ನು ಮೈಸೂರಿನವರು ಮಾತ್ರವಲ್ಲದೇ ಹೊರಗಿನಿಂದಲೂ ಭಕ್ತರು ಆಗಮಿಸುತ್ತಾರೆ.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು