ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಈ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ, ಅದೇನು ತಿಳಿಯೋಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಈ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ, ಅದೇನು ತಿಳಿಯೋಣ

ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಈ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ, ಅದೇನು ತಿಳಿಯೋಣ

ನವರಾತ್ರಿಯ 4ನೇ ದಿನ ದುರ್ಗಾದೇವಿಯ ಕೂಷ್ಮಾಂಡ ದೇವಿ ರೂಪವನ್ನು ಆರಾಧಿಸಲಾಗುತ್ತದೆ. ಈ ದೇವಿಗೆ ಅಷ್ಟಭುಜಾ ದೇವಿ ಎಂಬ ಇನ್ನೊಂದು ಹೆಸರಿದೆ. ಅಂದ ಹಾಗೆ ಈ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ. ಅದೇನು ಎಂಬ ವಿವರ ಇಲ್ಲಿದೆ.

ನವರಾತ್ರಿ ಉತ್ಸವದ ನಾಲ್ಕನೇ ದಿನವು ಕೂಷ್ಮಾಂಡಾ ದೇವಿಯ ಆರಾಧನೆಗೆ ಸಂಬಂಧಿಸಿದ್ದು. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯ ಆರಾಧನೆಯು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
icon

(1 / 7)

ಕೂಷ್ಮಾಂಡ ದೇವಿ ಯಾರು? ಹೆಸರನ್ನು ಗಮನಿಸುವುದಾದರೆ ಕು ಎಂದರೆ "ಸ್ವಲ್ಪ", ಉಷ್ಮಾ ಎಂದರೆ "ಉಷ್ಣತೆ" ಅಥವಾ "ಶಕ್ತಿ" ಮತ್ತು ಆಂಡಾ ಎಂದರೆ "ಮೊಟ್ಟೆ" ಎಂಬ ಉಲ್ಲೇಖವಿದೆ. ಕೂಷ್ಮಾಂಡ ಎಂದರೆ ಬೂದುಗುಂಬಳ, ಕುಮ್ಹದ ಎಂದೂ ಹೇಳುತ್ತಾರೆ. ಈ ಫಲ ಎಂದರೆ ಈ ದೇವಿಗೆ ಇಷ್ಟ. ಅದನ್ನು ಬಲಿಕೊಡುವ ಸಂಪ್ರದಾಯವಿದೆ. ಹೀಗೆ, ಬ್ರಹ್ಮಾಂಡ ಮತ್ತು ಕೂಷ್ಮಾಂಡ ಅವರೊಂದಿಗಿನ ಒಡನಾಟದಿಂದಾಗಿ ಆಕೆಯನ್ನು ಕೂಷ್ಮಾಂಡ ದೇವತೆ ಎನ್ನುತ್ತಾರೆ. ಈ ದೇವಿಯ ಆವಾಸಸ್ಥಾನ ಅನಾಹತ ಚಕ್ರದಲ್ಲಿದೆ.  
icon

(2 / 7)

ನವರಾತ್ರಿಯಲ್ಲಿ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ, ಆರಾಧಕನ ಎಲ್ಲ ರೋಗಗಳು, ದುಃಖಗಳು ಮತ್ತು ಭಯಗಳು ದೂರವಾಗುತ್ತವೆ. ಅವರು ದೇವಿಯ ಅನಂತ ಅನುಗ್ರಹ ಮತ್ತು ಬಯಸಿದ ವರವನ್ನು ಪಡೆಯುತ್ತಾರೆ ಎಂಬುದು ನಂಬಿಕೆ. ಜಪಮಾಲೆ, ತ್ರಿಶೂಲ, ಚಕ್ರ, ಖಡ್ಗ, ಕೊಕ್ಕೆ, ಗದೆ, ಬಿಲ್ಲು, ಬಾಣ ಮತ್ತು ಜೇನುತುಪ್ಪದ ಎರಡು ಜಾಡಿಗಳು ಮತ್ತು ರಕ್ತವನ್ನು ಹಿಡಿದಿರುವ ಎಂಟು ಕೈಗಳ ದೇವಿ. ಅಷ್ಟಭುಜ ದೇವಿ ಎಂದೂ ಹೇಳುತ್ತಾರೆ. 
icon

(3 / 7)

ಸೃಷ್ಟಿಗೆ ಜೀವ ಕೊಡುವವನು ಸೂರ್ಯ. ಆ ಸೂರ್ಯನ ಶಕ್ತಿಯ ಮೂಲ ಕೂಷ್ಮಾಂಡ ದೇವಿ. ದೇವಿ ಇಲ್ಲದೇ ಇದ್ದರೆ ಸೂರ್ಯನ ಬೆಳಕು ಮತ್ತು ಶಕ್ತಿಯು ಮಸುಕಾಗುತ್ತದೆ ಎಂಬುದು ಪುರಾಣ ಕಥೆಗಳಲ್ಲಿರುವ ಉಲ್ಲೇಖ. ಕೈಯಲ್ಲಿ ಜಪಮಾಲೆಯನ್ನು ಹಿಡಿದು, ಸಿಂಹದ ಮೇಲೆ ಸವಾರಿ ಮಾಡಿಕೊಂಡು ಬರುವ ಕೂಷ್ಮಾಂಡ ದೇವಿ ಮಂದ ಸ್ಮಿತ ವದನೆಯಾಗಿದ್ದು, ಭಕ್ತರಿಗೆ ಅಭಯ ನೀಡುವಂತಹ ದೇವಿಯಾಗಿ ಆರಾಧಿಸಲ್ಪಡುತ್ತಾಳೆ.
icon

(4 / 7)

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕೂಷ್ಮಾಂಡ ದುರ್ಗ ದೇವಸ್ಥಾನವನ್ನು 1780ರಲ್ಲಿ ಅಹಲ್ಯಾ ಬಾಯಿ ಹೋಳ್ಕರ್ ನಿರ್ಮಿಸಿದರು. ನವರಾತ್ರಿ ವೇಳೆ ಇಲ್ಲಿ ದೇವಿಯ ಆರಾಧನೆ ವಿಶೇಷ.
icon

(5 / 7)

ಕೂಷ್ಮಾಂಡ ದೇವಿಗೆ ಸಿಂಧೂರ, ಹೂವುಗಳು, ಹೂ ಮಾಲೆಗಳು, ಅಕ್ಷತೆ ಇತ್ಯಾದಿಗಳನ್ನು ಅರ್ಪಿಸುವುದು ವಾಡಿಕೆ. ಇದಾದ ನಂತರ ತುಪ್ಪದ ದೀಪ ಮತ್ತು ಧೂಪವನ್ನು ಬೆಳಗಿಸಿ, ತಾಯಿಯ ಮಂತ್ರವನ್ನು 108 ಬಾರಿ ಜಪಿಸುತ್ತಾರೆ. ಅದೇ ರೀತಿ ಸಾಧ್ಯವಿರುವವರು ದುರ್ಗಾ ಸಪ್ತಶತಿಯನ್ನು ಸರಿಯಾಗಿ ಪಠಿಸಿ ಮತ್ತು ದುರ್ಗಾ ಚಾಲೀಸಾವನ್ನು ಕಡ್ಡಾಯವಾಗಿ ಪಠಿಸುತ್ತಾರೆ. ತಾಯಿಯನ್ನು ಈ ರೀತಿ ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತ ಜನರ ನಂಬಿಕೆ.
icon

(6 / 7)

ಕೂಷ್ಮಾಂಡ ದೇವಿಯ ಪ್ರಾರ್ಥನಾ ಮಂತ್ರ ಹೀಗಿದೆ 'ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ ।ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ॥
icon

(7 / 7)

ಇತರ ಗ್ಯಾಲರಿಗಳು