ನಾನು ಮಾತಾಡಲ್ಲ, ಶಿವಣ್ಣ ದೊಡ್ಡೋರು, ಅವರು ಮಾತಾಡ್ಲಿ; ಕಾವೇರಿ ಹೋರಾಟದಲ್ಲಿ ದರ್ಶನ್ ದೊಡ್ಡತನ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾನು ಮಾತಾಡಲ್ಲ, ಶಿವಣ್ಣ ದೊಡ್ಡೋರು, ಅವರು ಮಾತಾಡ್ಲಿ; ಕಾವೇರಿ ಹೋರಾಟದಲ್ಲಿ ದರ್ಶನ್ ದೊಡ್ಡತನ Photos

ನಾನು ಮಾತಾಡಲ್ಲ, ಶಿವಣ್ಣ ದೊಡ್ಡೋರು, ಅವರು ಮಾತಾಡ್ಲಿ; ಕಾವೇರಿ ಹೋರಾಟದಲ್ಲಿ ದರ್ಶನ್ ದೊಡ್ಡತನ PHOTOS

  • Kannada Film industry: ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಬೆಂಬಲ ಸೂಚಿಸಿದೆ. ಇಂದು (ಸೆ. 29) ನಡೆದ ಬೃಹತ್‌ ಹೋರಾಟದ ವೇದಿಕೆಯಲ್ಲಿ ಕಾವೇರಿ ನಮ್ಮದು ಎಂಬ ಘೋಷಣೆ ಮತ್ತೆ ಮೊಳಗಿದೆ. ನಟ ಶಿವರಾಜ್‌ಕುಮಾರ್‌, ದರ್ಶನ್‌, ಧ್ರುವ ಸರ್ಜಾ, ವಸಷ್ಠ ಸಿಂಹ ಸೇರಿ ಚಿತ್ರರಂಗದ ಹಿರಿ ಕಿರಿ ಕಲಾವಿದರು, ತಂತ್ರಜ್ಞರು ಭಾಗವಹಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಮುಂದಿನ ಎರಡು ವಾರಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಕರ್ನಾಟಕಕ್ಕೆ ಶಾಕ್‌ ನೀಡಿದೆ. 
icon

(1 / 10)

ಈ ಕಾವೇರಿ ಹೋರಾಟಕ್ಕೆ ಈಗಾಗಲೇ ಕರ್ನಾಟಕದ ಕನ್ನಡ ಪರ ಸಂಘಟನೆಗಳು ಧುಮುಕಿವೆ. ರಾಜ್ಯಾದ್ಯಂತ ಪ್ರತಿಭಟನೆಯ ಕಾವೂ ಜೋರಾಗಿದೆ. 
icon

(2 / 10)

ಶುಕ್ರವಾರ ಹಲವು ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಅದಾದ ಬಳಿಕ ಇಂದು (ಸೆ. 29) ಕರ್ನಾಟಕ ಬಂದ್‌ ಮಾಡಲಾಗಿದೆ. 
icon

(3 / 10)

ಈ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮ ಮತ್ತು ಕಿರುತೆರೆಯಿಂದಲೂ ಬೆಂಬಲ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಶೂಟಿಂಗ್‌, ಸಿನಿಮಾ ಪ್ರದರ್ಶನವನ್ನೂ ರದ್ದು ಪಡಿಸಲಾಗಿತ್ತು.  
icon

(4 / 10)

ಇತ್ತ ಇದೇ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಸಿನಿಮಾ ಮಂದಿಯೂ ಸಾಥ್‌ ನೀಡಿ ಬೆಂಬಲ ಸೂಚಿಸಿ ಕಾವೇರಿ ನಮ್ಮದು ಎಂದು ಒಕ್ಕೊರಲ ಧ್ವನಿ ಸೇರಿಸಿದ್ದಾರೆ. 
icon

(5 / 10)

ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ನಡೆದ ಕಾವೇರಿ ಹೋರಾಟಕ್ಕೆ ಚಿತ್ರೋದ್ಯಮದ ಬೆಂಬಲ ಹೋರಾಟದಲ್ಲಿ  ದರ್ಶನ್‌, ಧ್ರುವ ಸರ್ಜಾ, ವಸಷ್ಠ ಸಿಂಹ ಸೇರಿ ಚಿತ್ರರಂಗದ ಹಿರಿ ಕಿರಿ ಕಲಾವಿದರು, ತಂತ್ರಜ್ಞರು ಭಾಗವಹಿಸಿ ಬೆಂಬಲ ನೀಡಿದರು. 
icon

(6 / 10)

ಇದೇ ವೇಳೆ ಈ ಹೋರಾಟದ ಬಗ್ಗೆ ಮಾತನಾಡುವಂತೆ, ಮೊದಲು ದರ್ಶನ್‌ ಅವರನ್ನು ಕರೆಯಲಾಯಿತು. ಆಗ ದರ್ಶನ್‌ ನಯವಾಗಿಯೇ ನಾನು ಮಾತನಾಡಲಾರೆ ಎಂದರು. 
icon

(7 / 10)

ಮಗದೊಮ್ಮೆ ದರ್ಶನ್‌ ಅವರನ್ನು ಕರೆಯುತ್ತಿದ್ದಂತೆ, ಮೈಕ್‌ ಹಿಡಿದು ಮಾತನಾಡಿದ ದರ್ಶನ್‌, ನಾನು ಮಾತನಾಡಲ್ಲ. ಶಿವಣ್ಣ ದೊಡ್ಡೋರು, ಅವರು ಮಾತಾಡ್ಲಿ ಎಂದು ಹೇಳಿದ್ದಾರೆ. 
icon

(8 / 10)

ಇದಕ್ಕೂ ಮೊದಲು ದರ್ಶನ್‌ ಆಗಮಿಸುತ್ತಿದ್ದಂತೆ, ಶಿವಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಜೋಡಿಯ ವಿಶೇಷ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಮೆಚ್ಚುಗೆ ಪಡೆದವು. 
icon

(9 / 10)

ದರ್ಶನ್‌ ಅಭಿಮಾನಿಗಳು ಮತ್ತು ಶಿವಣ್ಣ ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. 
icon

(10 / 10)

ಇತರ ಗ್ಯಾಲರಿಗಳು