Snow fall: ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಮಪಾತ: ವರ್ಷದ ಮೊದಲ ಹಿಮ ಹಿತ ಕ್ಷಣಗಳು ಹೀಗಿವೆ
- ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಲ ಶುರುವಾಯಿತೆಂದರೆ ಹಿಮಪಾತದ ಮಧುರ ಕ್ಷಣಗಳು ಶುರುವಾಗುತ್ತವೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಸಿಕ್ಕಿಂ ಸಹಿತ ಏಳೆಂಟು ರಾಜ್ಯಗಳಲ್ಲಿ ವರ್ಷದ ಹಿಮಪಾತ ಶುರುವಾಗಿದೆ. ಸ್ಥಳೀಯರು ಈ ಖುಷಿಯ ಕ್ಷಣಗಳನ್ನು ಅನುಭವಿಸಿದರೆ, ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಅಲ್ಲಿನ ಹಿಮ ಕ್ಷಣಗಳ ನೋಟ ಇಲ್ಲಿದೆ.

(1 / 7)
ಹಿಮಾಚಲ ಪ್ರದೇಶದಲ್ಲಿಯೇ ಅತ್ಯಧಿಕ ಹಿಮಪಾತ ಬೀಳುವಂತದ್ದು. ಈಗಾಗಲೇ ಈ ಬಾರಿಯ ಹಿಮಪಾತ ಹಲವು ಕಡೆ ಜೋರಾಗಿಯೇ ಇದೆ. ಹಿಮ ಹೊದ್ದ ಬೆಟ್ಟ, ರಸ್ತೆ, ವಾಹನ, ಮನೆಗಳ ಕ್ಷಣಗಳು ಎಲ್ಲೆಲ್ಲೂ ಕಾಣ ಸಿಗುತ್ತವೆ.
(2 / 7)
ಉತ್ತರಾಖಂಡದ ಪ್ರಸಿದ್ದ ತುಂಗನಾಥ ದೇಗುಲ ಪ್ರದೇಶ ಸಂಪೂರ್ಣ ಹಿಮದಿಂದ ತುಂಬಿ ಹೋಗಿದೆ. ಇಂತಹ ಹಲವಾರು ದೇಗುಲಗಳಿಗೂ ಈಗ ಹಿಮ ಹೊದ್ದ ಸಂದರ್ಭಗಳನ್ನು ಭಕ್ತರು, ಪ್ರವಾಸಿಗರು ಸವಿಯುತ್ತಾರೆ.
(3 / 7)
ಹಿಮಾಚಲ ಪ್ರದೇಶದ ಮನಾಲಿ ಸಮೀಪದ ಹೆದ್ದಾರಿ. ಹೆದ್ದಾರಿಯಿಂದ ಮುಂದೆ ಹಿಮಚ್ಛಾದಿತ ಬೆಟ್ಟಗಳ ಸಾಲು ಸಾಲು. ಅದರ ಮಧ್ಯೆ ಹಾದುವ ಹೋಗುವ ಕ್ಷಣಗಳು ಸ್ಮರಣೀಯ..
(4 / 7)
ಉತ್ತರಾಖಂಡದ ಬಹುಭಾಗದಲ್ಲಿ ಈಗ ಹಿಮಪಾತ ನೋಡುವ ವಿಶೇಷ ಕ್ಷಣ., ಹಿಮಾಚಲ ಪ್ರದೇಶವೊಂದರಲ್ಲಿ ಬಿದ್ದ ಹಿಮಪಾತದ ನಡುವೆಯೂ ಸೇನಾ ಸಿಬ್ಬಂದಿ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ.
(5 / 7)
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪ್ರದೇಶಗಳು ಅಧಿಕ. ಇಲ್ಲಿಯೂ ಹಿಮಪಾತ ಶುರುವಾಗಿದ್ದು. ಗಿಡಗಳ ಮೇಲೆಯೂ ಹಿಮಬಿದ್ದ ಸನ್ನಿವೇಶ ಹೀಗಿದೆ.
(6 / 7)
ಸಿಕ್ಕಿಂ ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಹಿಮಪಾತದ ಕ್ಷಣಗಳು. ಮನೆಗಳ ಮೇಲೆ ಬಿದ್ದ ಆ ಕ್ಷಣಗಳು ಬಿಳಿ ನೊರೆಯಂತೆ ಕಾಣುತ್ತದೆ. ಸಿಕ್ಕಿಂನ ಪುಟ್ಟ ಊರೊಂದರಲ್ಲಿ ಕಂಡು ಬಂದ ಹಿಮಪಾತದ ನೋಟ,
ಇತರ ಗ್ಯಾಲರಿಗಳು