Lucky Zodiac Signs: ಲಾಟರಿ ಹೊಡಿಯೋ ಚಾನ್ಸ್ ಹೊಂದಿರುವ 5 ರಾಶಿಗಳಿವು; ಅದೃಷ್ಟ ಈ ರಾಶಿಯವರ ಬೆನ್ನಹಿಂದೆ ಇರೋದು ಸುಳ್ಳಲ್ಲ
- ಲಾಟರಿ ಹೊಡಿಯೋದು ಯಾರಿಗಿಷ್ಟ ಇಲ್ಲ ಹೇಳಿ, ಕೆಲವೊಮ್ಮೆ ಲಾಟರಿ ಬದುಕನ್ನೇ ಬದಲಿಸಬಹುದು. ಆದ್ರೆ ಎಲ್ರಿಗೂ ಲಾಟರಿ ಹೊಡೆಯೋಕೆ ಸಾಧ್ಯಾನೂ ಇಲ್ಲ. ಇದೊಂದು ಚಾನ್ಸ್ ಅಷ್ಟೇ. ಆದ್ರೆ ಕೆಲವು ರಾಶಿಚಕ್ರದವರಿಗೆ ಈ ಅದೃಷ್ಟ ಒಲಿಯುತ್ತೆ ಅನ್ನುತ್ತೆ ಜ್ಯೋತಿಷ್ಯಶಾಸ್ತ್ರ. ಈ 5 ರಾಶಿಯವರಿಗೆ ಲಾಟರಿ ಹೊಡೆಯುವ ಸಂಭವ ಹೆಚ್ಚಂತೆ. ಹಾಗಾದ್ರೆ ಆ ರಾಶಿಯವರು ಯಾರು ಎಂದು ತಿಳಿಯೋಣ.

(1 / 5)
ಮೇಷ (ಮಾರ್ಚ್ 21 ರಿಂದ ಏಪ್ರಿಲ್ 19ರ ನಡುವೆ ಜನಿಸಿದವರು) ಮೇಷ ರಾಶಿಯವರು ಕ್ರಿಯಾತ್ಮಕ ಮನೋಭಾವದವರು. ಇವರು ಸಾಹಸಮಯ ಪ್ರವೃತ್ತಿ ಹೊಂದಿರುತ್ತಾರೆ. ಈ ರಾಶಿಯವರು ಬಯಸಿದ್ದನ್ನು ಪಡೆಯುವ ಲಕ್ಷಣ ಹೊಂದಿದ್ದಾರೆ. ಇವರ ಸ್ಪರ್ಧಾತ್ಮಕ ಗುಣ, ಆಗಿದ್ದು ಆಗಲಿ ಎನ್ನುವ ಸ್ವಭಾವ ಲಾಟರಿ ಹೊಡೆಯುವಂತೆ ಮಾಡಬಹುದು. ಇವರ ಈ ಗುಣವು ಆಗಾಗ್ಗೆ ಧನಾತ್ಮಕ ಫಲಿತಾಂಶ ದೊರೆಯುವಂತೆ ಮಾಡುತ್ತದೆ. ಮೇಷ ರಾಶಿಯ ಧೈರ್ಯ ಮತ್ತು ಆಶಾವಾದವು ಲಾಟರಿ ಆಟಗಳಲ್ಲಿ ಅವರ ಅದೃಷ್ಟವನ್ನು ಹೆಚ್ಚಿಸುತ್ತದೆ.
(2 / 5)
ಸಿಂಹ ರಾಶಿ (ಜುಲೈ 23 ರಿಂದ ಆಗಸ್ಟ್ 22)ಇವರದು ಒಂದು ರೀತಿಯ ತೇಜಸ್ಸಿನ ವ್ಯಕ್ತಿತ್ವ. ಇವರು ಧನಾತ್ಮಕ ಮನೋಭಾವ ಹೊಂದಿರುತ್ತಾರೆ. ಇದು ಇವರಿಗೆ ಅದೃಷ್ಟದ ಅವಕಾಶಗಳು ಹುಡುಕಿ ಬರುವಂತೆ ಮಾಡುತ್ತದೆ. ಸ್ವಯಂ ಭರವಸೆ ಹಾಗೂ ನಂಬಿಕೆಯು ಧನಾತ್ಮಕ ಮನಸ್ಥಿತಿಯ ಸೃಷ್ಟಿಗೆ ಕಾರಣವಾಗುತ್ತದೆ. ಇದು ಲಾಟರಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
(3 / 5)
3. ಧನು ರಾಶಿ (ನವೆಂಬರ್ 22 - ಡಿಸೆಂಬರ್ 21)ಧನು ರಾಶಿಯವರ ಸಾಹಸಮಯ ಮತ್ತು ಆಶಾವಾದಿ ಮನೋಭಾವವು, ಜೀವನದ ವಿವಿಧ ಅಂಶಗಳಲ್ಲಿ ಅದೃಷ್ಟಶಾಲಿಯಂತೆ ನೆರವಿಗೆ ಬರುತ್ತವೆ. ಇವರ ಮುಕ್ತ ಮನೋಭಾವ ಹಾಗೂ ವಿಶಾಲ ಸ್ವಭಾವವು ಲಾಟರಿ ಹೊಡೆಯುವುದು ಸೇರಿದಂತೆ ಹಲವು ಅದೃಷ್ಟದ ಅವಕಾಶ ಸಿಗುವಂತೆ ಮಾಡುತ್ತದೆ.
(4 / 5)
4. ವೃಷಭ ರಾಶಿ (ಏಪ್ರಿಲ್ 20 - ಮೇ 20)ವೃಷಭ ರಾಶಿಯವರು ವಿಶ್ವಾಸಾರ್ಹ ಮತ್ತು ತಾಳ್ಮೆಯ ಗುಣವನ್ನು ಹೊಂದಿರುತ್ತಾರೆ, ಇವರ ಜೀವನಸಾಹಸಮಯವಾಗಿದ್ದರೂ ಅದೃಷ್ಟ ಇವರ ಬೆನ್ನ ಹಿಂದಿರುತ್ತದೆ. ಇವರ ಕಾರ್ಯತಂತ್ರದ ಆಯ್ಕೆಗಳು ಬದುಕಿನಲ್ಲಿ ಅದೃಷ್ಟ ಹುಡುಕಿ ಬರುವಂತೆ ಸಹಕರಿಸುತ್ತದೆ. ತಾಳ್ಮೆ ಕೂಡ ಇವರ ಗೆಲುವಿಗೆ ಕಾರಣವಾಗಬಹುದು.
ಇತರ ಗ್ಯಾಲರಿಗಳು