ಅರ್ಷದ್ ಕೂಡಾ ನಮ್ಮ ಮಗನಂತೆಯೇ; ಪಾಕಿಸ್ತಾನ ಆಟಗಾರನ ಚಿನ್ನ ಗೆಲುವಿಗೆ ಖುಷಿಪಟ್ಟ ನೀರಜ್ ಚೋಪ್ರಾ ತಾಯಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅರ್ಷದ್ ಕೂಡಾ ನಮ್ಮ ಮಗನಂತೆಯೇ; ಪಾಕಿಸ್ತಾನ ಆಟಗಾರನ ಚಿನ್ನ ಗೆಲುವಿಗೆ ಖುಷಿಪಟ್ಟ ನೀರಜ್ ಚೋಪ್ರಾ ತಾಯಿ

ಅರ್ಷದ್ ಕೂಡಾ ನಮ್ಮ ಮಗನಂತೆಯೇ; ಪಾಕಿಸ್ತಾನ ಆಟಗಾರನ ಚಿನ್ನ ಗೆಲುವಿಗೆ ಖುಷಿಪಟ್ಟ ನೀರಜ್ ಚೋಪ್ರಾ ತಾಯಿ

  • ಪ್ಯಾರಿಸ್ ಒಲಿಂಪಿಕ್ಸ್‌ ಪುರುಷರ ಜಾವೆಲಿನ್ ಥ್ರೋ ಫೈನಲ್‌ ಪಂದ್ಯದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರು. ಮಗನ ಸಾಧನೆಗೆ ನೀರಜ್‌ ಕುಟುಂಬವು ಸಂತೋಷವಾಗಿದೆ ಎಂದು ನೀರಜ್‌ ತಾಯಿ ಸರೋಜ್ ದೇವಿ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಟಗಾರನ ಗೆಲುವು ಕೂಡಾ ಖುಷಿ ಕೊಟ್ಟಿದೆ ಎಂದು ಅವರು ಹೇಳಿದರು.

ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟ ಕೀರ್ತಿ ನೀರಜ್ ಚೋಪ್ರಾ ಅವರದ್ದು. 89.45 ಮೀಟರ್ ದೂರ ಜಾವೆಲಿನ್‌ ಎಸೆಯುವ ಮೂಲಕ, ಅವರು ಟೋಲಿಯೊ ಒಲಿಂಪಿಕ್ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ, ರಜತ ಪದಕ ಸಿಕ್ಕಿತು.
icon

(1 / 5)

ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದುಕೊಟ್ಟ ಕೀರ್ತಿ ನೀರಜ್ ಚೋಪ್ರಾ ಅವರದ್ದು. 89.45 ಮೀಟರ್ ದೂರ ಜಾವೆಲಿನ್‌ ಎಸೆಯುವ ಮೂಲಕ, ಅವರು ಟೋಲಿಯೊ ಒಲಿಂಪಿಕ್ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ, ರಜತ ಪದಕ ಸಿಕ್ಕಿತು.(AFP)

ಅತ್ತ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದರು. ನದೀಮ್ 92.97 ಮೀಟರ್ ದೂರ ಎಸೆದು ಚಿನ್ನ ಗೆಲುವು ಸಾಧಿಸಿದರು. ಇದೇ ವೇಳೆ ಇದು ನೂತನ ಒಲಿಂಪಿಕ್ಸ್‌ ದಾಖಲೆಗೆ ಕಾರಣವಾಯ್ತು.
icon

(2 / 5)

ಅತ್ತ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದರು. ನದೀಮ್ 92.97 ಮೀಟರ್ ದೂರ ಎಸೆದು ಚಿನ್ನ ಗೆಲುವು ಸಾಧಿಸಿದರು. ಇದೇ ವೇಳೆ ಇದು ನೂತನ ಒಲಿಂಪಿಕ್ಸ್‌ ದಾಖಲೆಗೆ ಕಾರಣವಾಯ್ತು.(AFP)

ಮಗನ ಬೆಳ್ಳಿ ಗೆಲುವಿನ ಕುರಿತಾಗಿ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಸುದ್ದಿ ಸಂಸ್ಥೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಮಗ ನೀಡಿದ ಪ್ರದರ್ಶನದಿಂದ ಸಂತೋಷವಾಗಿದೆ. ಅವನು ಭಾರತಕ್ಕೆ ಹಿಂದಿರುಗಿದ ನಂತರ ಮಗನಿಗೆ ಇಷ್ಟದ ಆಹಾರ ಉಣಬಡಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
icon

(3 / 5)

ಮಗನ ಬೆಳ್ಳಿ ಗೆಲುವಿನ ಕುರಿತಾಗಿ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಸುದ್ದಿ ಸಂಸ್ಥೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಮಗ ನೀಡಿದ ಪ್ರದರ್ಶನದಿಂದ ಸಂತೋಷವಾಗಿದೆ. ಅವನು ಭಾರತಕ್ಕೆ ಹಿಂದಿರುಗಿದ ನಂತರ ಮಗನಿಗೆ ಇಷ್ಟದ ಆಹಾರ ಉಣಬಡಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಅರ್ಷದ್ ನದೀಮ್ ಅವರ ಪ್ರದರ್ಶನವನ್ನು ಶ್ಲಾಘಿಸಿದ ಅವರು, ಅವರು ಕೂಡ ತಮ್ಮ ಮಗನಂತೆ ಎಂದು ಹೇಳಿದರು. "ನೀರಜ್‌ ಪ್ರದರ್ಶನದಿಂದ ನಮಗೆ ತುಂಬಾ ಸಂತೋಷವಾಗಿದೆ. ನಮಗೆ ಬೆಳ್ಳಿ ಕೂಡ ಚಿನ್ನಕ್ಕೆ ಸಮಾನವಾಗಿದೆ. ಚಿನ್ನ ಪಡೆದ ಅರ್ಷದ್ ನದೀಮ್ ಕೂಡ ನಮ್ಮ ಮಗನಿದ್ದಂತೆ" ಎಂದು ಸೊರೋಜ್ ದೇವಿ ಹೇಳಿದ್ದರು.
icon

(4 / 5)

ಇದೇ ವೇಳೆ ಅರ್ಷದ್ ನದೀಮ್ ಅವರ ಪ್ರದರ್ಶನವನ್ನು ಶ್ಲಾಘಿಸಿದ ಅವರು, ಅವರು ಕೂಡ ತಮ್ಮ ಮಗನಂತೆ ಎಂದು ಹೇಳಿದರು. "ನೀರಜ್‌ ಪ್ರದರ್ಶನದಿಂದ ನಮಗೆ ತುಂಬಾ ಸಂತೋಷವಾಗಿದೆ. ನಮಗೆ ಬೆಳ್ಳಿ ಕೂಡ ಚಿನ್ನಕ್ಕೆ ಸಮಾನವಾಗಿದೆ. ಚಿನ್ನ ಪಡೆದ ಅರ್ಷದ್ ನದೀಮ್ ಕೂಡ ನಮ್ಮ ಮಗನಿದ್ದಂತೆ" ಎಂದು ಸೊರೋಜ್ ದೇವಿ ಹೇಳಿದ್ದರು.(PTI)

ನೀರಜ್ ಚೋಪ್ರಾ ತಂದೆ ಸತೀಶ್ ಕುಮಾರ್ ಮಾತನಾಡಿ, "ನೀರಜ್‌ ದೇಶಕ್ಕಾಗಿ ಬೆಳ್ಳಿ ಗೆದ್ದಿದ್ದಾರೆ. ನಾವು ಸಂತೋಷ ಮತ್ತು ಹೆಮ್ಮೆಪಡುತ್ತೇವೆ. ಎಲ್ಲಾ ಯುವಕರು ಅವರಿಂದ ಸ್ಫೂರ್ತಿ ಪಡೆಯುತ್ತಾರೆ" ಎಂದು ಹೇಳಿದ್ದಾರೆ.
icon

(5 / 5)

ನೀರಜ್ ಚೋಪ್ರಾ ತಂದೆ ಸತೀಶ್ ಕುಮಾರ್ ಮಾತನಾಡಿ, "ನೀರಜ್‌ ದೇಶಕ್ಕಾಗಿ ಬೆಳ್ಳಿ ಗೆದ್ದಿದ್ದಾರೆ. ನಾವು ಸಂತೋಷ ಮತ್ತು ಹೆಮ್ಮೆಪಡುತ್ತೇವೆ. ಎಲ್ಲಾ ಯುವಕರು ಅವರಿಂದ ಸ್ಫೂರ್ತಿ ಪಡೆಯುತ್ತಾರೆ" ಎಂದು ಹೇಳಿದ್ದಾರೆ.(PTI)


ಇತರ ಗ್ಯಾಲರಿಗಳು