ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು, ಈ ತಾಯಿಯ ಇನ್ನೊಂದು ಹೆಸರು ಗೆಸ್‌ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು, ಈ ತಾಯಿಯ ಇನ್ನೊಂದು ಹೆಸರು ಗೆಸ್‌ ಮಾಡಿ

ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು, ಈ ತಾಯಿಯ ಇನ್ನೊಂದು ಹೆಸರು ಗೆಸ್‌ ಮಾಡಿ

ನವರಾತ್ರಿಯ ಮೂರನೇ ದಿನ ದುರ್ಗೆಯ ಇನ್ನೊಂದು ಅವತಾರವನ್ನು ಪೂಜಿಸಲಾಗುತ್ತದೆ. ಚಂದ್ರಘಂಟಾ ದೇವಿ ಎಂಬ ಹೆಸರಿನ ರೂಪ ಇದಾಗಿದ್ದು, 10 ತೋಳುಗಳ ಈ ದೇವಿಗೆ ಬಹಳ ಮಹತ್ವ ಇದೆ. ಈ ದೇವಿಗೆ ಇನ್ನೊಂದು ಪ್ರಸಿದ್ಧ ಜನಪ್ರಿಯ ಹೆಸರಿದೆ. ಅದೇನು ಅಂತ ಗೆಸ್ ಮಾಡುತ್ತ ಈ ವಿವರ ಗಮನಿಸಿ..

ತಾಯಿ ದುರ್ಗೆಯ ಶಾಂತ ಮತ್ತು ಪ್ರಯೋಜನಕಾರಿ ರೂಪ. ಆಕೆಯ ಹಣೆಯ ಮೇಲೆ ಗಂಟೆ ಮತ್ತು ಅರ್ಧಚಂದ್ರಾಕಾರಾ ಇರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ದೇವಿಯ ಶರೀರವು ಚಿನ್ನದಂತೆ ಪ್ರಕಾಶಮಾನವಾಗಿದ್ದು, ಸಿಂಹದ ಮೇಲೆ ಸವಾರಿ ಮಾಡುತ್ತಾಳೆ.
icon

(1 / 10)

ತನ್ನ ಎಡಭಾಗದ ಕಡೆಗೆ, ಅವಳು ತನ್ನ ನಾಲ್ಕು ಕೈಗಳಲ್ಲಿ ಗದೆ, ಕತ್ತಿ, ತ್ರಿಶೂಲ ಮತ್ತು ಕಮಂಡಲವನ್ನು ಹಿಡಿದು ಕೊಂಡಿದ್ದಾಳೆ ಮತ್ತು ಐದನೆಯ ಕೈ ತನ್ನ ಭಕ್ತರನ್ನು ಆಶೀರ್ವದಿಸಲು ಮೇಲೆತ್ತಿಕೊಂಡಿದೆ. ಅವಳ ಬಲಭಾಗದಲ್ಲಿ, ಅವಳು ಬಾಣ, ಬಿಲ್ಲು, ಜಪಮಾಲೆಯನ್ನು ಹೊಂದಿದ್ದಾಳೆ ಮತ್ತು ಹತ್ತನೇ ಕೈಯನ್ನು ಅವಳ ಆರಾಧಕರಿಗೆ ಅಭಯ ನೀಡುವಂತೆ ಇದೆ.
icon

(2 / 10)

ಅವಳು ಸಿಂಹದ ಮೇಲೆ ನಾಜೂಕಾಗಿ ಕುಳಿತ ಆಕೆಯ ಭಂಗಿಯು ಭಕ್ತರ ದುಃಖಗಳನ್ನು ಸಾಧ್ಯವಾದಷ್ಟು ಬೇಗ ನಿವಾರಿಸಲು ರಾಕ್ಷಸರೊಂದಿಗೆ (ಸಾಂಕೇತಿಕವಾಗಿ ಮನುಷ್ಯರೊಳಗಿನ ದುಷ್ಟ ಮತ್ತು ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ದುಷ್ಕೃತ್ಯಗಳು) ಯುದ್ಧಕ್ಕೆ ಸಿದ್ಧವಾಗಿರುವುದನ್ನು ಸೂಚಿಸುತ್ತದೆ. ಅವಳ ಆರಾಧಕನು ಅವಳ ವಾಹಕ ಸಿಂಹದಂತೆ ನಿರ್ಭೀತ ಮತ್ತು ಬಲಶಾಲಿಯಾಗುತ್ತಾನೆ ಎಂಬ ನಂಬಿಕೆ ಭಕ್ತರದ್ದು. 
icon

(3 / 10)

ಧಾರ್ಮಿಕ ಗ್ರಂಥಗಳ ಪ್ರಕಾರ, ಚಂದ್ರಘಂಟಾ ದೇವಿಯು ರಾಕ್ಷಸರನ್ನು ಕೊಲ್ಲಲು ಅವತರಿಸಿದವಳು. ಬ್ರಹ್ಮ, ವಿಷ್ಣು ಮತ್ತು ಮಹೇಶರಿಂದ ಆಶೀರ್ವಾದ ಪಡೆದು, ಅವರು ಕೊಟ್ಟ ಆಯುಧಗಳನ್ನು ಹಿಡಿದು ಸಮರಕ್ಕೆ ಹೊರಟವಳು. ಕೈಯಲ್ಲಿ ಖಡ್ಗ, ತ್ರಿಶೂಲ, ಬಿಲ್ಲು ಮತ್ತು ಗದೆ ಹಿಡಿದಿದ್ದಾಳೆ. ಅವಳ ಹಣೆಯ ಮೇಲೆ ಅರ್ಧಚಂದ್ರನು ಗಂಟೆಯ ಆಕಾರದಲ್ಲಿ ಕುಳಿತಿದ್ದಾನೆ. ಭಕ್ತರಿಗೆ ಅಭಯ ನೀಡುವ ರೂಪ ಇದು. 
icon

(4 / 10)

ಈ 10 ತೋಳುಗಳ ದೇವಿಯು, ವಿವಿಧ ಆಯಧಗಳನ್ನು ಕೈಗಳಲ್ಲಿ ಹಿಡಿದುಕೊಂಡಿದ್ದು, ಸಮರ ಸನ್ನದ್ಧಳಂತೆ ಕಾಣುತ್ತಾಳೆ. ಈಕೆಗೆ ರಣಚಂಡಿ ಎಂಬ ಹೆಸರೂ ಇದೆ. 
icon

(5 / 10)

ಭಕ್ತರು ಚಂದ್ರಘಂಟಾ ದೇವಿಯಲ್ಲಿ ಅವರ ನಂಬಿಕೆಯ ಪರಿಣಾಮ ಧೈರ್ಯವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಸ್ವಾವಲಂಬಿಗಳು, ಸೌಮ್ಯತೆ ಮತ್ತು ವಿನಮ್ರರಾಗುತ್ತಾರೆ ಎಂಬ ನಂಬಿಕೆ ಇದೆ. ಅದೃಷ್ಟವನ್ನು ಒದಗಿಸುವ ಮತ್ತು  ಶೈಲಪುತ್ರಿಯ ಆಳ್ವಿಕೆಯಲ್ಲಿರುವ ಚಂದ್ರನ ಕೆಟ್ಟ ಪರಿಣಾಮವನ್ನು ತೆಗೆದುಹಾಕಲು ಆದಿ ಶಕ್ತಿಯ ಈ ರೂಪವನ್ನು ಪ್ರಾರ್ಥಿಸಬೇಕು ಎನ್ನುತ್ತಾರೆ ತಿಳಿದವರು. 
icon

(6 / 10)

ಚಂದ್ರಘಂಟಾ ದೇವಿಯನ್ನು ಪೂಜಿಸುವವರ ಮುಖ ಮತ್ತು ಕಣ್ಣುಗಳು ಮತ್ತು ಅವರ ಸಂಪೂರ್ಣ ದೇಹವು ಪ್ರಕಾಶಮಾನವಾಗಿರುತ್ತದೆ. ಅವರ ಧ್ವನಿಯಲ್ಲಿ ದಿವ್ಯ ಮಧುರ ಭಾವವಿದೆ. ಚಂದ್ರಘಂಟಾ ದೇವಿಯ ಆರಾಧಕರು ಎಲ್ಲಿಗೆ ಹೋದರೂ, ಅವರು ಸಂತೋಷವನ್ನು ಹರಡುತ್ತಾರೆ ಎಂಬ ನಂಬಿಕೆ ಇದೆ
icon

(7 / 10)

ಹಿಂದೂ ಪುರಾಣಗಳ ಪ್ರಕಾರ, ಶುಕ್ರನನ್ನು ಚಂದ್ರಘಂಟಾ ದೇವಿಯು ಆಳುತ್ತಾಳೆ. ಆದ್ದರಿಂದ ಚಂದ್ರಘಂಟಾ ದೇವಿಯನ್ನು ಪೂಜಿಸುವ ಮೂಲಕ ಭಕ್ತನು ಶುಕ್ರ ಗ್ರಹದ ಎಲ್ಲಾ ಸಕಾರಾತ್ಮಕ ಪರಿಣಾಮಗಳನ್ನು ಮತ್ತು ಶುಭ ಫಲಗಳನ್ನು ಪಡೆಯುತ್ತಾರೆ ಎಂಬುದು ನಂಬಿಕೆ.
icon

(8 / 10)

ನವರಾತ್ರಿಯ ಮೂರನೇ ದಿನ, ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ, ಪೂಜಾ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ. ನಂತರ ತಾಯಿ ಚಂದ್ರಘಂಟಾ ದೇವಿಯನ್ನು ಧ್ಯಾನಿಸಿ ಅವಳ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ. ಅಕ್ಷತೆ, ಸಿಂಧೂರ, ಹೂವು ಇತ್ಯಾದಿಗಳನ್ನು ಅರ್ಪಿಸಿ. ತಾಯಿ ಸಂತುಷ್ಟವಾಗುವಂತೆ ಆರಾಧಿಸಿ. ಹಣ್ಣುಗಳು ಮತ್ತು ಕೇಸರಿ-ಹಾಲಿನ ಸಿಹಿತಿಂಡಿಗಳು ಅಥವಾ ಖೀರ್ ಅನ್ನು ಪ್ರಸಾದವಾಗಿ ನೈವೇದ್ಯ ಮಾಡಬೇಕು. ನಂತರ ಮಾ ಚಂದ್ರಘಂಟಾ ದೇವಿಗೆ ಆರತಿಯನ್ನು ಮಾಡಬೇಕು.
icon

(9 / 10)

ಚಂದ್ರಘಂಟಾ ದೇವಿಯನ್ನು ಪ್ರಾರ್ಥಿಸುವುದಕ್ಕಾಗಿ ಹೇಳಬೇಕಾದ ಮಂತ್ರ ಇದು: ಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ ।ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ॥
icon

(10 / 10)

ಇತರ ಗ್ಯಾಲರಿಗಳು